ನಟಿ ಸಾಂಡ್ರಾ ಬುಲಕ್ ಬರ್ತ್‌ಡೇಗೆ ಬೆತ್ತಲೆ ವಿಡಿಯೋ ಶೇರ್ ಮಾಡಿ ನಟ ರಯಾನ್ ರೆನಾಲ್ಡ್ಸ್ ಶುಭಾಶಯ

ಸೆಲೆಬ್ರೆಟಿಗಳ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸುತ್ತಾರೆ. ಇನ್ನು ಚಿತ್ರರಂಗದ ಸ್ನೇಹಿತರು ವಿಶೇಷವಾಗಿ ಶುಭ ಕೋರುತ್ತಾರೆ. ಸ್ಪೆಷಲ್ ಫೋಟೊ, ವಿಡಿಯೋ ಶೇರ್ ಮಾಡಿ ವಿಶೇಷವಾಗಿ ಕ್ಯಾಪ್ಷನ್ ಕೊಡ್ತಾರೆ. ಹಾಲಿವುಡ್ ನಟಿ ಸಾಂಡ್ರಾ ಬುಲಕ್ ಹುಟ್ಟುಹಬ್ಬಕ್ಕೆ ನಟ ರಯಾನ್ ರೆನಾಲ್ಡ್ಸ್ ಬೆತ್ತಲೆ ವಿಡಿಯೋ ಶೇರ್ ಮಾಡಿ ಶುಭಾಶಯ ಕೋರಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗ್ತಿದೆ.

ಜುಲೈ 26 ರಂದು ಸಾಂಡ್ರಾ ಬುಲಕ್ ತಮ್ಮ 59 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆಕೆಯ 59ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸಹ ಕಲಾವಿದರು ಮತ್ತು ಸ್ನೇಹಿತರು ಶುಭ ಹಾರೈಸಿದ್ದಾರೆ. ಒಂದ್ಕಾಲದಲ್ಲಿ ಸಾಂಡ್ರಾ ಸಿಕ್ಕಾಪಟ್ಟೆ ಬೋಲ್ಡ್ ಅಭಿನಯದಿಂದ ಮೋಡಿ ಮಾಡಿದ್ದರು. 'ಸಾಂಡ್ರಾ ಸ್ಪೀಡ್', 'ಗ್ರಾವಿಟಿ', 'ದಿ ಲಾಸ್ಟ್ ಸಿಟಿ;, 'ದಿ ಪ್ರಪೋಸಲ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. 'ದಿ ಪ್ರಪೋಸಲ್' ಚಿತ್ರದಲ್ಲಿ ರಯಾನ್ ರೆನಾಲ್ಡ್ಸ್ ಹಾಗೂ ಸಾಂಡ್ರಾ ಬುಲಕ್ ಒಟ್ಟಿಗೆ ನಟಿಸಿದ್ದರು.

Actor Ryan Reynolds Shares bold Video Message On Sandra Bullocks Birthday

ಸದ್ಯ ಸಾಂಡ್ರಾ ಬುಲಕ್ ಹುಟ್ಟುಹಬ್ಬಕ್ಕೆ 'ದಿ ಪ್ರಪೋಸಲ್' ಚಿತ್ರದ ಅಸಭ್ಯಕರ ವಿಡಿಯೋ ಶೇರ್ ಮಾಡಿ ರಯಾನ್ ರೆನಾಲ್ಡ್ಸ್ ಶುಭ ಕೋರಿದ್ದಾರೆ. ಅದರಲ್ಲಿ ಇಬ್ಬರು ಬೆತ್ತಲಾಗಿ ಒಬ್ಬರನ್ನೊಬ್ಬರಯ ತಬ್ಬಿಕೊಳ್ಳುವುದನ್ನು ನೋಡಬಹುದು. 'ಅಪ್ರತಿಮ ಮತ್ತು ಅದ್ಭುತ ಪ್ರತಿಭೆ ಹೊಂದಿರುವ ಸಾಂಡ್ರಾ ನಿನಗೆ ಹುಟ್ಟುಹಬ್ಬ ಶುಭಾಶಯ" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ರಯಾನ್ ರೆನಾಲ್ಡ್ಸ್ ಇಷ್ಟು ಕೆಟ್ಟದಾಗಿ ಬೆತ್ತಲೆ ವಿಡಿಯೋ ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋಡುವ ಅಗತ್ಯ ಏನಿತ್ತು? ವೆಸ್ಟರ್ನ್ ಕಲ್ಚರ್ ಆದರೂ ಇದೆಲ್ಲ ಓವರ್ ಆಗಲಿಲ್ಲವೇ ಎಂದು ಕೆಲವರು ಹೇಳುತ್ತಿದ್ದಾರೆ. ಆರ್ಡಿನರಿ ಮ್ಯಾಜಿಕ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಯಾನ್ ನಂತರ ಹಲವು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಅಡ್ವೆಂಚರ್ ಲ್ಯಾಂಡ್, ದಿ ವೇಲ್, ದಿ ಕೇಪ್ಟೀವ್, ಕ್ರಿಮಿನಲ್, ಡೆಡ್‌ಪೂಲ್, ಫ್ರೀ ಗೈ, ಬುಲ್ಲೆಟ್ ಟ್ರೈನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Ryan Reynolds Shares bold Video On Sandra Bullock's Birthday. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X