»   » ಮುಖಭಾವದಲ್ಲೇ ನಗು ಮೂಡಿಸುವ ಬಸ್ಟರ್ ಕೀಟನ್

ಮುಖಭಾವದಲ್ಲೇ ನಗು ಮೂಡಿಸುವ ಬಸ್ಟರ್ ಕೀಟನ್

Posted By: ಸುಧಾ
Subscribe to Filmibeat Kannada

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಇದ್ದಕ್ಕಿದ್ದಂತೆ 1000 ಎತ್ತುಗಳು ಮೆರವಣಿಗೆ ಹೊರಟರೇ, ಒಬ್ಬನನ್ನು ಮದುವೆ ಗಂಡಿಗೆ ಸಾವಿರ ಹೆಣ್ಣುಗಳು ಛತ್ರಕ್ಕೆ ದಾಂಗುಡಿಯಿಟ್ಟರೇ, ಥಿಯೇಟರ್ ಒಂದರಲ್ಲಿ ಸಿನಿಮಾ ಬಿಡುವ ಹುಡುಗ ಪುಸ್ತಕ ಓದಿಕೊಂಡು ಪತ್ತೆದಾರಿಕೆ ಮಾಡಲು ಹೊರಟರೇ...ಈ 'ರೇ' ಪ್ರಪಂಚವೇ ಇಷ್ಟು ಮಜಾ ಕೊಡುತ್ತೆ. ಇನ್ನು ತೆರೆಯ ಮೇಲೆ ನೋಡುವಾಗ ಹೊಟ್ಟೆ ಹುಣ್ಣಾಗುವಷ್ಟು ನಗು ಬರದೆ ಇದ್ದೀತೆ?

ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತ ಅರ್ಥವಾಗಬೇಕು ಅಂದ್ರೆ ನೀವು ಬಸ್ಟರ್ ಕೀಟನ್ ಅವರ ಬಗ್ಗೆ ತಿಳಿದುಕೊಳ್ಳಬೇಕು. ಒಂದು ಸುಂದರವಾದ ಕಾಮಿಡಿ ಜಗತ್ತೇ ನಿಮ್ಮೆದುರು ಸದ್ದಿಲ್ಲದೆ ನಿಲ್ಲೋದು ಗಮನಿಸಿ.

51st Death Anniversary of Buster Keaton

ನಾನು 'ಸದ್ದಿಲ್ಲದೆ' ಪದ ಯಾಕೆ ಬಳಸಿದೆ ಅಂದ್ರೆ ಬಸ್ಟರ್ ಕೀಟನ್ ನ ಬಹುತೇಕ ಚಿತ್ರಗಳು ಮೂಕಿ. ಗಟ್ಟಿ ಕಥೆ, ಚುರುಕು ನಟನೆ, ತಾಂತ್ರಿಕತೆಯ ಅಚ್ಚುಕಟ್ಟುತನ, ಮನೋಜ್ಞ ಸಂಗೀತ ಇರಲು ಭಾಷೆಯ ಹಂಗೇಕೆ?

ಬಸ್ಟರ್ ಕೀಟನ್ ನ ಸುಪ್ರಸಿದ್ಧ ಚಿತ್ರ 'ದಿ ಜನರಲ್'. ಇದು ಅಮೆರಿಕ ಅಂತರ್ಯುದ್ಧ ಸಮಯದಲ್ಲಿ ರೈಲು ಚಾಲಕನೊಬ್ಬ ತನ್ನ ಪ್ರೇಯಸಿಗಾಗಿ ಸೈನಿಕನಾಗಲು ಯತ್ನಿಸುವ, ಆಕೆಯನ್ನು ಕಾಪಾಡಿಕೊಳ್ಳಲು ಹೋರಾಡುವ, ತನ್ನವರನ್ನು ಗೆಲ್ಲಿಸುವ ಕಥೆಯ ಹೂರಣ ಹೊಂದಿದೆ. ರೈಲಿನ ಎಂಜಿನ್ ಸಹ ಒಂದು ಪಾತ್ರವಾಗಿ ವೀಕ್ಷಕರ ಮನದಲ್ಲಿ ಸ್ಥಾನ ಪಡೆಯುವಂತೆ ಮಾಡುವಲ್ಲಿ ಕೀಟನ್ ಯಶಸ್ವಿಯಾಗುತ್ತಾರೆ. ರೈಲು ಪ್ರಯಾಣದ ಆತಂಕಗಳು ಮತ್ತು ಅದನ್ನು ನಿವಾರಿಸಿಕೊಳ್ಳಲು ಈ ಜೋಡಿಯಾಗಿ ಹೆಣಗಾಟ ತಕ್ಷಣಕ್ಕೆ ನಗೆ ತಂದರೂ ಆಳದಲ್ಲಿ ಅವರ ಪ್ರೀತಿ ನಮ್ಮ ಮನಸ್ಸನ್ನು ಕದಡುತ್ತದೆ.

51st Death Anniversary of Buster Keaton

'ಗೊ ವೆಸ್ಟ್', 'ಅಡ್ಮಿರಲ್', 'ಸ್ಕೇರ್ ಕ್ರೋ', 'ದಿ ಹಾಸ್ಪಿಟಾಲಿಟಿ', 'ಥ್ರೀ ಏಜಸ್', 'ಸೆವೆನ್ ಛಾನ್ಸಸ್' ಎಂಬುವು ಕೀಟನ್ ಅವರ ಪ್ರಸಿದ್ಧ ಚಿತ್ರಗಳು. ಕೆಲವೇ ಪಾತ್ರಗಳು, ಗಟ್ಟಿ ಕಥೆ, ಮನೋಜ್ಞ ಅಭಿನಯ, ಬಸ್ಟರ್ ಕೀಟನ್ ಗಷ್ಟೆ ಸಾಧ್ಯ ಎನಿಸುವ ಸ್ಟಂಟ್ ಎಲ್ಲ ಚಿತ್ರಗಳ ಸಾಮಾನ್ಯ ಅಂಶ.

ಚಾರ್ಲಿ ಚಾಪ್ಲಿನ್ ಬದುಕಿದ್ದ ಕಾಲದಲ್ಲಿಯೇ ಬಾಳಿದ ಈತ ಯಾಕೋ ಭಾರತದಲ್ಲಿ ಚಾಪ್ಲಿನ್ ಅಷ್ಟು ಜನಪ್ರಿಯನಾಗಲಿಲ್ಲ. ಆದರೇನು, ಪ್ರತಿಭೆಗೆ ದೇಶ, ಕಾಲದ ಹಂಗು ಉಂಟೆ?

1895 ಅಕ್ಟೋಬರ್ ನಲ್ಲಿ ಹುಟ್ಟಿದ್ದ ಬಸ್ಟರ್ ಕೀಟನ್ 1966ರಲ್ಲಿ ನಿಧನರಾದರು. ಬಸ್ಟರ್ ಕೀಟನ್ ಅಮೇರಿಕಾದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ, ಸಾಹಸ ನಿರ್ದೇಶಕ, ಬರಹಗಾರರಾಗಿದ್ದರು...
ಲೇಖಕರು-ಸುಧಾ

English summary
51st Death Anniversary of Buster Keaton Hollywood Actor Buster Keaton's. Buster Keaton Died On Febrruary 1966

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X