ಆಸ್ಕರ್: ಹೊರಬಿದ್ದ 'ಕೂಳಾಂಗಳ್', ಮೆಟ್ಟಿಲೇರಿದ 'ರೈಟಿಂಗ್ ವಿತ್ ಫೈರ್'

ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳಲು ಸ್ಪರ್ಧೆಯಲ್ಲಿದ್ದ ಭಾರತೀಯ ಸಿನಿಮಾ 'ಕೂಳಾಂಗಳ್' ಸ್ಪರ್ಧೆಯಿಂದ ಹೊರಬಿದ್ದೆ. ಆದರೆ, ಡಾಕ್ಯುಮೆಂಟರಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ 'ರೈಟಿಂಗ್ ವಿತ್ ಫೈರ್' ಸಾಕ್ಷ್ಯಚಿತ್ರವು ಒಂದು ಹಂತ ಮೇಲೇರಿ ಆಸ್ಕರ್‌ಗೆ ಹತ್ತಿರವಾಗಿದೆ.

ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ನಿರ್ಮಾಣ ಮಾಡಿ, ಪಿಎಸ್ ವಿನೋದ್ ರಾಜ್ ನಿರ್ದೇಶನ ಮಾಡಿದ್ದ 'ಕೂಳಾಂಗಳ್' ತಮಿಳು ಸಿನಿಮಾವನ್ನು ಆಸ್ಕರ್‌ಗೆ ಅಧಿಕೃತವಾಗಿ ಭಾರತದಿಂದ ಆಯ್ಕೆ ಮಾಡಿ ಕಳಿಸಲಾಗಿತ್ತು. ಆದರೆ ಸಿನಿಮಾವು ಶಾರ್ಟ್ ಲಿಸ್ಟ್ ಆಗುವಲ್ಲಿ ವಿಫಲವಾಗಿ, ಮೊದಲ ಸುತ್ತಿನಿಂದಲೇ ಹೊರಬಿದ್ದಿದೆ.

ಆದರೆ ದಲಿತ ಮಹಿಳೆಯರು ನಡೆಸುವ 'ಖಬರ್ ಲಹರಿಯಾ' ಪತ್ರಿಕೆ ಹಾಗೂ ಅವರ ವರದಿ, ಇನ್ನಿತರೆ ವಿಷಯಗಳ ಮೇಲೆ ಬೆಳಕು ಚೆಲ್ಲುವ 'ರೈಟಿಂಗ್ ವಿಥ್ ಫೈರ್' ಸಾಕ್ಷ್ಯಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಶಾರ್ಟ್ ಲಿಸ್ಟ್ ಆಗಿದೆ.

94th Oscar: Koozhangal Movie Out Of Race, Writing With Fire Documentary Shortlisted

ಆಸ್ಕರ್‌ಗೆ ಸಲ್ಲಿಕೆಯಾಗಿದ್ದ ಸಿನಿಮಾ, ಸಾಕ್ಷ್ಯಚಿತ್ರ, ಅನಿಮೇಷನ್ ಸಿನಿಮಾಗಳಿಗೆ ಡಿಸೆಂಬರ್ 15 ರಂದು ಮತದಾನ ನಡೆದು, ಅತ್ಯುತ್ತಮ ಎನಿಸುವ ಚಿತ್ರಗಳು ಹಾಗೂ ಸಾಕ್ಷ್ಯಚಿತ್ರಗಳು ಆಸ್ಕರ್‌ನ ಮುಂದಿನ ಹಂತಕ್ಕೆ ಆಯ್ಕೆ ಆಗಿವೆ. ಅವುಗಳಲ್ಲಿ ಒಂದು ಭಾರತದ 'ರೈಟಿಂಗ್ ವಿಥ್ ಫೈರ್'.

'ರೈಟಿಂಗ್ ವಿಥ್ ಫೈರ್' ಸಾಕ್ಷ್ಯಚಿತ್ರವನ್ನು ಸುಶ್ಮಿತಾ ಘೋಷ್, ರಿನು ಥಾಮಸ್ ನಿರ್ದೇಶನ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರೇ ನಡೆಸುವ ಪತ್ರಿಕೆ ಕುರಿತಾದ ಸಾಕ್ಷ್ಯಚಿತ್ರ ಇದಾಗಿದ್ದು, ಪತ್ರಿಕೆ ಪ್ರಾರಂಭಕ್ಕೆ ಕಾರಣ, ವರದಿ ತರಲು ಅವರು ಪಡುವ ಕಷ್ಟಗಳು, ವರದಿಗಾರಿಕೆ ವಿಧಾನ. ವರದಿಗಾರ್ತಿಯರ ವೈಯಕ್ತಿಕ ಜೀವನ, ಆದರ್ಶ ಇನ್ನಿತರೆ ವಿಷಯಗಳ ಮೇಲೆ ಈ ಸಾಕ್ಷ್ಯಚಿತ್ರ ಬೆಳಕು ಚೆಲ್ಲಿದೆ. ಯೂಟ್ಯೂಬ್‌ನಲ್ಲಿ ಈ ಸಾಕ್ಷ್ಯಚಿತ್ರದ ಟ್ರೈಲರ್ ಲಭ್ಯವಿದೆ.

ಉತ್ತರ ಪ್ರದೇಶದಲ್ಲಿ ಕೇವಲ ಏಳು ಜನ ದಲಿತ ಹೆಣ್ಣು ಮಕ್ಕಳು 2002 ರಲ್ಲಿ ಹೇಗೆ ಪತ್ರಿಕೆಯೊಂದನ್ನು ಪ್ರಾರಂಭ ಮಾಡಿದರು. ಎಲ್ಲ ವಿಭಾಗದಲ್ಲಿಯೂ ಪುರುಷರ ಪಾರುಪತ್ಯ ಇದ್ದ ಸಮಯದಲ್ಲಿ ಹೇಗೆ ಪತ್ರಿಕೋದ್ಯಮವನ್ನು ನಡೆಸಿದರು ಎಂಬುದು ಹಾಗೂ ಈ ಪಯಣದಲ್ಲಿ ಅವರು ಎದುರಿಸಿದ ಸವಾಲುಗಳನ್ನು 'ರೈಟಿಂಗ್ ವಿಥ್ ಫೈರ್' ಸಾಕ್ಷ್ಯಚಿತ್ರ ಒಳಗೊಂಡಿದೆ. ದಲಿತ ಮಹಿಳೆಯರು ಪ್ರಾರಂಭ ಮಾಡಿದ್ದ ಪತ್ರಿಕೆ ಈಗ ಡಿಜಿಟಲ್ ರೂಪಕ್ಕೆ ಬದಲಾಗಿದೆ.

'ರೈಟಿಂಗ್ ವಿಥ್ ಫೈರ್' ಸಾಕ್ಷ್ಯಚಿತ್ರವು ಸದ್ಯಕ್ಕೆ ಶಾರ್ಟ್ ಲಿಸ್ಟ್ ಆಗಿದೆಯಷ್ಟೆ ಅಂತಿಮ ಹಂತಕ್ಕೆ ನಾಮಿನೇಟ್ ಆಗಲು ಇನ್ನೂ ಎರಡು ಮೆಟ್ಟಿಲು ಏರಬೇಕಿದೆ. ಅಂತಿಮ ಹಂತಕ್ಕೆ ನಾಲ್ಕು ಸಾಕ್ಷ್ಯಚಿತ್ರಗಳು ಆಯ್ಕೆ ಆಗುತ್ತವೆ, ಅದರಲ್ಲಿ ಒಂದಕ್ಕಷ್ಟೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಲಭಿಸಲಿದೆ.

'ರೈಟಿಂಗ್ ವಿಥ್ ಫೈರ್' ಸಾಕ್ಷ್ಯಚಿತ್ರದ ಜೊತೆಗೆ ಇತರೆ ದೇಶಗಳ ಒಟ್ಟು ಹದಿನೈದು ಸಾಕ್ಷ್ಯಚಿತ್ರ ಶಾರ್ಟ್ ಲಿಸ್ಟ್ ಆಗಿದೆ. ಒಟ್ಟು 198 ಸಾಕ್ಷ್ಯಚಿತ್ರಗಳು ಆಸ್ಕರ್‌ಗೆ ಸಲ್ಲಿಕೆಯಾಗಿದ್ದವು. ಅದರಲ್ಲಿ 15 ಅಷ್ಟೆ ಈಗ ಆಯ್ಕೆಯಾಗಿವೆ.

More from Filmibeat

English summary
Indian official entry for 94th Oscar movie is out from the race but Indian documentary Writing with fire is shortlisted with other 15 documentaries.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X