Oscars 2022 : ಆಸ್ಕರ್ಸ್ ವೇದಿಕೆ ಮೇಲೆ ಸಹ ನಟನ ಮೇಲೆ ಹಲ್ಲೆ ಮಾಡಿದ ವಿಲ್ ಸ್ಮಿತ್

ವಿಶ್ವದ ಅತ್ಯಂತ ಜನಪ್ರಿಯ ಇವೆಂಟ್‌ಗಳಲ್ಲಿ ಒಂದು ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭ. ದೊಡ್ಡ ದೊಡ್ಡ ಸ್ಟಾರ್‌ಗಳು ಬಂದಿರುವ ಈ ಕಾರ್ಯಕ್ರಮವನ್ನು ನೂರಾರು ಕೋಟಿ ಜನ ವೀಕ್ಷಿಸುತ್ತಾರೆ.

ಸ್ಟಾರ್ ನಟ-ನಟಿಯರು, ನಿರ್ದೇಶಕರು, ತಂತ್ರಜ್ಞರು ವೇದಿಕೆ ಏರಿ ಆಸ್ಕರ್ಸ್‌ ನಾಮಿನೇಶನ್ ಘೋಷಿಸಿ ನಂತರ ಪ್ರಶಸ್ತಿ ವಿಜೇತರನ್ನು ಘೋಷಿಸುವುದು ಪದ್ಧತಿ. ಪ್ರಶಸ್ತಿ ಘೋಷಿಸಲು ವೇದಿಕೆ ಏರುವ ಸ್ಟಾರ್ ನಟ-ನಟಿಯರು ಹಾಸ್ಯ ಮಾಡುತ್ತಾ, ಸಹ ನಟರ ಕಾಲೆಳುವುದು ಸಾಮಾನ್ಯ. ಆದರೆ ಆಸ್ಕರ್ಸ್ 2022 ಯಲ್ಲಿ ಇದೇ ಕಾರಣಕ್ಕೆ ಸ್ಟಾರ್ ನಟನೊಬ್ಬ ಇದೇ ಕಾರಣಕ್ಕೆ ವೇದಿಕೆ ಮೇಲೆಯೇ ಏಟು ತಿಂದಿದ್ದಾನೆ.

ಇದೀಗ 2022 ರ ಆಸ್ಕರ್ಸ್ ಪ್ರಶಸ್ತಿ ವಿತರಣೆ ಸಮಾರಂಭವು ಅಮೆರಿಕದ ಲಾಸ್ ಎಂಜಲ್ಸ್‌ನ ಡಾಲ್ಬಿ ಥೀಯೇಟರ್‌ನಲ್ಲಿ ನಡೆಯುತ್ತಿದೆ. ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿ ಘೋಷಿಸಲು ಬಂದ ನಟ ಕ್ರಿಸ್ ರಾಕ್ ವೇದಿಕೆ ಮುಂದೆ ಆಸೀನರಾಗಿದ್ದ ಕೆಲವು ನಟರ ಬಗ್ಗೆ ತಮಾಷೆ ಮಾಡುತ್ತಿದ್ದರು.

Actor Will Smith Hit Chris Rock On Stage Of Oscars 2022

ವಿಲ್ ಸ್ಮಿತ್ ಪತ್ನಿ ಹಾಗೂ ಜಾಡಾ ಪಿಂಕೆಟ್ ಸ್ಮಿತ್ ಒಟ್ಟಿಗೆ ಆಸ್ಕರ್ಸ್‌ಗೆ ಬಂದಿದ್ದರು. ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿ ಘೋಷಿಸಲು ಬಂದ ಕ್ರಿಸ್ ರಾಕ್, ವಿಲ್ ಸ್ಮಿತ್ ಪತ್ನಿ ಜಾಡಾ ತಮ್ಮ ತಲೆ ಬೋಳಿಸಿಕೊಂಡಿರುವ ವಿಷಯದ ಬಗ್ಗೆ ತಮಾಷೆ ಮಾಡಿದರು. ಕೂಡಲೇ ವೇದಿಕೆ ಏರಿದ ನಟ ವಿಲ್ ಸ್ಮಿತ್, ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದರು.

ಆರಂಭದಲ್ಲಿ ಇದು ತಮಾಷೆ ಎಂದೇ ಹಲವರು ಎಣಿಸಿದ್ದರು. ಆದರೆ ಕ್ರಿಸ್ ರಾಕ್‌ಗೆ ಹೊಡೆದು ಕೆಳಗೆ ಬಂದು ಕುಳಿತ ವಿಲ್ ಸ್ಮಿತ್, 'ನನ್ನ ಪತ್ನಿಯ ಬಗ್ಗೆ ಮಾತನಾಡಬೇಡ' ಎಂದು ಕಿರುಚಿದರು, ಅದಕ್ಕೆ ಕ್ರಿಸ್ ಓಕೆ ಎಂದರು ಮತ್ತೆ ಜೋರಾಗಿ 'ನನ್ನ ಪತ್ನಿಯ ಹೆಸರನ್ನು ನಿನ್ನ ಕೆಟ್ಟ ಬಾಯಿಂದ ಹೇಳಬೇಡ' ಎಂದು ಕಿರುಚಿದರು. ಕ್ರಿಸ್ ರಾಕ್ ಸುಮ್ಮನಾದರು.

ಬಳಿಕ ಕಾರ್ಯಕ್ರಮ ಮುಂದುವರೆಯಿತು. ಈ ಘಟನೆ ಬಳಿಕ ಹಲವರು ಕ್ರಿಸ್ ರಾಕ್ ಹಾಗೂ ವಿಲ್ ಸ್ಮಿತ್ ಬಳಿಗೆ ಬಂದು ಮಾತನಾಡುತ್ತಿರುವುದು ಕಂಡು ಬಂದಿತು. ಆಸ್ಕರ್ಸ್ ಆಯೋಜಕರು ಸಹ ವಿಲ್ ಸ್ಮಿತ್ ಹಾಗೂ ಕ್ರಿಸ್ ರಾಕ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತನಾಡಿದರು.

ವಿಲ್ ಸ್ಮಿತ್ 'ಕಿಂಗ್ ರಿಚರ್ಡ್ಸ್' ಸಿನಿಮಾದ ನಟನೆಗೆ ಅತ್ಯುತ್ತಮ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು. ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಹ ವಿಲ್ ಸ್ಮಿತ್ ಪಡೆದುಕೊಂಡರು. ಆದರೆ ವಿಲ್ ಸ್ಮಿತ್, ಆಸ್ಕರ್‌ ನಂಥಹಾ ಪ್ರಮುಖ ಕಾರ್ಯಕ್ರಮದಲ್ಲಿ ಸಹ ನಟನ ಮೇಲೆ ಹಲ್ಲೆ ಮಾಡಿದ್ದು ಭಾರಿ ವೈರಲ್ ಆಗಿದೆ.

ವಿಲ್ ಸ್ಮಿತ್, ಕ್ರಿಸ್‌ನ ಕಪಾಳಕ್ಕೆ ಹೊಡೆದಿದ್ದು ತಮಾಷೆಗೆ ಎಂದೇ ಹಲವರು ನಂಬಿದ್ದಾರೆ. ಆದರೆ ಅದು ತಮಾಷೆಯಾಗಲಿ, ಕಾರ್ಯಕ್ರಮದ ಭಾಗವಾಗಿರಲಿ ಆಗಿರಲಿಲ್ಲ ಬದಲಿಗೆ ನಿಜವಾಗಿಯೂ ವಿಲ್ ಸ್ಮಿತ್, ಕ್ರಿಸ್ ಅನ್ನು ಹೊಡೆದಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Actor Will Smith smacked actor Chris Rock On The Stage Of Oscars 2022 for making fun of his wife.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X