For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ನಟಿಗೋಸ್ಕರ ಈ ಭೂಪ ಮಾಡಿದ್ದೇನು.?

  By Sony
  |

  ಈ ಸ್ಟಾರ್ ನಟಿಯರಿಗೋಸ್ಕರ ಸಾಮಾನ್ಯ ವ್ಯಕ್ತಿಗಳು ಅಥವಾ ಅವರ ಕಟ್ಟಾ ಅಭಿಮಾನಿಗಳು ಏನು ಬೇಕಾದ್ರೂ ಮಾಡ್ತಾರೆ ಅನ್ನೋದಕ್ಕೆ ಚೀನಾದ ಉದ್ಯಮಿಯೊಬ್ಬ ಪ್ರತ್ಯಕ್ಷ ಸಾಕ್ಷಿ.

  ಅಷ್ಟಕ್ಕೂ ಈ ಭೂಪ ಏನು ಮಾಡಿದ್ದಾನೆ ಗೊತ್ತಾ?, ಹಾಲಿವುಡ್ ನಟಿ ಮೇಘನಾ ಫಾಕ್ಸ್ ಜೊತೆ ಒಂದು ರಾತ್ರಿ ಕಳೆಯಲು ಆಕೆ ಬೇಕು ಅಂತ ಆಸ್ಟ್ರೇಲಿಯಾ ಮೂಲದ ಕಂಪೆನಿಯೊಂದಕ್ಕೆ ಬೇಡಿಕೆ ಇಟ್ಟಿದ್ದಾನೆ. ಅದಕ್ಕೋಸ್ಕರ ಈ ಅಸಾಮಿ ಮಾಡಿದ ಖರ್ಚು ಬರೋಬ್ಬರಿ 17 ಕೋಟಿ ರೂಪಾಯಿ.

  ಯೂ ಮಾರ್ಟಿನ್ ಶೂ ಎನ್ನುವ ಚೈನಾದ ಉದ್ಯಮಿ ಹಾಲಿವುಡ್ ನಟಿ ಮೇಘನಾ ಫಾಕ್ಸ್ ಮತ್ತು ಚೀನಾದ ಮಾಡೆಲ್ ಯಾಂಗ್ ಯಿಂಗ್ ಅವರನ್ನು ತನ್ನ ಬಳಿ ಕಳುಹಿಸಿಕೊಡಲು ಆಸ್ಟ್ರೇಲಿಯನ್ ಬೆಂಗಾವಲು ಸಂಸ್ಥೆ (Australian Escort Agency) ಬಳಿ ಬೇಡಿಕೆ ಇಟ್ಟು ಅವರಿಗೆ ಭರ್ಜರಿ ಮೊತ್ತದ ಹಣವನ್ನು ನೀರಿನಂತೆ ಸುರಿದಿದ್ದ.[ಗರ್ಭಿಣಿ ಆಗೋದು ಅಂದ್ರೆ ಈ ನಟಿಗೆ ಭಾರಿ ಇಷ್ಟವಂತೆ]

  ಆದರೆ ಆ ಸಂಸ್ಥೆಯವರು ಉದ್ಯಮಿಗೆ ಹಾಲಿವುಡ್ ನಟಿ ಮೇಘನಾ ಫಾಕ್ಸ್ ಬದ್ಲಾಗಿ ಬೇರೆ ಯಾವುದೋ ಹುಡುಗಿಯನ್ನು ಕಳುಹಿಸಿಕೊಟ್ಟು ಆತನಿಗೆ ಸರಿಯಾಗಿ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಇದರಿಂದ ರೋಷಗೊಂಡ ಉದ್ಯಮಿ ಇದೀಗ ಹಾಲಿವುಡ್ ನಟಿ ಮತ್ತು ಚೀನಾ ಮಾಡೆಲ್ ಯಾಂಗ್ ಯಿಂಗ್ ಅವರನ್ನು ಎನ್ ಕೌಂಟರ್ ಮಾಡಿಸುತ್ತೇನೆ ಎಂದು ರೊಚ್ಚಿಗೆದ್ದಿದ್ದಾನೆ.

  ನಟಿ ಮೇಘನಾ ಫಾಕ್ಸ್ ಳ ಹುಚ್ಚು ಪ್ರೀತಿಯಲ್ಲಿ ಕುರುಡನಾಗಿದ್ದ ಚೀನಾದ ಉದ್ಯಮಿ ಇದೀಗ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡು, ತನ್ನ ಹಣ ವಾಪಸ್ ಮಾಡಿ ಅಂತ ಆಸ್ಟ್ರೇಲಿಯನ್ ಎಸ್ಕಾರ್ಟ್ ಸಂಸ್ಥೆ ಮೇಲೆ ದೂರು ದಾಖಲಿಸಿದ್ದಾನೆ. ಅಂತೂ ಆತನಿಗೆ ಕೊನೆಗೂ ಹೆಣ್ಣು ಇಲ್ಲ, ಹೊನ್ನು ಇಲ್ಲ ಎಂಬಂತಾಗಿ ಕೈಗೆ ಚಿಪ್ಪು ಲಭಿಸಿದೆ.

  ಒಟ್ನಲ್ಲಿ ಈ ಅಸಾಮಿಯ ಅವಸ್ಥೆ ಕಂಡಾಗ ಅಬ್ಬಬ್ಬಾ ಇಂತಹ ಮನುಷ್ಯರು ಇದ್ದಾರಾ ಈ ಲೋಕದಲ್ಲಿ ಅಂತ ನಿಮಗೆ ಅನಿಸೋದು ಗ್ಯಾರೆಂಟಿ.

  English summary
  A Chinese businessman is suing an Australian escort agency because even though he paid them over GBP 2 million (Rs 17 crore) to spend a night with Hollywood Actress Megan Fox.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X