twitter
    For Quick Alerts
    ALLOW NOTIFICATIONS  
    For Daily Alerts

    Hollywood: ನಟನೆಗೆ ವಿದಾಯ ಹೇಳಿದ ವಿಶ್ವಪ್ರಸಿದ್ಧ ಆಕ್ಷನ್ ಹೀರೋ: ಕಾರಣ?

    |

    ಬ್ರೂಸ್ ವಿಲ್ಲಿಸ್ ಎಂದರೆ ಹೆಚ್ಚು ಜನರಿಗೆ ಗೊತ್ತಾಗದೇ ಇರಬಹುದು. ಆದರೆ ಇನ್‌ಸ್ಪೆಕ್ಟರ್ ಜಾನ್ ಮೆಕ್ಲೇನ್ ಎಂದರೆ ತಿಳಿಯದವರು ಕಡಿಮೆ. ಅದರಲ್ಲೂ 'ಡೈ ಹಾರ್ಡ್' ಎಂದುಬಿಟ್ಟರೆ ಮುಗಿಯಿತು. ಒಂದು ಕ್ಷಣ ಆ ಅದ್ಭುತ ಆಕ್ಷನ್ ದೃಶ್ಯಗಳು ಸೃತಿಪಟಲದಲ್ಲಿ ಪಲ್ಟಿ ಹೊಡೆಯಲಾರಂಭಿಸುತ್ತವೆ.

    'ಡೈ ಹಾರ್ಡ್' ಸಿನಿಮಾ ಸರಣಿ ವಿಶ್ವ ಸಿನಿಮಾ ಜಗತ್ತಿನ ಅತ್ಯುತ್ತಮ ಆಕ್ಷನ್ ಸಿನಿಮಾ ಸರಣಗಳಲ್ಲಿ ಒಂದು. ಆ ಸಿನಿಮಾದ ನಾಯಕ ನಟ ಬ್ರೂಸ್ ವಿಲ್ಲಿಸ್ ತನ್ನ ಅದ್ಭುತ ನಟನೆ, ರಗಡ್ ಆಕ್ಷನ್, ಸಾಹಸ ದೃಶ್ಯಗಳಿಂದ ವಿಶ್ವ ಸಿನಿ ಪ್ರೇಕ್ಷಕರಿಗೆ ಪ್ರಿಯ. ಆದರೆ ಈಗ ಜಾನ್ ವಿಲ್ಲಿಸ್ ನಟನೆಯಿಂದ ದೂರ ಸರಿಯುತ್ತಿದ್ದಾರೆ.

    ವಿಲ್ ಸ್ಮಿತ್ ಪತ್ನಿಯ ಬೋಳು ತಲೆ ಬಗ್ಗೆ ಚರ್ಚೆ: ಕೂದಲು ಕತ್ತರಿಸಿಕೊಂಡಿದ್ದೇಕೆ ಜಾಡಾ?ವಿಲ್ ಸ್ಮಿತ್ ಪತ್ನಿಯ ಬೋಳು ತಲೆ ಬಗ್ಗೆ ಚರ್ಚೆ: ಕೂದಲು ಕತ್ತರಿಸಿಕೊಂಡಿದ್ದೇಕೆ ಜಾಡಾ?

    ವಿಶ್ವದ ಜನಪ್ರಿಯ ನಟರಲ್ಲೊಬ್ಬರಾಗಿದ್ದರೂ ಸಹ ಬ್ರೂಸ್ ವಿಲ್ಲಿಸ್ ನಟನೆಯಿಂದ ದೂರ ಉಳಿಯಲಿದ್ದಾರೆ. ಇದಕ್ಕೆ ಕಾರಣ ಅವರ ಆರೋಗ್ಯ. ಬ್ರೂಸ್ ವಿಲ್ಲಿಸ್‌ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅನಿವಾರ್ಯವಾಗಿ ಅವರು ನಟನೆಯಿಂದ ಬಿಡುವು ಪಡೆಯಲೇ ಬೇಕಾಗಿದೆ.

    Action Hero Bruce Willis Stepping Away From Acting

    ಬ್ರೂಸ್ ವಿಲ್ ಅಫೇಶಿಯಾ ಹೆಸರಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಮೆದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಈ ಕಾಯಿಲೆಗೆ ತುತ್ತಾದವರು ತಾವು ಅಂದುಕೊಂಡಿದ್ದನ್ನು ಮಾತನಾಡಲು ವಿಫಲರಾಗುತ್ತಾರೆ. ಆಡಬೇಕಾದ ಪದಗಳನ್ನು ಮರೆತು ಹೋಗುತ್ತಾರೆ. ತಪ್ಪು ಪದಗಳನ್ನು ಬಳಸಿ ಮಾತನಾಡುತ್ತಾರೆ. ಇದು ಮಾತ್ರವೇ ಅಲ್ಲದೆ ಬೇರೆಯವರ ಮಾತುಗಳು ಸಹ ಅರ್ಥವಾಗದ ಸ್ಥಿತಿ ತಲುಪುತ್ತಾರೆ. ಅವರಿಗೆ ಏನು ಮಾತನಾಡಬೇಕು ಎಂಬುದು ಗೊತ್ತಿರುತ್ತದೆ, ಆದರೆ ಮೆದುಳು ಆ ಶಬ್ದವನ್ನು ನೀಡುವುದಿಲ್ಲ, ಏಕೆಂದರೆ ಅದು ಮೆದುಳಿನಲ್ಲಿ ಅಳಿಸಿ ಹೋಗಿರುತ್ತದೆ.

    ಕೇವಲ ಪದ, ಶಬ್ದಗಳನ್ನು ಮರೆಯುವುದು ಮಾತ್ರವಲ್ಲ ಬೈಕ್ ಓಡಿಸುವುದ, ಕಾರು ಓಡಿಸುವುಂಥಹಾ ಮೆದುಳಿನಲ್ಲಿ ಶಾಶ್ವತವಾಗಿ ಅಚ್ಚಾಗಿದ್ದ ವಿಷಯಗಳು ಸಹ ಅಳಿಸಿ ಹೋಗುತ್ತವೆ.

    Oscars: ಆಸ್ಕರ್ ಗೆದ್ದ ಮೂಗನ 'ಮಾತುಗಳ' ನೀವೂ ಕೇಳಿOscars: ಆಸ್ಕರ್ ಗೆದ್ದ ಮೂಗನ 'ಮಾತುಗಳ' ನೀವೂ ಕೇಳಿ

    ಮೆದುಳಿನ ಈ ಸ್ಥಿತಿ ಸಾಮಾನ್ಯವಾಗಿ ಪಾರ್ಶ್ವವಾಯು, ಮೆದುಳಿನ ಟ್ಯೂಮರ್, ತಲೆಗೆ ಪೆಟ್ಟಾಗುವುದರಿಂದ ಆಗಬಹುದಾಗಿದೆ. ಬ್ರೂಸ್ ವಿಲ್‌ಗೆ ಅಫೇಶಿಯಾ ಆಗಿದೆ ಆದರೆ ಮೇಲಿನ ಯಾವ ಕಾರಣದಿಂದ ಅಫೇಶಿಯಾಕ್ಕೆ ಅವರು ತುತ್ತಾಗಿದ್ದಾರೆ ಎಂಬುದು ತಿಳಿದು ಬಂದಿಲ್ಲ.

    ಬ್ರೂಸ್ ವಿಲ್ಲಿಸ್ ಪುತ್ರಿ ರುಮರ್, ತಂದೆಯ ಪರಿಸ್ಥಿತಿ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ''ಬ್ರೂಸ್ ವಿಲ್ಲಿಸ್‌ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಅಫೇಶಿಯಾ ಆಗಿದೆ, ಅವರು ತಮ್ಮ ಅರಿವಿನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅವರು ಅತಿಯಾಗಿ ಪ್ರೀತಿಸುವ ನಟನಾ ವೃತ್ತಿಯಿಂದ ಅವರು ಹೊರಗೆ ಉಳಿಯಬೇಕಾಗಿದೆ. ಇದು ನಮ್ಮ ಕುಟುಂಬಕ್ಕೆ ಬಹಳ ಸವಾಲಿನ ಸಮಯ. ಈ ಸವಾಲಿನ ಪಯಣದಲ್ಲಿ ನಾವು ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಬಯಸುತ್ತಿದ್ದೇವೆ. ಬ್ರೂಸ್‌ ನಿಮಗೆಲ್ಲ ಎಷ್ಟು ಮುಖ್ಯ ಎಂಬುದು ನಮಗೆ ಅರಿವಿದೆ. ಅಭಿಮಾನಿಗಳು ಬ್ರೂಸ್‌ಗೂ ಮುಖ್ಯವಾಗಿದ್ದರು'' ಎಂದು ಹೇಳಿದ್ದಾರೆ.

    1980ರಲ್ಲಿ ತೀರ ಸಣ್ಣ ಪಾತ್ರದ ಮೂಲಕ ನಟನೆ ಆರಂಭಿಸಿದ ಬ್ರೂಸ್ ವಿಲ್ಲಿಸ್ 1987 ರ 'ಬ್ಲೈಂಡ್ ಡೇಟ್' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ 1988 ರಲ್ಲಿ ಬಿಡುಗಡೆ ಆದ 'ಡೈ ಹಾರ್ಡ್' ಸಿನಿಮಾ ಬ್ರೂಸ್‌ಗೆ ವಿಶ್ವಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿತು. ಈ ವರೆಗೆ ಆರು 'ಡೈ ಹಾರ್ಡ್' ಸಿನಿಮಾಗಳು ಬಂದಿವೆ ಎಲ್ಲದರಲ್ಲೂ ಮುಖ್ಯ ಪಾತ್ರದಲ್ಲಿ ಬ್ರೂಸ್ ನಟಿಸಿದ್ದಾರೆ. ಅದರ ಹೊರತಾಗಿ ಇನ್ನೂ ಹಲವಾರು ಸಿನಿಮಾಗಳಲ್ಲಿ ಬ್ರೂಸ್ ನಟಿಸಿದ್ದಾರೆ. ಜನಪ್ರಿಯ ಸಿನಿಮಾ 'ಪಲ್ಪ್ ಫಿಕ್ಷನ್‌', 'ಒನ್ಸ್ ಅಪಾನ್ ಎ ಟೈಮ್ ಇನ್ ವೆನ್ನಿಸ್' ಇನ್ನೂ ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

    English summary
    action hero Bruce Willis stepping away from acting. Bruce Willis diagnosed with aphasia. so he is retiring from acting
    Thursday, March 31, 2022, 20:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X