ಮೀರಾಳ ರು.20 ಲಕ್ಷ ಬೆಲೆಬಾಳುವ ಗಿಫ್ಟ್ ಕಳುವು
ಪಾಕಿಸ್ತಾನಿ ಸಿನಿಮಾ ತಾರೆ ಮೀರಾಳ ಬೆಲೆಬಾಳುವ ನಿಶ್ಚಿತಾರ್ಥದ ಕೈಗಡಿಯಾರ ನಾಪತ್ತೆಯಾಗಿದೆ. ಇತ್ತೀಚೆಗಷ್ಟೇ ಆಕೆಯ ಭಾವಿ ಪತಿ ಇದನ್ನು ಮೀರಾಳಿಗೆ ನಿಶ್ಚಿತಾರ್ಥದ ಸವಿನೆನಪಿಗಾಗಿ ಈ ವಾಚನ್ನು ನೀಡಿದ್ದ. ಅಷ್ಟೇ ಅಕ್ಕರೆಯಿಂದ ಕಳ್ಳ ಅದನ್ನು ಎಗರಿಸಿಕೊಂಡು ಹೋಗಿದ್ದಾನೆ.
ಲಾಹೋರ್‌ನಲ್ಲಿ ಈ ನಿಶ್ಚಿತಾರ್ಥದ ವಾಚ್ ಕಳುವಾಗಿದೆ. ಇದರ ಬೆಲೆ ಸರಿ ಸುಮಾರು ರು.2೦ ಲಕ್ಷ ಎನ್ನಲಾಗಿದೆ. ಪಾಕಿಸ್ತಾನ ಹಾಗೂ ಅಮೆರಿಕಾದ ಪೈಲಟ್ ನವೀದ್ ಷಾಜದ್ ಜೊತೆ ಮೀರಾ ನಿಶ್ಚಿತಾರ್ಥ ನೆರವೇರಿತ್ತು.
ಈ ಸಂಬಂಧ ನಟಿಯ ಪರವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಇದೇ ವರ್ಷಾಂತ್ಯಕ್ಕೆ ಮೀರಾ ಮತ್ತು ನವೀದ್ ಮದುವೆ ನೆರವೇರಲಿದೆ. ಕೈಗಡಿಯಾರ ಲಾಹೋರಿನ ತಮ್ಮ ಮನೆಯಿಂದಲೇ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)
English summary
Pakistani actress Meera's worth Rs. 2 million engagement gift for fiance has been stolen from her house in Lahore. The actress, who recently announced her engagement to Pakistani-American pilot Naveed Shahzad.


Click it and Unblock the Notifications