ಮಲ್ಲಿಕಾ ಒಬಾಮಾ ಭೇಟಿ ರಹಸ್ಯ ಬಯಲು

By Mahesh

ಬಾಲಿವುಡ್ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಗೆ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಕಲೆ ಚೆನ್ನಾಗಿ ಕರಗತವಾಗಿದೆ. ಮಲ್ಲಿಕಾಳ ಚಿತ್ರಗಳು ಸುದ್ದಿ ಮಾಡದಿದ್ದರೂ ಮಲ್ಲಿಕಾ ಮಾತ್ರ ಸದಾ ಸುದ್ದಿಯಲ್ಲಿರುತ್ತಾಳೆ. ಮೊನ್ನೆ ಕೂಡಾ ಹಾಗೆ ಆಗಿದೆ. ಸ್ಥಳೀಯ ಪಾಪರಜ್ಜಿ ಸ್ನೇಹಿತರನ್ನು ಕರೆಸಿಕೊಂಡು ತನ್ನ ಚಲನವಲನಗಳ ಚಿತ್ರ ತೆಗೆಯುವಂತೆ ಕೋರಿದ್ದಾಳೆ. ಇತ್ತೀಚಿನ ಒಬಾಮಾ ಭೇಟಿ ಕೂಡಾ ಇದೇ ರೀತಿ ಒಂದು ಗಿಮಿಕ್ ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಚಹಾ ಕೂಟಕ್ಕೆ ಆಹ್ವಾನ ಸಿಕ್ಕಿರುವ ವಿಷಯವನ್ನು ಜಗತ್ತಿಗೆ ಸಾರಿದ ಮಲ್ಲಿಕಾ, ನನ್ನ ಕನಸು ನನಸಾಗಿದೆ. ಒಬಾಮಾ ಜೊತೆ ಟೀ ಪಾರ್ಟಿ ಎಂದರೆ ಓಹ್ ಮೈ ಗಾಡ್ ಎಂದು ಟ್ವೀಟ್ ಮಾಡಿ ಅಭಿಮಾನಿಗಳ ಜೊತೆ ಸಂಭ್ರಮ ಹಂಚಿಕೊಂಡಿದ್ದರು.

ಒಬಾಮಾಗೆ ಮೋಡಿ:
ಲಾಸ್ ಏಂಜಲೀಸ್‌ನಲ್ಲಿ ಆಯೋಜಿಸಲಾಗುವ ಚಾಹಾಕೂಟದಲ್ಲಿ ಪಾಲ್ಗೊ ವಂತೆ ಶೆರಾವತ್ತಿಗೆ ಕರೆ ಬಂದಿದೆಯಂತೆ. ಜೊತೆಗೆ 'ಪೊಲಿಟಿಕ್ಸ್ ಆಫ್ ಲವ್ , ಬರಾಕ್ "ಚಿತ್ರದ ಪ್ರೀಮಿಯರ್ ಶೋಗೆ ನನ್ನನ್ನು ಕರೆಯುತ್ತೀಯಾ ತಾನೆ" ಎಂದು ಒಬಾಮಾ ಕೇಳಿಕೊಂಡಿದ್ದಾರಂತೆ. ಶೆರಾವತ್ ಅಭಿನಯದ ಈ ಹೊಸ ಚಿತ್ರದಲ್ಲಿ ಬಾಮಾ ಅಧ್ಯಕ್ಷ ಪದವಿ ಹಿನ್ನೆಲೆ ಮತ್ತು ಚುನಾವಣಾ ಪ್ರಚಾರದ ವಿಚಾರ ಒಳಗೊಂಡಿದೆ.

ಪಾಪರಜ್ಜಿಗಳ ಮಲ್ಲಿ ಬುಟ್ಟಿಗೆ : ಆದರೆ, ಮುಖ್ಯವಾದ ವಿಷಯ ಎಂದರೆ, ಪಾಪರಜ್ಜಿಗಳನ್ನು ಬಳಸಿಕೊಂಡು ತ್ವರಿತವಾಗಿ ಪ್ರಚಾರ ಗಿಟ್ಟಿಸಿಕೊಳ್ಳಲು ಮಲ್ಲಿಕಾ ತೊಡಗಿದ್ದಾಳಂತೆ. ಅಸಲಿ ಪಾಪರಜ್ಜಿಗಳಿಗೆ ಮಲ್ಲಿಕಾ ಹಿಂದೆ ಮುಂದೆ ಸುತ್ತುವ ಪತ್ರಕರ್ತರನ್ನು ಕಂಡು ಅಚ್ಚರಿ ಮೂಡಿದೆ. ಕ್ಯಾಮೆರಾ ಮುಂದೆ ಅಗತ್ಯಕ್ಕಿಂತ ಹೆಚ್ಚು ಫೋಸ್ ಕೊಡುತ್ತಾ, ಸುಮ್ಮನೆ ನಗುತ್ತಾ ನಿಲ್ಲುವ ಈ ಸುಂದರಿಯ ವರ್ತನೆ ನೋಡಿ ಅಸಲಿ ಪಾಪರಜ್ಜಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದೇ ರೀತಿಯಾದರೆ, ಕ್ಯಾನ್ಸ್ ಚಿತ್ರೋತ್ಸವದಲ್ಲಿ ಎಲ್ಲಾ ತಾರೆಗಳನ್ನು ಹಿಂದಿಕ್ಕಿ ಮಲ್ಲಿಕಾ ಮೆರೆಯುವುದಂತೂ ಗ್ಯಾರಂಟಿ ಎನ್ನುತ್ತಿದೆ ಹಾಲಿವುಡ್.

ಸಿನಿಮಾ ಮಂದಿಗಳನ್ನು ಬೇಕಾಬಿಟ್ಟಿ ಬೈಯುವ ಯುಎಸ್ ಬ್ಲಾಗರ್ ಪೆರೆಜ್ ಹಿಲ್ಟನ್ ನನ್ನು ಬುಟ್ಟಿಗೆ ಹಾಕಿಕೊಂಡಿರುವ ಮಲ್ಲಿ, ಹಿಲ್ಟನ್ ಬ್ಲಾಗ್ ನಲ್ಲಿ ಫಿಟ್ ನೆಸ್ ಪಾಠ ಮಾಡಲಿದ್ದಾಳಂತೆ. ಮಲ್ಲಿ, ನಡೆ ನುಡಿಗೆ ಹಾಲಿವುಡ್ ಬೆರಗಾಗಿರುವುದಂತೂ ಸತ್ಯ.

More from Filmibeat

English summary
Mallika Sherawat has been invited for tea with Barack Obama. Mallika who is busy in promoting her latest flick Politics of Love, Barack reportedly meet Obama. Obama has asked sensual actress to invite him for her movie premier.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X