For Quick Alerts
  ALLOW NOTIFICATIONS  
  For Daily Alerts

  ರಾಜಕೀಯಕ್ಕೆ ಎಂಟ್ರಿ ಕೊಟ್ಟ 'ಗ್ಲೋಬಲ್ ಸೂಪರ್ ಸ್ಟಾರ್' ಜಾಕಿ ಚಾನ್

  |

  ಹಾಂಕಾಂಗ್ ಮೂಲದ ಹಾಲಿವುಡ್‌ನ ಖ್ಯಾತ ನಟ, ಗ್ಲೋಬಲ್ ಸೂಪರ್ ಸ್ಟಾರ್ ಜಾಕಿ ಚಾನ್ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಹೇಳಿದ್ದಾರೆ. ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಸೇರುವುದಾಗಿ ಜಾಕಿ ಚಾನ್ ತಿಳಿಸಿದ್ದಾರೆ.

  ಜುಲೈ 1 ಬೀಜಿಂಗ್‌ನಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಶತಮಾನೋತ್ಸವ ಆಚರಣೆವೇಳೆ ಜಾಕಿ ಚಾನ್ ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ಚೀನಾ ಫಿಲ್ಮ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿರುವ ಜಾಕಿ ಚಾನ್, ಅಂದು ನಡೆದ ವಿಚಾರ ಸಂಕೀರಣದಲ್ಲಿ ಭಾಗವಹಿಸಿದ ಗಣ್ಯರಲ್ಲಿ ಜಾಕಿ ಚಾನ್ ಕೂಡ ಒಬ್ಬರು.

  ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮುಖ್ಯ ಭಾಷಣಕ್ಕೆ ಪ್ರತಿಕ್ರಿಯಿಸಿದ 67 ವರ್ಷದ ನಟ ಜಾಕಿ ಚಾನ್, "ನಾನು ಸಿಪಿಸಿಯ ಹಿರಿಮೆಯನ್ನು ನೋಡಬಲ್ಲೆ. ಅದು ಏನು ಹೇಳುತ್ತದೆ ಅದನ್ನು ಮಾಡಿದೆ. ಅದು 100ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಏನು ಭರವಸೆ ನೀಡಿದೆ ಅದನ್ನು ಕೆಲವೇ ದಶಕಗಳಲ್ಲಿ ಈಡೇರಿಸಿದೆ. ನಾನು ಸಿಪಿಸಿ ಸದಸ್ಯನಾಗಲು ಬಯಸುತ್ತೇನೆ" ಎಂದರು.

  ಹಾಂಗ್ ಕಾಂಗ್ ಪ್ರಜಾಪ್ರಭುತ್ವ ಪರ ಹೋರಾಟದ ಮೇಲೆ ಚೀನಾ ಸರ್ಕಾರ ನಡೆಸುತ್ತಿರುವ ದೌರ್ಜನ್ಯವನ್ನು ಜಾಕಿ ಚಾನ್ ಬೆಂಬಲಿಸಿದ್ದರು. 2019ರಲ್ಲಿ ಮಾತನಾಡಿದ್ದ ಸ್ಟಾರ್ ನಟ, "ನಾನು ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ನಾನು ಹೇಳಬಲ್ಲೆ. ನಾನು ಹೋದಲ್ಲೆಲ್ಲಾ ಚೀನಾದವನಾಗಿರುತ್ತೇನೆ. ಜೊತೆಗೆ ಐದು ನಕ್ಷತ್ರಗಳ ಕೆಂಪು ಧ್ವಜವನ್ನು ಪ್ರಪಂಚದಾದ್ಯಂತ ಗೌರವಿಸಲಾಗುತ್ತಿದೆ. ಹಾಂಕಾಂಗ್ ಮತ್ತು ಚೀನಾ ನನ್ನ ಮನೆ. ಚೀನ ನನ್ನ ದೇಶ, ನನ್ನ ದೇಶವನ್ನು ನಾನು ಪ್ರೀತಿಸುತ್ತೇನೆ, ನಾನು ನನ್ನ ಮನೆಯನ್ನು ಪ್ರೀತಿಸುತ್ತೇನೆ. ಹಾಂಕಾಂಗ್‌ನಲ್ಲಿ ಶೀಘ್ರ ಶಾಂತ ಮರುಕಳಿಸಲಿದೆ" ಎಂದಿದ್ದರು.

  Filmibeat Kannada Exclusive: Divya Anchan Comedy Khiladigalu Championship Journey| Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾಕಿ ಚಾನ್ ಅವರ ಮುಂದಿನ ಸಿನಿಮಾ 'ಸ್ನಾಫು' ಬಿಡುಗಡೆಗೆ ಕಾಯುತ್ತಿದ್ದಾರೆ. WWE ಸ್ಟಾರ್ ಜಾನ್ ಸೇನಾ ನಟಿಸಿದ್ದಾರೆ. ಇನ್ನು ದಿ ಡೈರಿ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

  English summary
  Global Superstar Jackie Chan to join Communist Party of China.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X