ಹೆಣವಾಗಿ ಹೋದಳು ಮಾಜಿ ಬ್ಲೂ ಫಿಲಂ ಸ್ಟಾರ್
ಇಪ್ಪಾತ್ತಾರರ ಹರೆಯದ ಯುವಕನೊಬ್ಬ ಮಾಜಿ ಬ್ಲೂ ಫಿಲಂ ತಾರೆಯೊಬ್ಬಳನ್ನು ಹೂಕುಂಡದಿಂದ ಹೊಡೆದು ಬಳಿಕ ಆಕೆಯ ಕತ್ತುಕೊಯ್ದು ಹತ್ಯೆ ಮಾಡಿದ್ದಾನೆ. ಲಂಡನ್ ಹೊರವಲಯದಲ್ಲಿರುವ ಮನೆಯಲ್ಲಿ ನಡೆದಿರುವ ಈ ಘಟನೆಯನ್ನು 'ದಿ ಸನ್' ಪತ್ರಿಕೆ ವರದಿ ಮಾಡಿದೆ.
ಮೃತಪಟ್ಟ ಬ್ಲೂ ಫಿಲಂ ತಾರೆಯನ್ನು ಸವನ್ನಾ ಗೋಲ್ಡ್ (26) ಎಂದು ಗುರುತಿಸಲಾಗಿದೆ. ಲಂಡನ್ ನ ಲಾಂಬೆತ್ ಪ್ರಾಂತ್ಯದ ಮನೆಯಲ್ಲಿ ಸವನ್ನಾ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದಳು. ಆಕೆಯ ಮನೆಯಲ್ಲಿ ಚೀತ್ಕಾರ ಕೇಳಿದ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಸೋಹಿದ್ದುಲ್ ಇಸ್ಲಾಂ ಎಂಬುವವನು ಆಕೆಯನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ದರೋಡೆ ಮಾಡಲು ಆಕೆಯ ಮನೆಗೆ ನುಗ್ಗಿದ್ದೆ. ಆಗ ಆಕೆಯ ಮೇಲೆ ಹೂಕುಂಡವನ್ನು ಎತ್ತಿಹಾಕಿ ಬಳಿಕ ಕತ್ತು ಕುಯ್ದು ಹತ್ಯೆ ಮಾಡಿದ್ದಾಗಿ ಇಸ್ಲಾಂ ಪೊಲೀಸರಿಗೆ ತಿಳಿಸಿದ್ದಾನೆ. ಈ ಹಿಂದೆ ಈತ ನಕಲಿ ಗನ್ ತೋರಿಸಿ ಎರಡು ಮನೆಗಳಲ್ಲಿ ದರೋಡೆ ಮಾಡಿದ್ದ.ಲಂಡನ್ ಪೊಲೀಸರು ಇಸ್ಲಾಂಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಬ್ಲೂ ಫಿಲಂ ಸ್ಟಾರ್ ಲಂಡನ್ ಹಾಲಿವುಡ್ ಸವನ್ನಾ ಗೋಲ್ಡ್ ಹತ್ಯೆ ಅಪರಾಧ ಸುದ್ದಿ ಕೊಲೆ ನೀಲಿ ಚಿತ್ರ london savannah gold shohidul islam crime news the sun hollywood


Click it and Unblock the Notifications