ವಿಚ್ಛೇದನದ ಬಳಿಕ ಕುಸಿದು ಹೋಗಿದ್ದ ನಟಿ ಏಂಜಲೀನಾ ಜೋಲಿ, ಹಾಲಿವುಡ್ ತೊರೆಯುತ್ತಾರಾ..?

ಹಾಲಿವುಡ್ ತಾರೆ ಏಂಜಲೀನಾ ಜೋಲಿ ಯಾರಿಗೆ ತಾನೇ ಗೊತ್ತಿಲ್ಲ. ತಮ್ಮ ಅದ್ಭುತ ಅಭಿನಯದಿಮದ ಎಲ್ಲರ ಮನಗೆದ್ದವರು. ಜೊತೆಗೆ ತಮ್ಮ ಸಾಮಾಜಿಕ ಕೆಲಸಗಳಿಂದಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಹಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ನಟಿ ಚಿತ್ರೋದ್ಯಮವನ್ನು ಬಿಡುವ ಮಾತುಗಳನ್ನಾಡಿದ್ದಾರೆ.

ಹೌದು, ನಟಿ ಏಂಜಲೀನಾ ಜೋಲಿ ಅವರು ನಟ ಬ್ರಾಡ್ ಪಿಟ್‌ ಅವರಿಂದ ವಿಚ್ಛೇದನ ಪಡೆದ ಬಗ್ಗೆ ಮತ್ತು ಆ ನಂತರದ ಬೆಳವಣಿಗೆಗಳ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಕಳೆದ ಒಂದು ದಶಕದಿಂದ ತಾನು ತಾನಾಗಿಯೇ ಇರಲಿಲ್ಲ. ಕೊನೆಗೆ ಹಾಲಿವುಡ್‌ನಲ್ಲಿ ಇರುವುದೇ ತನಗೆ ಸರಿ ಎನಿಸುತ್ತಿರಲಿಲ್ಲ ಹಾಗಾಗಿ ಹಾಲಿವುಡ್ ತೊರೆಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.

Actres Angelina Jolie talks about her divorce and plans to leave Hollywood

ವಿಚ್ಛೇದನದ ನಂತರ ತನ್ನ ಜೀವನದ ಮೇಲೆ ಭಾರಿ ಪರಿಣಾಮ: ಏಂಜೆಲಿನಾ ಜೋಲಿ

ವಾಲ್ ಸ್ಟ್ರೀಟ್ ಜರ್ನಲ್‌ನೊಂದಿಗೆ ಮಾತನಾಡಿದ ನಟಿ ಏಂಜೆಲಿನಾ ಜೋಲಿ, "ನಾಣು ನಟಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದಾಗ ಹೀಗಿರಲಿಲ್ಲ. ಎಲ್ಲವನ್ನೂ ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೆಂದಿರಲಿಲ್ಲ. ಅಂತಹ ನಿರೀಕ್ಷೆ ಕೂಡ ಇರಲಿಲ್ಲ. ಹಾಗಿದ್ದರೇ ನಾನು ನಟಿಯಾಗುತ್ತಿರಲಿಲ್ಲ" ಎಂದಿದ್ದಾರೆ.

"ನನ್ನ ದೇಹವು ಒತ್ತಡಕ್ಕೆ ತುಂಬಾ ಬೇಗನೇ ಪ್ರತಿಕ್ರಿಯಿಸುತ್ತದೆ. ನನ್ನ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಕೆಲವೊಮ್ಮೆ ಕಡಿಮೆಯಾಗುತ್ತದೆ. ನನ್ನ ವಿಚ್ಛೇದನಕ್ಕೆ ಆರು ತಿಂಗಳ ಮೊದಲು ನಾನು ಇದ್ದಕ್ಕಿದ್ದಂತೆ ಮುಖದ ಪಾರ್ಶ್ವವಾಯುವಿಗೆ ಒಳಗಾಗಿದ್ದೆ" ಎಂದು ಏಂಜಲೀನಾ ಜೋಲಿ ಹೇಳಿದ್ದಾರೆ.

ಹಾಲಿವುಡ್ ಆರೋಗ್ಯಕರ ಸ್ಥಳವಲ್ಲ: ಏಂಜಲೀನಾ ಜೋಲಿ

ನಟಿ ಹಾಲಿವುಡ್ ತೊರೆಯುವ ಬಗ್ಗೆ ಮತ್ತಷ್ಟು ಮಾತನಾಡಿದ್ದು, "ನನ್ನ ವಿಚ್ಛೇದನದ ನಂತರ ಏನಾಯಿತು ಎಂಬುದರ ಒಂದು ಭಾಗ. ನಾನು ಬದುಕುವ ಮತ್ತು ಮುಕ್ತವಾಗಿ ಪ್ರಯಾಣಿಸುವ ಸಾಮರ್ಥ್ಯ ಕಳೆದುಕೊಂಡೆ. ನನಗೆ ಸಾಧ್ಯವಾದಾಗ ನಾನು ಚಲಿಸುತ್ತೇನೆ. ನಾನು ಇಲ್ಲೇ ಇರಬೇಖು ಎಂದು ಬೇರು ಬಿಟ್ಟಿಲ್ಲ ಹಾಲಿವುಡ್ ಆರೋಗ್ಯಕರ ಸ್ಥಳವಲ್ಲ. ಆದ್ದರಿಂದ ಅದನ್ನು ತೊರೆಯಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

Actres Angelina Jolie talks about her divorce and plans to leave Hollywood

ಏಂಜಲೀನಾ ಜೋಲಿ ಮತ್ತು ಬ್ರಾಡ್ ಪಿಟ್

2004 ರಲ್ಲಿ ಮಿಸ್ಟರ್ ಅಂಡ್ ಮಿಸೆಸ್ ಸ್ಮಿತ್ ಚಿತ್ರೀಕರಣದ ಸಮಯದಲ್ಲಿ ಏಂಜಲೀನಾ ಜೋಲಿ ಮತ್ತು ಬ್ರಾಡ್ ಪಿಟ್ ಭೇಟಿಯಾದರು. 10 ವರ್ಷಗಳ ಕಾಲ ಇಬ್ಬರೂ ಡೇಟಿಂಗ್ ಮಾಡಿ, 2014 ರಲ್ಲಿ ಮದುವೆಯಾದರು. 2016 ರಲ್ಲಿ ವಿಚ್ಛೇದನ ಪಡೆದರು. ಇಬ್ಬರಿಗೆ ಆರು ಮಕ್ಕಳಿದ್ದಾರೆ. 17 ವರ್ಷ ವಯಸ್ಸಿನ ಮ್ಯಾಡಾಕ್ಸ್, 15 ವರ್ಷದ ಪ್ಯಾಕ್ಸ್, 14 ವರ್ಷದ ಜಹಾರಾ, 13 ವರ್ಷ ವಯಸ್ಸಿನ ಶಿಲೋಹ್ ಮತ್ತು 10 ವರ್ಷ ವಯಸ್ಸಿನ ಅವಳಿಗಳಾದ ವಿವಿಯೆನ್ ಮತ್ತು ನಾಕ್ಸ್.

ಆಸ್ತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಇನ್ನೂ ಕಾನೂನು ಜಗಳ ನಡೆಯುತ್ತಿದೆ. ಜೂನ್‌ನಲ್ಲಿ, ಬ್ರಾಡ್ ಪಿಟ್ ತನ್ನನ್ನು ಸಂಪರ್ಕಿಸದೆ ತಮ್ಮ ಫ್ರೆಂಚ್ ದ್ರಾಕ್ಷಿತೋಟದ ಭಾಗವನ್ನು ಮಾರಾಟ ಮಾಡಿದ್ದಕ್ಕಾಗಿ ಏಂಜಲೀನಾ ಜೋಲಿ ವಿರುದ್ಧ ಮೊಕದ್ದಮೆ ಹೂಡಿದರು.

ಏಂಜಲೀನಾ ಜೋಲಿ

ಏಂಜಲೀನಾ ಜೋಲಿ ಹೊಸ ಸಿನಿಮಾಗಳಲ್ಲಿ ಕಡಿಮೆ ಎಂದರೇ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಲಿವುಡ್ ಬಿಡಬೇಕು ಎನ್ನುವ ಅವರ ನಿರ್ಧಾರ ಗಟ್ಟಿಯಾದಂತೆ ಅನ್ನಿಸುತ್ತಿದೆ. ಇನ್ನು, ಅವರು ಎಟರ್ನಲ್ಸ್ (2021) ನಲ್ಲಿ ಮತ್ತು 2020 ರ ಬಿಡುಗಡೆಯಾದ ಡಿಸ್ನಿಯ ಕಮ್ ಅವೇಯಲ್ಲಿ ಪೋಷಕ ಪಾತ್ರ ಮಾಡಿದ್ದರು. ಮುಂಬರುವ ಚಿತ್ರ, ಕುಂಗ್ ಫೂ ಪಾಂಡ 4 ಗೆ ತಮ್ಮ ಧ್ವನಿ ನೀಡಿದ್ದಾರೆ. ನಟಿ ಪ್ಯಾಬ್ಲೋ ಲಾರೇನ್ ಅವರ ಮಾರಿಯಾ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

More from Filmibeat

English summary
Actres Angelina Jolie plans to leave Hollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X