ಮಮ್ಮಿ ತಾರೆಯೊಂದಿಗೆ ಜೇಮ್ಸ್ ಬಾಂಡ್ ತಾರೆ ಮದುವೆ

ಕಳೆದ ಡಿಸೆಂಬರ್‌ನ ಚಳಿಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಇವರು ಒಟ್ಟಿಗೆ ಸೆಲಬ್ರೇಟ್ ಮಾಡಿದ್ದರು. ಕದ್ದುಮುಚ್ಚಿ ನಡೆಯುತ್ತಿದ್ದ ಇವರಿಬ್ಬರ ಕಣ್ಣಾಮುಚ್ಚಾಲೆ ಆಗಷ್ಟೆ ಜಗಜ್ಜಾಹೀರಾಗಿತ್ತು. ಇವರ ಮದುವೆ ಕೇವಲ ನಾಲ್ಕೇ ನಾಲ್ಕು ಮಂದಿ ಸಮ್ಮುಖದಲ್ಲಿ ನಡೆದಿರುವುದು ವಿಶೇಷ. ರಾಚೆಲ್ ಮಗ ಹೆನ್ರಿ (4), ಡೆನಿಯಲ್ ಮಗಳು ಎಲ್ಲ (18) ಹಾಗೂ ಇನ್ನಿಬ್ಬರು ಗೆಳೆಯರ ಸಮ್ಮುಖದಲ್ಲಿ ಮದುವೆ ಶಾಸ್ತ್ರ ಮುಗಿದಿದೆ.
ನ್ಯೂಯಾರ್ಕ್‌ನ ಗೆಳೆಯರ ಮನೆಯಲ್ಲಿ ಇಬ್ಬರೂ ತೀರಾ ಖಾಸಗಿಯಾಗಿ ಮದುವೆಯಾಗಿದ್ದಾರೆ. ಸದ್ಯಕ್ಕೆ ಇಬ್ಬರೂ 'ಡ್ರೀಮ್ ಹೌಸ್' ಎಂಬ ಹಾರರ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ ವೇಳೆಗೆ ತೆರೆಕಾಣಲಿದೆ. ಹೊಸ ಬಾಳಿನ ಹೊಸಿಲಲಿ ನಿಂತಿರುವ 'ಹಳೆ' ಜೋಡಿಗೆ ಶುಭವಾಗಲಿ. (ಏಜೆನ್ಸೀಸ್)
More from Filmibeat
English summary
James Bond star Daniel Craig (43) and Rachel Weisz (40), who starred in The Mummy and The Mummy Returns, got married in a private ceremony recently. Craig and Weisz first went public about their relationship last December, when they spent Christmas together in England.


Click it and Unblock the Notifications











