ಮೈನವಿರೇಳಿಸುವ ಮಮ್ಮಿ ಭಾಗ-3ರ ಟ್ರೈಲರ್
ಹಾಲಿವುಡ್‌ನ ಸಾಹಸ ಪ್ರಧಾನ ಚಿತ್ರ 'ಮಮ್ಮಿ' ಭಾಗ-3 The Mummy :Tomb of the Dragon Emperor ಟ್ರೈಲರ್ ಇಲ್ಲಿದೆ. ಈ ಚಿತ್ರ ವಿಶ್ವದಾದ್ಯಂತ ಆ.1, 2008ರಂದು ಬಿಡುಗಡೆಯಾಗುತ್ತಿದೆ. ಈ ಹಿಂದಿನ The Mummy ಹಾಗೂ The Mummy Returns ಚಿತ್ರಗಳು ಸಾಕಷ್ಟು ಕುತೂಹಲ ಮೂಡಿಸಿದ್ದವು. ರಾಬ್ ಕೋಹೆನ್ ನಿರ್ದೇಶಿಸಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಜೆಟ್ ಲಿ ನಟಿಸಿದ್ದಾರೆ. 175,000,000 ಡಾಲರ್ ಖರ್ಚು ಮಾಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಅದ್ಭುತ ಸೆಟ್‌ಗಳು, ಮೈನವಿರೇಳಿಸುವ ಸಾಹಸ ದೃಶ್ಯಗಳು ಈ ಚಿತ್ರದ ಪ್ರಧಾನ ಆಕರ್ಷಣೆ. ಈ ಚಿತ್ರದ ಮುನ್ನೋಟ ನಿಮ್ಮ ಮುಂದೆ
(ದಟ್ಸ್‌ಕನ್ನಡ ವಿಡಿಯೋ)


Click it and Unblock the Notifications











