ಪ್ರತಿಷ್ಠಿತ 'ಗೋಲ್ಡನ್ ಗ್ಲೋಬ್ 2021' ಪ್ರಶಸ್ತಿ ವಿಜೇತರ ಪಟ್ಟಿ
'ಗೋಲ್ಡನ್ ಗ್ಲೋಬ್ 2021' ಪ್ರಶಸ್ತಿ ವಿತರಣೆ ಸಮಾರಂಭ ಫೆಬ್ರವರಿ 28 ರಂದು 'ವರ್ಚ್ಯೂಲ್ ಮಾದರಿ'ಯಲ್ಲಿ ನಡೆದಿದೆ. ಕೊರೊನಾ ನಡುವೆ ಆಯೋಜಿತವಾದ ವಿಶ್ವ ಮಟ್ಟದ ಸಿನಿಮಾ ಸಂಬಂಧಿ ಪ್ರಶಸ್ತಿ ಪ್ರಧಾನ ಸಮಾರಂಭ ಇದು.
78ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭವು ನ್ಯೂಯಾರ್ಕ್ ಮತ್ತು ಲಾಸ್ ಏಂಜಲ್ಸ್ ನಲ್ಲಿ ಆಯೋಜಿತವಾಗಿತ್ತು. ಪ್ರಶಸ್ತಿ ವಿತರಕರು, ನಿರೂಪಕರು ಹಾಗೂ ಕೆಲವೇ ಪ್ರೇಕ್ಷಕರು ಸಮಾರಂಭದಲ್ಲಿ ನೇರವಾಗಿ ಭಾಗವಹಿಸಿದ್ದರು. ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆ ಆದವರು, ವಿಜೇತರು ತಮ್ಮ-ತಮ್ಮ ಮನೆಗಳಿಂದಲೇ ಲೈವ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಿನಿಮಾ, ಟಿವಿ ಸರಣಿ ಹಾಗೂ ವೆಬ್ ಸರಣಿಗಳಿಗೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ 'ಗೋಲ್ಡನ್ ಗ್ಲೋಬ್' ಆಗಿದ್ದು. ಈ ವರ್ಷ ಕೆಲವು ಅತ್ಯುತ್ತಮ ಸಿನಿಮಾಗಳು, ವೆಬ್ ಹಾಗೂ ಟಿವಿ ಸರಣಿಗಳು ಪ್ರಶಸ್ತಿ ಗೆದ್ದುಕೊಂಡಿವೆ. ಇಲ್ಲಿದೆ ಕಿರು ಪಟ್ಟಿ.

Recommended Video
ಸಿನಿಮಾ ವಿಭಾಗ
ಅತ್ಯುತ್ತಮ ಸಿನಿಮಾ (ಡ್ರಾಮಾ): ನೋಮಡ್‌ಲ್ಯಾಂಡ್
ಅತ್ಯುತ್ತಮ ಸಿನಿಮಾ (ಸಂಗೀತ/ಕಾಮಿಡಿ): ಬೋರಾಟ್
ಅತ್ಯುತ್ತಮ ನಿರ್ದೇಶಕ: ಶೋ ಜಾಹೊ (ನೋಮಡ್‌ಲ್ಯಾಂಡ್)
ಅತ್ಯುತ್ತಮ ನಟಿ (ಡ್ರಾಮಾ): ಆಂಡ್ರಾ ಡೇ (ಯುಎಸ್ v/s ಬಿಲ್ಲಿ ಹಾಲಿಡೆ)
ಅತ್ಯುತ್ತಮ ನಟ (ಡ್ರಾಮಾ): ದಿವಂಗತ ಚಾಡ್ವಿಕ್ ಬೋಸ್‌ಮನ್ (ದಿ ರೈನೀಸ್ ಬ್ಲ್ಯಾಕ್ ಬಾಟಮ್)
ಅತ್ಯುತ್ತಮ ನಟಿ (ಸಂಗೀತ/ಕಾಮಿಡಿ): ಸಾಶಾ ಬಾರೋನ್ ಶೋ (ಬೋರಾಟ್)
ಅತ್ಯತ್ತಮ ಅನಿಮೇಟೆಡ್ ಸಿನಿಮಾ: ಸೋಲ್
ಟಿವಿ ವಿಭಾಗ
ಅತ್ಯುತ್ತಮ ಟಿವಿ ಸರಣಿ (ಡ್ರಾಮಾ): ದಿ ಕ್ರೌನ್
ಅತ್ಯುತ್ತಮ ಟಿವಿ ಸರಣಿ (ಸಂಗೀತ/ ಹಾಸ್ಯ): ಶಿಟ್ಸ್ ಕ್ರೀಕ್
ಅತ್ಯುತ್ತಮ ಟಿವಿ ಸಿನಿಮಾ ಅಥವಾ ಮಿಸಿ ಟಿವಿ ಸರಣಿ: ದಿ ಕ್ವೀನ್ಸ್ ಗ್ಯಾಂಬಿಟ್
ಅತ್ಯುತ್ತಮ ನಟಿ (ಡ್ರಾಮಾ): ಎಮ್ಮಾ ಕೋರಿನ್ (ದಿ ಕ್ರೌನ್)
ಅತ್ಯುತ್ತಮ ನಟ (ಡ್ರಾಮಾ): ಜೋಷ್ ಓ'ಕಾರ್ನರ್ (ದಿ ಕ್ರೌನ್)
ಅತ್ಯುತ್ತಮ ನಟಿ (ಸಂಗೀತ/ಹಾಸ್ಯ): ಕ್ಯಾಥೆರಿನ್ ಓ'ಹಾರಾ (ಶಿಟ್ಸ್ ಕ್ರಿಕ್)
ಅತ್ಯುತ್ತಮ ನಟ (ಸಂಗೀತ/ಹಾಸ್ಯ): ಜಾಸ್ಸೊ (ಟೆಡ್ ಲಾಸ್ಸೊ)
ಅತ್ಯುತ್ತಮ ನಟ (ಟಿವಿ ಫಿಲಂ): ಆನಾ ಟೈಲರ್ ಜಾಯ್ (ದಿ ಕ್ವೀನ್ಸ್ ಗ್ಯಾಂಬಿಟ್)


Click it and Unblock the Notifications











