ನನ್ನಿಂದ ತಪ್ಪಾಗಿದೆ, ನಾನು ಮಿತಿ ಮೀರಿ ವರ್ತಿಸಿದೆ: ಸ್ಮಿತ್ ಬಹಿರಂಗ ಕ್ಷಮೆ

ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ವಿಲ್ ಸ್ಮಿತ್ ವೇದಿಕೆ ಏರಿ ನಟ ಕ್ರಿಸ್ ರಾಕ್‌ಗೆ ಕಪಾಳ ಮೋಕ್ಷ ಮಾಡಿದ್ದು ಭಾರಿ ಸುದ್ದಿಯಾಗಿದೆ. ವಿಲ್ ಸ್ಮಿತ್‌ರ ವರ್ತನೆಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕ್ರಿಸ್ ರಾಕ್‌ಗೆ ಹೊಡೆದ ಅದೇ ಕಾರ್ಯಕ್ರಮದಲ್ಲಿ ನಟ ವಿಲ್ ಸ್ಮಿತ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಸಹ ಲಭಿಸಿದೆ. ಆಸ್ಕರ್ ಪಡೆದು ಭಾವುಕವಾಗಿ ಮಾತನಾಡಿದ್ದ ವಿಲ್ ಸ್ಮಿತ್, ತಮ್ಮ ವರ್ತನೆಗೆ ಆಸ್ಕರ್‌ ಆಯೋಜಕರಿಗೆ ಹಾಗೂ ಅತಿಥಿಗಳಿಗೆ ಕ್ಷಮಾಪಣೆ ಕೇಳಿದ್ದರು. ಆದರೆ ತಾವು ಹಲ್ಲೆ ಮಾಡಿದ ಕ್ರಿಸ್ ರಾಕ್‌ಗೆ ಕ್ಷಮೆ ಕೇಳಿರಲಿಲ್ಲ. ಈಗ ಕ್ರಿಸ್ ರಾಕ್‌ಗೂ ವಿಲ್ ಸ್ಮಿತ್ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

''ನಾನು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಲು ಬಯಸುತ್ತೇನೆ. ನಾನು ಮಿತಿ ಮೀರಿ ವರ್ತಿಸಿದೆ ಹಾಗೂ ನನ್ನಿಂದ ತಪ್ಪಾಗಿದೆ. ನಾನು ಮಾಡಿದ ಕಾರ್ಯದಿಂದ ನನಗೆ ಮುಜುಗರ ಉಂಟಾಗಿದೆ. ನಾನು ಯಾವ ರೀತಿಯ ವ್ಯಕ್ತಿಯಾಗಬೇಕು ಎಂದುಕೊಂಡಿದ್ದೆನೊ ಅದಕ್ಕೆ ತಕ್ಕುದಾದ ವರ್ತನೆಯನ್ನು ನಾನು ತೋರಲಿಲ್ಲ'' ಎಂದಿದ್ದಾರೆ ವಿಲ್ ಸ್ಮಿತ್.

Actor Will Smith Publicly Apologizes To Chris Rock

''ಯಾವುದೇ ವಿಧವಾದ ಹಿಂಸೆಯು ವಿಷಕಾರಿ ಹಾಗೂ ವಿಧ್ವಂಸಕಕಾರಿಯಾದುದು. ಆಸ್ಕರ್ ಸಮಾರಂಭದಲ್ಲಿ ನಾನು ತೋರಿದ ವರ್ತನೆ ಅಕ್ಷಮ್ಯ ಮತ್ತು ಯಾವದೇ ವಿಧದಲ್ಲೂ ಸಮರ್ಥನೀಯವಲ್ಲ. ನನ್ನ ಖರ್ಚುಗಳ ಬಗ್ಗೆ ಜೋಕ್ ಮಾಡುವುದು ವೃತ್ತಿ ವಿಚಾರ, ಆದರೆ ಪತ್ನಿ ಜಾಡಾಳ ಅನಾರೋಗ್ಯದ ಬಗ್ಗೆ ತಮಾಷೆ ಮಾಡಿದ್ದನ್ನು ನನ್ನಿಂದ ಸಹಿಸಿಕೊಳ್ಳಲಾಗಲಿಲ್ಲ. ಉದ್ವೇಗಕ್ಕೊಳಗಾಗಿ ನಾನು ದಾಳಿ ನಡೆಸಿದೆ'' ಎಂದು ಘಟನೆ ನಡೆದಾಗ ತಮ್ಮ ಮನಸ್ಥಿತಿಯನ್ನು ಸ್ಮಿತ್ ವಿವರಸಿದ್ದಾರೆ.

ಆಗಿದ್ದೇನು?

ಆಸ್ಕರ್ಸ್ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಡಾಕ್ಯುಮೆಂಟರಿ ಪ್ರಶಸ್ತಿ ಘೋಷಿಸಲು ಬಂದ ನಟ ಕ್ರಿಸ್ ರಾಕ್ ವೇದಿಕೆ ಮುಂದೆ ಆಸೀನರಾಗಿದ್ದ ಕೆಲವು ನಟರ ಬಗ್ಗೆ ತಮಾಷೆ ಮಾಡುತ್ತಿದ್ದರು. ವಿಲ್ ಸ್ಮಿತ್ ಪತ್ನಿ ಜಾಡಾ ತಮ್ಮ ತಲೆ ಬೋಳಿಸಿಕೊಂಡಿರುವ ವಿಷಯದ ಬಗ್ಗೆ ತಮಾಷೆ ಮಾಡಿದರು. ಕೂಡಲೇ ವೇದಿಕೆ ಏರಿದ ನಟ ವಿಲ್ ಸ್ಮಿತ್, ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದರು. ಜಾಡಾ ಸ್ಮಿತ್‌ ಅಲೋಫೇಶಿಯಾ ಹೆಸರಿನ ಖಾಯಿಲೆಯಿಂದ ಬಳಲುತ್ತಿದ್ದು, ಅದೇ ಕಾರಣದಿಂದ ಅವರು ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಆದರೆ ಅದರ ಬಗ್ಗೆ ಕ್ರಿಸ್ ತಮಾಷೆ ಮಾಡಿದ್ದು ವಿಲ್ ಸ್ಮಿತ್‌ಗೆ ಸಿಟ್ಟು ಬಂದು ಕ್ರಿಸ್‌ರ ಕಪಾಳಕ್ಕೆ ಭಾರಿಸಿದರು.

ಅಲೋಫೇಶಿಯಾ ಎಂದರೆ, ದೇಹದ ರೋಗ ನಿರೋಧಕ ಶಕ್ತಿಯು ತಲೆ ಕೂದಲನ್ನು ದೇಹದ ವೈರಿ ಎಂದು ಭಾವಿಸಿ ತಲೆಕೂದಲನ್ನು ಬೆಳೆಯದ ಅಥವಾ ಉದುರಿಹೋಗುವ ಪರಿಸ್ಥಿತಿ ನಿರ್ಮಿಸುವುದನ್ನು ಅಲೋಫೇಶಿಯಾ ಎನ್ನುತ್ತಾರೆ. ಕೂದಲು ಉದುರಿದ ಜಾಗಗಳಲ್ಲಿ ರುಪಾಯಿ ಕಾಯಿಲ್ ಗಾತ್ರದ ಮಚ್ಚೆಗಳು ನಿರ್ಮಾಣವಾಗುತ್ತವೆ. ಕೆಲವರಿಗೆ ಒಮ್ಮೆಲೆ ಹೆಚ್ಚು ಕೂದಲು ಉದುರಿ ಬಿಡುತ್ತದೆ. 21018 ರಲ್ಲಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಜಾಡಾ ಸ್ಮಿತ್, ''ನಾನು ಸ್ನಾನ ಮಾಡುವಾಗ ಹಿಡಿಯ ತುಂಬ ಕೂದಲು ಉದುರುತ್ತಿತ್ತು. ಅದು ನನಗೆ ಆತಂಕ ತಂದಿತು. ಮೊದಲಿಗೆ ನಾನು ಬಹಳ ಭಯ ಪಟ್ಟಿದ್ದೆ. ಬಳಿಕ ಅದಕ್ಕೆ ಹೊಂದಿಕೊಂಡೆ'' ಎಂದರು. ಕೂದಲು ವಿಪರೀತ ಉದುರುತ್ತಿದ್ದ ಕಾರಣ ಕೂದಲನ್ನು ಕತ್ತರಿಸಿಕೊಳ್ಳಲು ಜಾಡಾ ನಿರ್ಧರಿಸಿದರು. 2021 ರ ಜುಲೈನಲ್ಲಿ ಮೊದಲ ಬಾರಿಗೆ ತಮ್ಮ ಬೋಳು ತಲೆಯನ್ನು ಸಾಮಾಜಿಕ ಜಾಲತಾಣದಲ್ಲಿ ಜಾಡಾ ಪ್ರದರ್ಶಿಸಿದರು.

More from Filmibeat

English summary
Actor Will Smith publicly apologizes to Chris Rock for hitting him in Oscars program. He said I crossed the limit on Oscars night.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X