Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಿಮ್ ಕರ್ದಶಿಯನ್ ಮಾದಕ ಕುಂಡಿ ಸಹಜ ಸುಂದರ
ಜಗತ್ತಿನಲ್ಲಿ ಅತ್ಯಂತ ಸುಂದರ ನಿತಂಬವುಳ್ಳ ನಟಿ ಯಾರು ಎಂಬ ಕುತೂಹಲದ ಪ್ರಶ್ನೆಗೆ ಕಿಮ್ ಕರ್ದಶಿಯನ್ ಹಾಗೂ ಜೆನ್ನಿಫರ್ ಲೋಪೆಜ್ ಎಂಬ ಉತ್ತರ ಥಟ್ಟನೆ ಸಿಗುತ್ತದೆ. ಆದರೆ, ಇತ್ತೀಚೆಗೆ ಕಿಮ್ ನಿತಂಬದ ನೈಜತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸುಂದರ ಶೇಪ್ ನ ಈ ನಿತಂಬದಲ್ಲಿ ನೈಜತೆ ಇಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದರೂ ಇರಬಹುದು ಎಂದು ಸುದ್ದಿ ಹಬ್ಬಿತ್ತು.
ಇದಕ್ಕೆ ಉತ್ತರವಾಗಿ 30 ವರ್ಷದ ನಟಿ ಕಿಮ್ ತಮ್ಮ ನಿತಂಬದ ಎಕ್ಸ್ ರೇ ತೆಗೆಸಿ ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ. ಈ ಮೂಲಕ ನನ್ನ ದೇಹದಲ್ಲಿ ಯಾವುದೇ ಭಾಗ ಸಿಲಿಕಾನ್ ಅಂಶ ಸೇರಿಸಿಲ್ಲ. ಪ್ಲಾಸ್ಟಿಕ್ ಸರ್ಜರಿ ಮೂಲಕ ನಿತಂಬದ ಗಾತ್ರ ಹಿಗ್ಗಿಸಿಲ್ಲ. ಬೇಕಾದರೆ ಎಕ್ಸ್ ರೇ ರಿಪೋರ್ಟ್ ಇದೆ ನೋಡಿ ಎಂದು ಅಭಿಮಾನಿಗಳಲ್ಲಿ ಕಳಕಳಿಯಿಂದ ಕೇಳಿಕೊಂಡಿದ್ದಾರೆ.
ಜನಪ್ರಿಯ ಸರಣಿ ಕೀಪಿಂಗ್ ಅಪ್ ವಿಥ್ ಕದರ್ಶಿಯನ್ಸ್ ನಲ್ಲಿ ತನ್ನ ಕರ್ವ್ ನೈಸರ್ಗಿಕವಾದದ್ದು ಎಂದು ಸಾಬೀತು ಸಮೇತ ತೋರಿಸಲು ಸಿದ್ಧತೆ ನಡೆಸಿದ್ದಾಳೆ ಕಿಮ್. ಕಿಮ್ ತಂಗಿ ಕೊಹ್ಲೆ ತನ್ನ ಟ್ವೀಟ್ ನಲ್ಲಿ ಅಕ್ಕನ ನಿತಂಬ 100% ನೈಜವಾದದ್ದು ಎಂದು ಘೋಷಿಸಿಕೊಂಡಿದ್ದಾಳೆ.
ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ ಬೊಟೆಕ್ಸ್ ಇಂಜೆಕ್ಷನ್ ಬಳಸಿದ್ದೆ. ಆಮೇಲೆ ಅಲರ್ಜಿ ಆದ ಮೇಲೆ ಬಿಟ್ಟು ಬಿಟ್ಟೆ. ಮದುವೆಗೆ ಮುಂಚೆ ಈ ತೂಕ ಇಳಿಸಿಕೊಳ್ಳಲು ಕಿಮ್ ಯೋಜಿಸಿದ್ದಾಳಂತೆ. ಎನ್ ಬಿಎ ಸ್ಟಾರ್ ಹಂಫೈರ್ ಜೊತೆ ಮದುವೆ ನಿಶ್ಚಯವಾಗಿದೆ, ನಿತಂಬ ಸಣ್ಣಗೆ ಮಾಡುವ ತಜ್ಞ ಪೀಟರ್ ಸನ್ ಬಳಿ ಟ್ರೈನಿಂಗ್ ಪಡೆಯುತ್ತಿರುವ ಕಿಮ್, ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾಳೆ. ತನ್ನ ಜಿಮ್ ಟಿಪ್ಸ್ ಗಳನ್ನು ಒಂದೊಂದಾಗಿ ತನ್ನ ಅಭಿಮಾನಿಗಳಿಗೆ ಟ್ವೀಟರ್ ಮೂಲಕ ತಲುಪಿಸುತ್ತಿದ್ದಾಳೆ.