For Quick Alerts
  ALLOW NOTIFICATIONS  
  For Daily Alerts

  28ರ ನಟಿಯನ್ನು ಮದುವೆಯಾದ 59 ವರ್ಷದ ಆಸ್ಕರ್ ವಿಜೇತ ಹಾಲಿವುಡ್ ನಟ

  |

  'ಮಿಲ್ಕ್', 'ಮಿಸ್ಟಿಕ್ ರಿವರ್' ಮುಂತಾದ ಚಿತ್ರಗಳಿಂದ ಹೆಸರು ಪಡೆದಿರುವ ಅಮೆರಿಕದ ನಟ ಸೀನ್ ಜಸ್ಟಿನ್ ಪೆನ್ ತಮ್ಮ 59ನೇ ವಯಸ್ಸಿನಲ್ಲಿ ಮೂರನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಅದೂ 28ರ ಹರೆಯದ ಯುವತಿಯೊಂದಿಗೆ. ಪೆನ್ ಮದುವೆಯಾಗಿರುವ ಲೈಲಾ ಜಾರ್ಜ್ ಕೂಡ ನಟಿ. ಆಸ್ಟ್ರೇಲಿಯಾ ಮೂಲವದರಾದ ಲೈಲಾ, ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಂದಹಾಗೆ, ಇವರಿಬ್ಬರೂ 2016ರಿಂದಲೇ ರಿಲೇಷನ್‌ಶಿಪ್‌ನಲ್ಲಿದ್ದರು. ಈಗ ಗುಟ್ಟಾಗಿ ಮದುವೆಯಾಗಿದ್ದಾರೆ.

  ರನ್ನನ ರಕ್ಷಾಬಂದನ. | Kiccha Sudeep Raksha Bhandan Wishes | Filmibeat Kannada

  ಆಸ್ಕರ್ ವಿಜೇತ ನಟ ಪೆನ್ ಅವರಿಗೆ ಇದು ಮೂರನೇ ಮದುವೆ. 1960ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ್ದ ಪೆನ್, 1985ರಲ್ಲಿ ಖ್ಯಾತ ಗಾಯಕಿ ಮಡೋನ್ನಾ ಅವರನ್ನು 1985ರಲ್ಲಿ ಮದುವೆಯಾಗಿದ್ದರು. ಈ ಮದುವೆ ನಾಲ್ಕೇ ವರ್ಷಗಳಲ್ಲಿ ಮುರಿದುಬಿದ್ದಿತ್ತು. 1996ರಲ್ಲಿ ನಟಿ ರಾಬಿನ್ ರೈಟ್ ಅವರೊಂದಿಗೆ ಎರಡನೆಯ ಬಾರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 2010ರಲ್ಲಿ ವಿಚ್ಚೇದನ ಪಡೆದಿದ್ದರು. ಮುಂದೆ ಓದಿ...

  ಸಾಮಾಜಿಕ ಜಾಲತಾಣದಿಂದ ಬಹಿರಂಗ

  ಸಾಮಾಜಿಕ ಜಾಲತಾಣದಿಂದ ಬಹಿರಂಗ

  ಪೆನ್ ಮತ್ತು ಲೈಲಾ ಮದುವೆಯಾಗಿರುವ ಸಂಗತಿಯನ್ನು ನಿರ್ಮಾಪಕ ಮೈಕ್ ಮೆಡವೊಯ್ ಪತ್ನಿ ಇರೆನಾ ಮೆಡವೊಯ್ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ಇಬ್ಬರೂ ಉಂಗುರ ಬದಲಿಸಿಕೊಳ್ಳುತ್ತಿರುವ ಫೋಟೊದೊಂದಿಗೆ ಅವರು ಶುಭ ಹಾರೈಸಿದ್ದಾರೆ. ಗೋಪ್ಯವಾಗಿ ನಡೆದಿದ್ದ ಮದುವೆ ಈ ಪೋಸ್ಟ್‌ನಿಂದಾಗಿ ಬಹಿರಂಗವಾಗಿದೆ.

  ವಿಚ್ಛೇದನಕ್ಕೆ ಮುಂದಾದರೇ ತಾರಾ ಜೋಡಿ ಕಿಮ್ ಕರ್ದಶಿಯನ್-ಕಾನ್ಯೆ ವೆಸ್ಟ್?ವಿಚ್ಛೇದನಕ್ಕೆ ಮುಂದಾದರೇ ತಾರಾ ಜೋಡಿ ಕಿಮ್ ಕರ್ದಶಿಯನ್-ಕಾನ್ಯೆ ವೆಸ್ಟ್?

  ಸಿನಿಮಾ ಕುಟುಂಬದವರು

  ಸಿನಿಮಾ ಕುಟುಂಬದವರು

  ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಜನಿಸಿದ್ದ ಲೈಲಾ ಜಾರ್ಜ್, ನಟ ಮತ್ತು ನಿರ್ಮಾಪಕ ವಿನ್ಸೆಂಟ್ ಡಿಒನೊಫ್ರಿಯಾ ಮತ್ತು ನಟಿ ಗ್ರೆಟಾ ಸ್ಕಾಚಿ ಅವರ ಮಗಳು. ಲೈಲಾ ಬೆಳೆದಿದ್ದು ಬ್ರಿಟನ್‌ನಲ್ಲಿ. ಬಳಿಕ ತಂದೆ ತಾಯಿ ಜತೆಗೆ ಅಮೆರಿಕಕ್ಕೆ ತೆರಳಿ ಮೋರ್ಟಲ್ ಎಂಜಿನ್ಸ್ ಮತ್ತು ದಿ ಕಿಡ್ ಚಿತ್ರಗಳಲ್ಲಿ ನಟಿಸಿದ್ದರು. ತನ್ನ ತಂದೆಗಿಂತ ಕೇವಲ ಎರಡು ವರ್ಷ ಮತ್ತು ತಾಯಿಗಿಂತ ಒಂದು ವರ್ಷ ಚಿಕ್ಕವರಾದ ಪೆನ್ ಜತೆ 2016ರಿಂದಲೂ ರಿಲೇಷನ್‌ಶಿಪ್‌ನಲ್ಲಿದ್ದ ಅವರು, ಆಗಸ್ಟ್ 1ರಂದು ಮದುವೆಯಾಗಿದ್ದಾರೆ.

  ಸೀನ್ ಪೆನ್ ಸಿನಿಮಾಗಳು

  ಸೀನ್ ಪೆನ್ ಸಿನಿಮಾಗಳು

  50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸೀನ್ ಪೆನ್, ನಟ ಹಾಗೂ ನಿರ್ದೇಶಕರಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಿಸ್ಟಿಕ್ ರಿವರ್ ಮತ್ತು ಮಿಲ್ಕ್ ಚಿತ್ರದ ನಟನೆಗಾಗಿ ಎರಡು ಬಾರಿ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದಂತೆಯೇ ಪೆನ್, ಖಾಸಗಿ ಬದುಕು ಕೂಡ ಸದಾ ಸುದ್ದಿಯಲ್ಲಿದೆ.

  ನಾಪತ್ತೆಯಾಗಿದ್ದ ಹಾಲಿವುಡ್ ನಟಿ ನಯಾ ರಿವೇರಾ ಶವವಾಗಿ ಪತ್ತೆನಾಪತ್ತೆಯಾಗಿದ್ದ ಹಾಲಿವುಡ್ ನಟಿ ನಯಾ ರಿವೇರಾ ಶವವಾಗಿ ಪತ್ತೆ

  ಮಡೋನ್ನಾ ಜತೆ ಮದುವೆ, ವಿಚ್ಛೇದನ

  ಮಡೋನ್ನಾ ಜತೆ ಮದುವೆ, ವಿಚ್ಛೇದನ

  ಹೆಸರಾಂತ ಪಾಪ್ ಗಾಯಕಿ ಮಡೋನ್ನಾ ಅವರ ಜನ್ಮದಿನದಂದೇ ಮದುವೆಯಾಗಿದ್ದರು. ಮರುದಿನ (ಆಗಸ್ಟ್ 17) ಪೆನ್ ಅವರ ಜನ್ಮದಿನ. ಇಬ್ಬರೂ ಜತೆಗೂಡಿ ಶಾಂಘೈ ಸರ್ಪ್ರೈಸ್ ಚಿತ್ರದಲ್ಲಿ ನಟಿಸಿದ್ದರು. 1987ರಲ್ಲಿ ಸಿನಿಮಾ ಸೆಟ್‌ನಲ್ಲಿ ಫೋಟೊಗ್ರಾಫರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೆನ್ 60 ದಿನಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಅದೇ ವರ್ಷ ಮಡೋನ್ನಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ವಾಪಸ್ ಪಡೆದಿದ್ದರು. ಪೆನ್ ನಿರಂತರ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ 1989ರಲ್ಲಿ ಮತ್ತೆ ವಿಚ್ಛೇದನದ ಅರ್ಜಿ ಸಲ್ಲಿಸಿದರು.

  ಬದಲಾದ ಗೆಳತಿಯರು

  ಬದಲಾದ ಗೆಳತಿಯರು

  ರಾಬಿನ್ ರೈಟ್ ಅವರನ್ನು ಮದುವೆಯಾದ ಅವರಿಗೆ ಇಬ್ಬರು ಮಕ್ಕಳು ಜನಿಸಿದರು. ಮೊದಲ ಮಗಳು ಡೈಲಾನ್ ಫ್ರಾನ್ಸಸ್ ಕೂಡ ನಟಿ. ಎರಡನೆಯ ಮಗ ಹಾಪರ್ ಜಾಕ್. ಗಾಯಕಿ ಜಿವೆಲ್ ಜತೆ ಗೆಳೆತನ ಬೆಳೆದ ಬಳಿಕ ರೈಟ್‌ ಅವರಿಂದ ದೂರವಾದರು. 1996ರಲ್ಲಿ ಪೆನ್ ಮತ್ತು ರೈಟ್ ಮತ್ತೆ ಮದುವೆಯಾದರು. 2010ರಲ್ಲಿ ಇಬ್ಬರೂ ಕಾನೂನು ಪ್ರಕಾರ ದೂರವಾದರು. 2013-2015ರವರೆಗೆ ನಟಿ ಚಾರ್ಲೈಸ್ ಥೆರಾನ್ ಜತೆ ಸೀನ್ ಪೆನ್ ಸಂಬಂಧವಿರಿಸಿಕೊಂಡಿದ್ದರು. ನಂತರ ಲೈಲಾ ಜತೆಯಾಗಿದ್ದರು.

  English summary
  59 year old American actor Sean Penn married to 28 year old Australian actress Leila George after four years relationship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X