9 ಮಹಿಳೆಯರ ಮೇಲೆ ಲೈಂಗಿ*ಕ ದೌರ್ಜನ್ಯ ಎಸಗಿದ ಖ್ಯಾತ ನಟ, ಅಪ್ರಾಪ್ತೆಯ ಎದುರು ಮಾಡಿದ್ದೇನು ?
ಇದು ಬಣ್ಣದ ಲೋಕ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವಂತೆ, ಹೊರಗಡೆಯಿಂದ ಈ ಲೋಕ ತುಂಬಾನೇ ಕಲರ್ ಫುಲ್ ಆಗಿ ಕಾಣುತ್ತೆ. ಆದರೆ .. ಅದರ ಒಳಹೊಕ್ಕಾಗಲೇ ಬಣ್ಣ ಅಸಲಿ ಅಲ್ಲ ನಕಲಿ ಅನ್ನುವುದು ಮನದಟ್ಟಾಗುತ್ತೆ. ಮುಖವಾಡದ ಬದುಕು ಎಷ್ಟೊಂದು ವಿಚಿತ್ರ ಎಂದು ಅನ್ಸುತ್ತೆ. ಇನ್ನು, ಚಿತ್ರರಂಗದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ.
ಕೇವಲ ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ. ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಕಥೆ ಒಂದೇ. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವು ನಾಯಕಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದ ವ್ಯಕ್ತಿಗಳ ಜನ್ಮವನ್ನೂ ಜಾಲಾಡಿದ್ದಾರೆ.

ಇದಕ್ಕೆ ಇನ್ನೊಂದು ಕೈಗನ್ನಡಿ ಎನ್ನುವಂತೆ ಹಾಲಿವುಡ್ ಸ್ಟಾರ್ ಜೇರೆಡ್ ಲೆಟೋ ವಿರುದ್ಧ ಒಬ್ಬರಲ್ಲ .. ಇಬ್ಬರಲ್ಲ .. ಬದಲಿಗೆ ಒಂಬತ್ತು ಜನ ಮಹಿಳೆಯರು ತಿರುಗಿ ಬಿದ್ದಿದ್ದಾರೆ. ಜೇರೆಡ್ ಲೆಟೋ ಕಾಮ ಕಥೆಯನ್ನು ಹೇಳಿದ್ದಾರೆ.
ಹೌದು, ಜೇರೆಡ್ ಲೆಟೊ.. ಹಾಲಿವುಡ್‌ನ ಖ್ಯಾತ ನಾಯಕ. ಇಷ್ಟೇ ಅಲ್ಲ ಗಾಯಕ ಕೂಡ ಹೌದು. 'ಡಲ್ಲಾಸ್ ಬಯರ್ಸ್ ಕ್ಲಬ್ ' ಚಿತ್ರದಲ್ಲಿ ಟ್ರಾನ್ಸ್ ವುಮೆನ್ ಪಾತ್ರವನ್ನು ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಜೇರೆಡ್ ಲುಟೊ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಕೂಡ ಗೆದ್ದು ಬೀಗಿದ್ದರು. ಸದ್ಯ ಟ್ರಾನ್ಸ್ ಅರೆಸ್ ಎಂಬ ಚಿತ್ರ ಬಿಡುಗಡೆಯಾಗಲಿದೆ.
ಇಂಥಾ ಜೇರೆಡ್ ಲೆಟೊ ವಿರುದ್ದ ಸದ್ಯ 09 ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ಧಾರೆ.ಜೇರೆಡ್ ಲೆಟೋ ಅವರ ಕಾಮಪುರಾಣವನ್ನು ಏರ್‌ಮೇಲ್ ವಿಶೇಷವಾದ ವರದಿಯೊಂದನ್ನು ಪ್ರಕಟಿಸಿದ್ದು ಅದರಲ್ಲಿ 09 ಮಹಿಳೆಯರ ಹೇಳಿಕೆಗಳು ದಾಖಲಾಗಿವೆ. ಆ ಪೈಕಿ ಜೇರೆಡ್ ಲೆಟೋ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಮಯದಲ್ಲಿ ನಾವು ಇನ್ನೂ ಅಪ್ರಾಪ್ತರಾಗಿದ್ದೆವು ಎಂದು ಹೇಳಿದವರು ಇದ್ದಾರೆ.
2008ರಲ್ಲಿ ನನಗೆ ಇನ್ನೂ 16 ವರ್ಷ ಆ ಸಮಯದಲ್ಲಿ ನಾನು ಲೆಟೋ ಅವರ ಸ್ಟುಡಿಯೋಗೆ ಹೋದಾಗ ಅವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಇಷ್ಟೇ ಅಲ್ಲದೇ ನನ್ನೆದುರು ನಗ್ನರಾಗಿದ್ದರು ಎಂದು ಮಾಡೆಲ್ ಒಬ್ಬರು ಹೇಳಿದ್ದಾರೆ.
ಲಾಸ್ ಏಂಜಲೀಸ್‌ನ ಕೆಫೆಯಲ್ಲಿ ನಾನು ಲೆಟೋ ಅವರನ್ನು ಭೇಟಿಯಾದಾಗ ನನಗೆ 16 ವರ್ಷ ವಯಸ್ಸಾಗಿತ್ತು ಎಂದಿರುವ ಮತ್ತೊಬ್ಬ ಮಹಿಳೆ ಆ ಸಮಯದಲ್ಲಿ ವಾರಾನುವಾರ ಪಾರ್ಟಿಗೆ ಬರುವಂತೆ ಅವರು ನನಗೆ ಫೋನ್ ಮಾಡುತ್ತಲೇ ಇದ್ದರು ಎಂದು ಹೇಳಿದ್ದಾರೆ. ನಾನು ಬರಲ್ಲ ಎಂದಾಗ ನನ್ನ ಜೊತೆ ಅಶ್ಲೀಲವಾಗಿ ಅವರು ಮಾತನಾಡಲು ಶುರು ಮಾಡಿದ್ದರು ಎಂದು ಹೇಳಿದ್ದಾರೆ.
ಇನ್ನು ಜೇರೆಡ್ ಲೆಟೋ ವಿರುದ್ಧ ಆರೋಪ ಮಾಡಿರುವ ಮತ್ತೊಬ್ಬ ಮಹಿಳೆ ನಾನು ಅಪ್ರಾಪ್ತೆಯಾಗಿದ್ದಾಗ ಲೆಟೋ ನನಗೆ ಅಸಹ್ಯ ಮತ್ತು ಅಶ್ಲೀಲಕರ ಪ್ರಶ್ನೆ ಕೇಳುತ್ತಿದ್ದರು, ನನಗೆ 18 ತುಂಬಿದಾಗ ಅವರು ನನ್ನೆದುರು ಹ*ಸ್ತಮೈ* ಥುನ ಮಾಡಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.
ಅಂದ್ಹಾಗೇ 2012ರಲ್ಲಿ ಜೇರೆಡ್ ಲೆಟೊ ವಿರುದ್ದ ಮಾಡಲಾದ ಫೇಸ್‌ಬುಕ್ ಪೋಸ್ಟ್‌ನ್ನು ಡಿಜೆ ಒಬ್ಬರು ರೀ ಶೇರ್ ಮಾಡಿದ್ದರು. ಆ ಪೋಸ್ಟ್‌ನಲ್ಲಿ ನಾನು 17 ವರ್ಷದವಳಿದ್ದಾಗ ಲೆಟೋ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪ ಮಾಡಿದ್ದರು. ಈ ಪೋಸ್ಟ್‌ನ ನಂತರ 9 ಮಹಿಳೆಯರ ಈ ಪ್ರಕರಣಗಳು ಬೆಳಕಿಗೆ ಬಂದವು, ಸದ್ಯ ಮೇಲೆ ಮಾಡಲಾದ ಆರೋಪಗಳನ್ನೆಲ್ಲ ಜೇರೆಡ್ ಲೆಟೊ ತಳ್ಳಿ ಹಾಕಿದ್ದಾರೆ.


Click it and Unblock the Notifications











