ಚಿತ್ರಮಂದಿರದಲ್ಲಿ'ಅನ್ನಾಬೆಲ್ಲೆ'ಸಿನಿಮಾ ನೋಡುವಾಗ ವ್ಯಕ್ತಿ ಸಾವು
ಹಾಲಿವುಡ್ ಸಿನಿಮಾ 'ಅನ್ನಾಬೆಲ್ಲೆ ಕಮ್ಸ್ ಹೋಮ್' ಸಿನಿಮಾ ನೋಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ. ಬ್ರಿಟಿಷ್ ಮೂಲದ ವ್ಯಕ್ತಿ ಥೈಲ್ಯಾಂಡ್ ನ ಪಟ್ಟಯ್ಯ ಶಾಪಿಂಗ್ ಮಾಲ್ ನಲ್ಲಿ ಇತ್ತೀಚಿಗಷ್ಟೆ ತೆರೆಕಂಡಿದ್ದ ಅನ್ನಾಬೆಲ್ಲೆ ಕಮ್ಸ್ ಹೋಮ್ ಸಿನಿಮಾ ನೋಡಲು ಹೋಗಿದ್ದರು.
ಸಿನಿಮಾ ಮುಗಿದ ಬಳಿಕ ನೋಡಿದಾಗ 77 ವರ್ಷದ ಬರ್ನಡ್ ಚನ್ನಿಂಗ್ ಎಂಬ ಹಿರಿಯ ವ್ಯಕ್ತಿ ಸಾವನ್ನಪ್ಪಿರುವುದು ತಿಳಿದಿದೆ. ಸಿನಿಮಾ ಮುಗಿದ ಬಳಿಕ ಎಲ್ಲರೂ ಎದ್ದು ಹೋಗುತ್ತಿದ್ದರು. ಆದರೆ, ಬರ್ನಡ್ ಮೇಲಕ್ಕೆ ಎದ್ದಿಲ್ಲ. ಆಗ ಪಕ್ಕದಲ್ಲಿ ಇದ್ದ ಮಹಿಳೆ ಆ ವ್ಯಕ್ತಿಯನ್ನ ಎಬ್ಬಿಸಲು ಪ್ರಯತ್ನಿಸಿದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ.
ಈ ವಿಷ್ಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆಂಬುಲೆನ್ಸ್ ನಲ್ಲಿ ಆ ವ್ಯಕ್ತಿಯ ಶವವನ್ನು ಆಸ್ಪತ್ರೆಗೆ ರವಾನಿಸಿ, ಶವ ಪರೀಕ್ಷೆ ಮಾಡಿಸುತ್ತಿದ್ದಾರೆ. ಈ ಬಗ್ಗೆ ಥಿಯೇಟರ್ ಸಿಬ್ಬಿಂದಿಗಳಿಗೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಈ ವ್ಯಕ್ತಿಯ ಸಾವಿಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಆದರೆ, 77 ವರ್ಷ ವಯಸ್ಸಾಗಿರುವುದು ಸಹಜ ಸಾವು ಅಥವಾ ಏನಾದರೂ ನಡೆದಿದ್ಯಾ ಎಂಬುದರ ಬಗ್ಗೆ ತನಿಖೆಯ ಬಳಿಕವಷ್ಟೇ ಬಹಿರಂಗವಾಗಬೇಕಿದೆ.
ಅಂದ್ಹಾಗೆ, ಅನ್ನಾಬೆಲ್ಲೆ ಕಮ್ಸ್ ಹೋಮ್ ಸಿನಿಮಾ ಜೂನ್ 26 ರಂದು ತೆರೆಕಂಡಿತ್ತು. ಇದು 2014 ಹಾಗೂ 2017ರಲ್ಲಿ ರಿಲೀಸ್ ಆಗಿದ್ದ ಅನ್ನಾಬೆಲ್ಲೆ ಚಿತ್ರದ ಸೀಕ್ವೆಲ್.


Click it and Unblock the Notifications











