twitter
    For Quick Alerts
    ALLOW NOTIFICATIONS  
    For Daily Alerts

    ಟಾಮ್ ಕ್ರೂಸ್ ಕಾರನ್ನೇ ಕದ್ದ ಐನಾತಿ ಕಳ್ಳರು

    |

    ಜಗತ್ತಿನ ಅತ್ಯುತ್ತಮ ಆಕ್ಷನ್ ಹೀರೋಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಖ್ಯಾತ ನಟ ಟಾಮ್ ಕ್ರೂಸ್‌ರ ಕಾರನ್ನೇ ಐನಾತಿ ಕಳ್ಳರು ಕದ್ದಿದ್ದಾರೆ.

    'ಮಿಷನ್ ಇಂಪಾಸಿಬಲ್' ಸಿನಿಮಾದಲ್ಲಿ ವಿಶ್ವಕ್ಕೇ ಘಾತುಕಕಾರಿಯಾದ ಅತಿ ಕ್ರೂರ ವಿಲನ್‌ಗಳನ್ನು ಹಿಡಿದು ಹೆಡೆ-ಮುರಿ ಕಟ್ಟುವ ಟಾಮ್ ಕ್ರೂಸ್‌ ತನ್ನ ಕಾರನ್ನು ಕದ್ದವರನ್ನು ಹಿಡಿಯಲು ಪೊಲೀಸರ ಮೊರೆ ಹೋಗಿದ್ದಾರೆ.

    ಆಗಿರುವುದಿಷ್ಟು, ಬರ್ಮಿಂಗ್‌ಹ್ಯಾಮ್‌ನಲ್ಲಿ 'ಮಿಷನ್ ಇಂಪಾಸಿಬಲ್ 7' ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದ ಟಾಮ್ ಕ್ರೂಸ್ ತಮ್ಮ ಬಿಎಂಡಬ್ಲು ಎಕ್ಸ್7 ಕಾರನ್ನು ಓಡಾಡಲು ಬಳಸುತ್ತಿದ್ದರು. ಚಿತ್ರೀಕರಣ ಮುಗಿಸಿ ತಾವು ತಂಗಿದ್ದ ಚರ್ಚ್‌ ಸ್ಟ್ರೀಟ್‌ನ ಗ್ರ್ಯಾಂಡ್ ಹೋಟೆಲ್‌ಗೆ ಬಂದು ಅಲ್ಲಿಯೇ ಕಾರ್ ಪಾರ್ಕ್ ಮಾಡಿದ್ದರು. ಆದರೆ ಹೊರಗೆ ಬಂದು ನೋಡಿದಾಗ ಕಾರು ಅಲ್ಲಿರಲಿಲ್ಲ. ಕೂಡಲೇ ಟಾಮ್ ಕ್ರೂಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

     Action Hero Tom Cruise Car Was Stolen In BIrmingham

    ಟಾಮ್ ಕ್ರೂಸ್ ಕಾರು ಹುಡುಕಲು ಆರಂಭಿಸಿದ ಪೊಲೀಸರು ಕಳ್ಳತನವಾದ ಜಾಗದಿಂದ ಮೂರು ಮೈಲಿ ದೂರ ಸ್ಮೆತ್‌ವಿಕ್‌ ಎಂಬಲ್ಲಿ ಕಾರನ್ನು ಪತ್ತೆ ಹಚ್ಚಿದ್ದಾರೆ. ಆದರೆ ಕಾರಿನಲ್ಲಿದ್ದ ಟಾಮ್ ಕ್ರೂಸ್‌ಗೆ ಸೇರಿದ ಎಲೆಕ್‌ಟ್ರಾನಿಕ್ ಗೆಜೆಟ್‌ಗಳು, ಉಡುಪು ಇನ್ನಿತರೆ ವಸ್ತುಗಳು ಕಾಣೆಯಾಗಿವೆ.

    ತಮ್ಮ ಕಾರನ್ನು ಹುಡುಕಿಕೊಟ್ಟ ಪೊಲೀಸರೊಂದಿಗೆ ಚಿತ್ರ ತೆಗೆಸಿಕೊಂಡಿದ್ದಾರೆ ಟಾಮ್ ಕ್ರೂಸ್. ಪೊಲೀಸರೊಂದಿಗೆ ಟಾಮ್ ಕ್ರೂಸ್ ಚಿತ್ರ ಸಖತ್ ವೈರಲ್ ಆಗಿದೆ. ಕಾಣೆಯಾಗಿರುವ ಟಾಮ್‌ ಕ್ರೂಸ್‌ಗೆ ಸೇರಿದ ವಸ್ತುಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಾರು ಪತ್ತೆಯಾದ ಸ್ಮೆತ್‌ವಿಕ್‌ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳ ಹುಡುಕಾಟವನ್ನು ನಡೆಸುತ್ತಿದ್ದಾರೆ.

    ಟಾಮ್ ಕ್ರೂಸ್ ಪ್ರಸ್ತುತ 'ಮಿಷನ್ ಇಂಪಾಸಿಬಲ್ 7' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಟಾಮ್ ಕ್ರೂಸ್, ಲಂಡನ್‌ನಲ್ಲಿರುವ ಬಾಲಿವುಡ್ ಗಾಯಕಿ ಆಶಾ ಭೋಸ್ಲೆಯ ಭಾರತೀಯ ರೆಸ್ಟೊರೆಂಟ್‌ಗೆ ಭೇಟಿ ನೀಡಿ ಭಾರತೀಯ ಖಾದ್ಯಗಳನ್ನು ಸವಿದಿದ್ದರು. ಟಾಮ್ ಕ್ರೂಸ್ ಚಿಕನ್ ಟಿಕ್ಕಾವನ್ನು ಬಹಳವಾಗಿ ಮೆಚ್ಚಿಕೊಂಡರು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದರು.

    English summary
    Hollywood action hero Tom Cruise's BMW x7 car stolen in Birmingham. Police found the car but some things of Tom Cruise were missing.
    Tuesday, September 14, 2021, 20:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X