twitter
    For Quick Alerts
    ALLOW NOTIFICATIONS  
    For Daily Alerts

    Will Smith resigns : ದುರ್ವತನೆ: ಆಸ್ಕರ್ಸ್‌ಗೆ ರಾಜೀನಾಮೆ ನೀಡಿದ ವಿಲ್ ಸ್ಮಿತ್

    |

    ಕಳೆದ ಕೆಲವು ದಿನಗಳಿಂದ ನಟ ವಿಲ್ ಸ್ಮಿತ್‌ರದ್ದೇ ಸುದ್ದಿ. ವಿಲ್ ಸ್ಮಿತ್ ಇದೇ ಮೊದಲ ಬಾರಿಗೆ ಅತ್ಯುತ್ತಮ ನಟನೆಗೆ ಆಸ್ಕರ್ಸ್ ಪ್ರಶಸ್ತಿ ಪಡೆದ ವಿಲ್ ಸ್ಮಿತ್, ಪ್ರಶಸ್ತಿ ಪಡೆದ ಕೆಲವೇ ದಿನಗಳಲ್ಲಿ ಆಸ್ಕರ್ಸ್‌ನ ಆಯೋಜಕ ಸಂಸ್ಥೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್‌ ಆರ್ಟ್ ಆಂಡ್ ಸೈನ್ಸ್‌ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

    ''ನಾನು ಅಕಾಡೆಮಿಯ ನಂಬಿಕೆಗೆ ದ್ರೋಹ ಬಗೆದಿದ್ದೇನೆ. ನಾನು ಇತರ ನಾಮಿನಿಗಳ ಹಾಗೂ ಇತರ ಆಸ್ಕರ್ಸ್ ಗೆದ್ದವರ ಸಂತೋಶದ ಕ್ಷಣಗಳನ್ನು ಕಸಿದುಕೊಂಡಿದ್ದೇನೆ. ಆಸ್ಕರ್ಸ್ ಗೆದ್ದವರು ಸಂಭ್ರಮಿಸುವ ಅವಕಾಶವನ್ನು ನಾನು ಕಿತ್ತುಕೊಂಡಿದ್ದೇನೆ. ನನ್ನ ವರ್ತನೆಯಿಂದ ನನಗೆ ತೀವ್ರ ಬೇಸರವಾಗಿದೆ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ'' ಎಂದು ವಿಲ್ ಸ್ಮಿತ್ ಹೇಳಿದ್ದಾರೆ.

    ನನ್ನಿಂದ ತಪ್ಪಾಗಿದೆ, ನಾನು ಮಿತಿ ಮೀರಿ ವರ್ತಿಸಿದೆ: ಸ್ಮಿತ್ ಬಹಿರಂಗ ಕ್ಷಮೆನನ್ನಿಂದ ತಪ್ಪಾಗಿದೆ, ನಾನು ಮಿತಿ ಮೀರಿ ವರ್ತಿಸಿದೆ: ಸ್ಮಿತ್ ಬಹಿರಂಗ ಕ್ಷಮೆ

    ಕೆಲವು ದಿನಗಳ ಹಿಂದೆ ನಡೆದ ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಕ್ರಿಸ್ ರಾಕ್ ವೇದಿಕೆ ಮೇಲೆ ನಿಂತು ವಿಲ್ ಸ್ಮಿತ್‌ರ ಪತ್ನಿ ಜಾಡಾರ ಬೋಳು ತಲೆಯ ಬಗ್ಗೆ ಸಣ್ಣ ಜೋಕ್ ಮಾಡಿದರು, ಇದರಿಂದ ಸಿಟ್ಟಿಗೆದ್ದೆ ವಿಲ್ ಸ್ಮಿತ್ ವೇದಿಕೆ ಮೇಲೆ ಹೋಗಿ ಕ್ರಿಸ್ ರಾಕ್‌ ಕಪಾಳಕ್ಕೆ ಭಾರಿಸಿದ್ದರು. ಇದು ಬಹಳ ದೊಡ್ಡ ಸುದ್ದಿಯಾಗಿತ್ತು.

    Actor Will Smith Resigns To Academy Membership

    ತಮ್ಮ ಈ ವರ್ತನೆಯ ಪ್ರತಿಯಾಗಿ ನಟ ವಿಲ್ ಸ್ಮಿತ್ ಬಹಿರಂಗವಾಗಿ ಕ್ಷಮಾಪಣೆ ಕೇಳಿದ್ದರು. ಈಗ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ಸಹ ನೀಡುತ್ತಿದ್ದಾರೆ.

    ''ನನ್ನ ವರ್ತನೆಯಿಂದ ನನಗೆ ಬೇಸರವಾಗಿರುವ ಕಾರಣ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಅಕಾಡೆಮಿಯು ಮುಂದೆ ನನ್ನ ವಿರುದ್ಧ ಯಾವದೇ ಕ್ರಮ ಕೈಗೊಂಡರು ಅದನ್ನು ಅನುಭವಿಸಲು ನಾನು ಸಿದ್ಧವಾಗಿದ್ದೇನೆ'' ಎಂದಿದ್ದಾರೆ ವಿಲ್ ಸ್ಮಿತ್.

    Oscars 2022 : ಆಸ್ಕರ್ಸ್ ವೇದಿಕೆ ಮೇಲೆ ಸಹ ನಟನ ಮೇಲೆ ಹಲ್ಲೆ ಮಾಡಿದ ವಿಲ್ ಸ್ಮಿತ್Oscars 2022 : ಆಸ್ಕರ್ಸ್ ವೇದಿಕೆ ಮೇಲೆ ಸಹ ನಟನ ಮೇಲೆ ಹಲ್ಲೆ ಮಾಡಿದ ವಿಲ್ ಸ್ಮಿತ್

    ವಿಲ್ ಸ್ಮಿತ್ ಪತ್ನಿ ಜಾಡಾಗೆ ಕಾಯಿಲೆಯೊಂದು ಇರುವ ಕಾರಣ ಅವರು ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದಾರೆ. 'ಜಿಐ ಜೋನ್' ಸಿನಿಮಾದ ಬಗ್ಗೆ ಮಾತನಾಡುತ್ತಾ ಕ್ರಿಸ್ ರಾಕ್, ಜಾಡಾ ವಿಷಯ ಪ್ರಸ್ತಾಪಿಸಿದರು. ಜಿಐ ಜೋನ್ ಸಿನಿಮಾದಲ್ಲಿ ಸಹ ನಾಯಕಿ ತಲೆ ಬೋಳಿಸಿಕೊಂಡಿರುತ್ತಾಳೆ. ಆರಂಭದಲ್ಲಿ ನಗುತ್ತಿದ್ದ ವಿಲ್ ಸ್ಮಿತ್, ಕೂಡಲೆ ಸಿಟ್ಟಿಗೆದ್ದು ವೇದಿಕೆ ಏರಿ ಹೋಗಿ ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದರು. ಇದರಿಂದ ಗಾಬರಿಯಾದ ಕ್ರಿಸ್ ರಾಕ್ ಆ ನಂತರ ಕಾರ್ಯಕ್ರಮ ನಿರೂಪಣೆ ಮುಂದುವರೆಸಿದರು.

    ಈ ಘಟನೆ ಆದ ಬಳಿಕ ವಿಲ್ ಸ್ಮಿತ್‌ಗೆ 'ಕಿಂಗ್ ವಿಲಿಯಮ್ಸ್' ಸಿನಿಮಾದ ನಟನೆಗೆ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ದೊರಕಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಲ್ ಸ್ಮಿತ್, ಅಕಾಡೆಮಿಗೆ ಕ್ಷಮೆ ಕೇಳಿದರು. ಆದರೆ ಕ್ರಿಸ್ ರಾಕ್‌ಗೆ ಕ್ಷಮೆ ಕೇಳಲಿಲ್ಲ. ನಂತರ ಬಹಿರಂಗವಾಗಿ ಕ್ರಿಸ್ ರಾಕ್‌ಗೆ ಕ್ಷಮಾಪಣೆ ಕೇಳಿದರು. ನಾನು ಮಿತಿ ಮೀರಿ ವರ್ತಿಸಿದೆ ಎಂದು ಒಪ್ಪಿಕೊಂಡರು.

    English summary
    Actor Will Smith resigns to academy membership. He says I am heartbroken, I regret my actions, will accept any further consequences academy deems appropriate.
    Saturday, April 2, 2022, 10:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X