69ನೇ ವಯಸ್ಸಿನಲ್ಲಿ ಅಪ್ಪನಾದ 'ಕಿಸ್ಸಿಂಗ್ ಸ್ಟಾರ್' ರಿಚರ್ಡ್

By ಜೇಮ್ಸ್ ಮಾರ್ಟಿನ್

ಹಾಲಿವುಡ್ ನ ನಟ ರಿಚರ್ಡ್ ಗೇರ್ ಗೊತ್ತಿರಬೇಕಲ್ಲ. ಭಾರತದ ಸಿನಿಪ್ರಿಯರಿಗೆ ಆತನ ರೋಮ್ಯಾಂಟಿಕ್ ಕ್ಲಾಸಿಕ್ ಸಿನಿಮಾಗಳಿಗಿಂತ, 2007ರಲ್ಲಿ ಭಾರತದಲ್ಲಿ ಕಿಸ್ ಮಾಡಿದ ಘಟನೆಯಿಂದ ವಿವಾದಕ್ಕೀಡದವರು. ಈಗ ರಿಚರ್ಡ್ ಮತ್ತೆ ಸುದ್ದಿಯಲ್ಲಿದ್ದಾರೆ.

ತಮ್ಮ 69ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ರಿಚರ್ಡ್ ಮನೆಗೆ ಮುದ್ದಾದ ಗಂಡು ಮಗು ಬಂದಿದೆ ಎಂದು ಅವರ ವಕ್ತಾರರು ಹೇಳಿದ್ದಾರೆ.

ರಿಚರ್ಡ್ ಅವರ ಪತ್ನಿ ಅಲ್ಜೆಂಡ್ರ ಸಿಲ್ವಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕ್ಯಾರಿ ಲೊವೆಲ್ ಅವರಿಂದ ರಿಚರ್ಡ್ ಗೆ 19 ವರ್ಷ ವಯಸ್ಸಿನ ಮಗನಿದ್ದಾನೆ. ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್ಬಿನ ಮಾಜಿ ಉಪಾಧ್ಯಕ್ಷ ಇಗ್ನಾಸಿಸ್ ಸಿಲ್ವಾ ಅವರ ಪುತ್ರಿಯಾಗಿರುವ ಅಲ್ಜೆಂಡ್ರಾ ಸಿಲ್ವಾ ಅವರ ಮೊದಲ ಪತಿ ಗೋವಿಂಡ್ ಫ್ರೀಡ್ ಲ್ಯಾಂಡ್ ಅವರಿಂದ ಒಬ್ಬ ಪುತ್ರನನ್ನು ಹೊಂದಿದ್ದಾರೆ.

2015ರಿಂದ ರಿಚರ್ಡ್ ಜತೆ ಒಡನಾಟ ಹೊಂದಿದ್ದ ಅಲ್ಜೆಂಡ್ರ ಸಿಲ್ವಾ(35), ಸೆಪ್ಟೆಂಬರ್ ನಲ್ಲಿ ಇನ್ಸ್ಟ್ರಾಗ್ರಾಮ್ ಪೋಸ್ಟ್ ಮೂಲಕ ತಾನು ಗರ್ಭಿಣಿ ಎಂಬ ಸಂಗತಿ ತಿಳಿಸಿದ್ದರು. ಬೌದ್ಧ ಗುರು ದಲೈಲಾಮಾ ಅವರ ಆಶೀರ್ವಾದ ಪಡೆಯುವ ಚಿತ್ರ ಇದಾಗಿತ್ತು.

Actor Richard Gere Becomes Father For the Second Time at 69

ರಿಚರ್ಡ್2002ರಲ್ಲಿ ಕ್ಯಾರಿ ಅವರನು ಮದುವೆಯಾಗಿದ್ದರು. 2016ರಲ್ಲಿ ವಿಚ್ಛೇದನ ಪಡೆದಿದ್ದರು. ಇದಕ್ಕೂ ಮೊದಲು ರಿಚರ್ಡ್ 1991 ರಲ್ಲಿ ಮೊದಲ ಮದುವೆಯಾಗಿದ್ದರು. 1995ರಲ್ಲಿ ಮದುವೆ ಮುರಿದು ಬಿದ್ದಿತ್ತು.

2007ರಲ್ಲಿ ಉತ್ತರ ಪ್ರದೇಶ ಹಾಗೂ ರಾಜಸ್ತಾನದಲ್ಲಿ ಹಾಲಿವುಡ್ ಸ್ಟಾರ್ ರಿಚರ್ಡ್ ಗೇರ್‌ ಅವರು ನಟಿ ಶಿಲ್ಪಾ ಶೆಟ್ಟಿ ಅವರನ್ನು ಬಹಿರಂಗವಾಗಿ ಚುಂಬಿಸಿದ್ದರು. ಶಿಲ್ಪಾಶೆಟ್ಟಿ ಹಾಗೂ ರಿಚರ್ಡ್ ವ್ವಿರುದ್ಧ ಕೇಸ್‌ಗಳು ದಾಖಲಾಗಿದ್ದವು. ರಿಚರ್ಡ್ ಬಂಧನಕ್ಕೂ ಕೋರ್ಟ್ ಆದೇಶಿಸಿತ್ತು. ಆದರೆ, ಸುಪ್ರೀಂಕೋರ್ಟಿನಿಂದ ಬಂಧನಕ್ಕೆ ತಡೆ ಸಿಕ್ಕಿತ್ತು.

More from Filmibeat

English summary
Hollywood actor Richard Gere has reportedly become a father once again, at the age of 69, after his wife Alejandra Silva gave birth to a boy. This is Gere’s first child with Alejandra. He already has a 19-year-old son from his previous marriage to actress Carey Lowell.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X