ಜೆನ್ನಿಫರ್ ಅನಿಸ್ಟನ್ ಹಚ್ಚೆ ಹಾಕಿಸಿಕೊಂಡಿದ್ದು ಎಲ್ಲಿ ಗೊತ್ತೆ!?

ಬೇರೆಯವರಾಗಿದ್ದರೆ ಅಯ್ಯೋ ಪಾಪ ಎಂದು ಒಂದೆರಡು ತೊಟ್ಟು ಕಣ್ಣೀರು ಸುರಿಸಿ ಕೈ ತೊಳೆದುಕೊಳ್ಳುತ್ತಿದ್ದರು. ಆದರೆ ಜೆನ್ನಿಫರ್ ಮಾತ್ರ ತನ್ನ ಪ್ರೀತಿ ಪಾತ್ರದ ಸಾಕು ನಾಯಿಗೆ ಕೃತಜ್ಞತೆ ತಿಳಿಸಲು ಹಚ್ಚೆಯನ್ನೇ ಹಾಕಿಸಿಕೊಂಡಿದ್ದಾರೆ. ಎಲ್ಲಿ ಎಂದಿರಾ!? ಅದೇ ನೋಡಿ ದುರಂತ. ಆಕೆ ತನ್ನ ಪಾದದ ಮೇಲೆ ಹಾಕಿಸಿಕೊಂಡಿದ್ದಾರೆ.
ತನ್ನ ಪ್ರೀತಿ ಪಾತ್ರದಮಿಶ್ರತಳಿಯ ಜಾತಿನಾಯಿಗೆ ನಾರ್ಮನ್ ಎಂದು ಹೆಸರಿಟ್ಟಿದ್ದರು. ಅದರ ಹೆಸರನ್ನು ತನ್ನ ಬಲ ಪಾದದ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಕೃತಜ್ಞತೆ ಮೆರೆದಿದ್ದಾರೆ. ಆಕೆ ಇದೆ ಮೊದಲ ಬಾರಿಗೆ ಹಚ್ಚೆ ಹಾಕಿಸಿಕೊಳ್ಳುತ್ತಿರುವುದು ಎಂಬುದು ವಿಶೇಷಗಳಲ್ಲಿ ವಿಶೇಷ.(ಪಿಟಿಐ)
More from Filmibeat
English summary
Jennifer Aniston has got her first ever tattoo and it is nothing but her dog’s name, who died two months back and was said to be very close to the star.


Click it and Unblock the Notifications











