ಮುಂಬೈಗೆ ಬಿಕಿನಿಯಲ್ಲೇ ಬಂದಿಳಿದ ಪ್ಯಾರಿಸ್ ಹಿಲ್ಟನ್

ಭಾರತಕ್ಕೆ ಬರುವಾಗಲೂ ಒಂಚೂರು ಬಟ್ಟೆ ಬರೆ ಹಾಕಿಕೊಂಡು ಬರುತ್ತಾರೆ ಎಂದುಕೊಂಡಿದ್ದವರು ಹಿಲ್ಟನ್‌ರನ್ನು ನೋಡಿ ಇಂಗು ತಿಂದ ಮಂಗಗಳಂತಾದರು. ನೀಲಿ ಬಣ್ಣದ ಬಿಕಿನಿ ತೊಟ್ಟು ಕಪ್ಪುಕನ್ನಡ ಹಾಕಿಕೊಂಡು ಪ್ಯಾರಿಸ್ ಕೈಬೀಸುತ್ತಿದ್ದರೆ ನೆರೆದವರು ನಾಚಿನೀರಾಗಿದ್ದರು.
ಸೆ.24ರ ಮಧ್ಯಾಹ್ನ 3 ಗಂಟೆಗೆ ಪ್ಯಾರಿಸ್ ಹಿಲ್ಟನ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಮ್ಮದೇ ಬ್ರ್ಯಾಂಡ್‌ನ ಚಪ್ಪಲಿ, ಹ್ಯಾಂಡ್ ಬ್ಯಾಗ್, ಟಿ-ಶರ್ಟ್, ಸ್ಯಾನಿಟಿ ಬಬಲ್ ಟಾಪ್ ಗಳನ್ನು ಮಾರಾಟ ಮಾಡಲು ಪ್ಯಾರಿಸ್ ಭಾರತಕ್ಕೆ ಬಂದಿದ್ದಾರೆ. ಈಗಾಗಲೆ ಈಕೆಯ ಉತ್ಪನ್ನಗಳು 35 ದೇಶಗಳಲ್ಲಿ ಭರ್ಜರಿ ಮಾರಾಟ ಕಾಣುತ್ತಿವೆ. ಈಗ ಭಾರತವೂ ಈ ಪಟ್ಟಿಗೆ ಸೇರುತ್ತಿದೆ.
ಭಾರತದ ಬ್ರ್ಯಾಂಡ್ ಕಾನ್ಸೆಪ್ಟ್ಸ್ ಎಂಬ ಕಂಪನಿ ಜೊತೆಗೆ ಕೈಜೋಡಿಸಿ ತಮ್ಮ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲು ಪ್ಯಾರಿಸ್ ಒಪ್ಪಂದ ಮಾಡಿಕೊಂಡಿದ್ದಾರೆ. ಇಂದು ಆಕೆ ಹಲವಾರು ಬಾಲಿವುಡ್ ತಾರೆಗಳನ್ನು ಭೇಟಿ ಮಾಡಲಿದ್ದಾರೆ. ಸೆಪ್ಟೆಂಬರ್ 27ರವರೆಗೂ ಭಾರತದಲ್ಲೇ ಕಳೆಯಲಿದ್ದಾರೆ. (ಪಿಟಿಐ)
More from Filmibeat
English summary
International celebrity Paris Hilton arrived here on Saturday on her maiden visit to India to launch her line of handbags and accessories in the country.
Donning a blue long dress with sunglasses, Paris stepped out from a Turkish airline flight around 4 AM at the Chatrapati Shivaji International Airport.
ಹಾಲಿವುಡ್ ಪ್ಯಾರಿಸ್ ಹಿಲ್ಟನ್ ಕರಣ್ ಜೋಹರ್ ಭಾರತ ಫ್ಯಾಷನ್ ಡಿಸೈನರ್ ರಿಯಾಲಿಟಿ ಶೋ paris hilton karan johar reality show fashion


Click it and Unblock the Notifications











