»   » ಎಲ್ಲವೂ ಮಕ್ಕಳಿಗಾಗಿ: ಬಾಡಿಗೆ ಮನೆಗೆ ಶಿಫ್ಟ್ ಆದ ನಟಿ ಏಂಜಲೀನಾ

ಎಲ್ಲವೂ ಮಕ್ಕಳಿಗಾಗಿ: ಬಾಡಿಗೆ ಮನೆಗೆ ಶಿಫ್ಟ್ ಆದ ನಟಿ ಏಂಜಲೀನಾ

By: ಸೋನು ಗೌಡ
Subscribe to Filmibeat Kannada

ಆದರ್ಶ ದಂಪತಿಗಳಾಗಿ ಎಲ್ಲರಿಗೂ ಮಾದರಿಯಾಗಿದ್ದ, ಹಾಲಿವುಡ್ ನ ಖ್ಯಾತ ಜೋಡಿ ನಟ-ನಿರ್ಮಾಪಕ ಬ್ರಾಡ್ ಪಿಟ್ ಮತ್ತು ನಟಿ ಏಂಜಲೀನಾ ಜೋಲಿ, ಬೇರೆಯಾಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದು ಗೊತ್ತೇ ಇದೆ.

ಈಗಾಗಲೇ ವಿಚ್ಛೇದನ ಕೋರಿ ಅರ್ಜಿ ಹಾಕಿರುವ ದಂಪತಿ, ಬೇರೆ-ಬೇರೆಯಾಗಿ ವಾಸವಾಗಿದ್ದಾರೆ. ನಟ ಬ್ರಾಡ್ ಪಿಟ್ ಅವರು ತಮ್ಮ 6 ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾರೆ, ಅನ್ನೋ ಕಾರಣ ನೀಡಿ ನಟಿ ಏಂಜಲೀನಾ ಅವರು ತಮ್ಮ ಪತಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.[ಏಂಜಲೀನಾ-ಬ್ರಾಡ್ ವಿಚ್ಛೇದನದ ಅಸಲಿ ಕಾರಣ ಇದು]

ಇದೀಗ ಈ ದಂಪತಿ ಕಡೆಯಿಂದ ಬಂದ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ನಟಿ ಏಂಜಲೀನಾ ಅವರು ತಮ್ಮ 6 ಮಕ್ಕಳ ಜೊತೆಗೂಡಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಮುಂದೆ ಓದಿ...

ಲಾಸ್ ಏಂಜಲೀಸ್ ನಲ್ಲಿ ಬಾಡಿಗೆ ಮನೆ

ಲಾಸ್ ಏಂಜಲೀಸ್ ನಲ್ಲಿನ ಬೀಚ್ ಪಕ್ಕದಲ್ಲಿಯೇ, ಸುಮಾರು 5 ಬೆಡ್ ರೂಮ್ ಇರುವ, ಚೆನ್ನಾಗಿ ಗಾಳಿ-ಬೆಳಕು ಬರುವ, ಮಕ್ಕಳಿಗೆ ಸೂಕ್ತವಾಗಿರುವಂತಹ ಬಾಡಿಗೆ ಮನೆಯನ್ನು ಆಯ್ಕೆ ಮಾಡಿಕೊಂಡಿರುವ ಏಂಜಲೀನಾ ಅವರು ಈಗಾಗಲೇ ತಮ್ಮ ಮಕ್ಕಳ ಜೊತೆ ವಾಸ್ತವ್ಯ ಹೂಡಿದ್ದಾರೆ.[ಜನಪ್ರಿಯ ಜೋಡಿಯಲ್ಲಿ ಬಿರುಕು, ಟ್ವಿಟ್ಟರಲ್ಲಿ ಹಾಸ್ಯದ ಹೊಳೆ]

ಎಲ್ಲಾ ಸೌಲಭ್ಯವುಳ್ಳ ಮನೆ

ಹೋಮ್ ಥಿಯೇಟರ್, ಪ್ರತ್ಯೇಕ ಅತಿಥಿ ಕೋಣೆ, ಬಾತ್ ರೂಮ್, ಜಿಮ್ ಕೋಣೆ, ವಿಶಾಲವಾದ ಡೈನಿಂಗ್ ಹಾಲ್ ಮತ್ತು ಮಕ್ಕಳಿಗೆ ಆಟವಾಡಲು ವಿಶಾಲವಾದ ಜಾಗ ಇರುವ ಸೂಪರ್-ಸ್ಪೆಷಾಲಿಟಿ ಮನೆಯನ್ನು ನಟಿ ಏಂಜಲೀನಾ ಅವರು ಆಯ್ಕೆ ಮಾಡಿಕೊಂಡಿದ್ದಾರೆ.

ಅಬ್ಬಬ್ಬಾ..ಇಷ್ಟೊಂದು ಬಾಡಿಗೆನಾ?

ಅಂದಹಾಗೆ ಇಷ್ಟೆಲ್ಲಾ ವ್ಯವಸ್ಥೆ ಇರುವ ಈ ಮನೆಗೆ ಹಾಲಿವುಡ್ ಬೆಡಗಿ ಪ್ರತೀ ತಿಂಗಳು $95,000 ಅಂದ್ರೆ, ನಮ್ಮ ಇಂಡಿಯನ್ ರೂ.ನಲ್ಲಿ ಬರೋಬ್ಬರಿ 63 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಾರಂತೆ.

ಎಲ್ಲವೂ ಮಕ್ಕಳಿಗಾಗಿ

ತಮ್ಮ 6 ಮಕ್ಕಳಿಗಾಗಿ ಏನು ಬೇಕಾದ್ರೂ ಮಾಡಲು ಸಿದ್ದಳಿರುವ ನಟ ಏಂಜಲೀನಾ ಅವರು, ಗಂಡನ ಆಸ್ತಿ-ಪಾಸ್ತಿ, ಹಣ-ಅಂತಸ್ತು ಎಲ್ಲವನ್ನೂ ತೊರೆದು, ಬರೀ ಕೈಯಲ್ಲಿ ಬಾಡಿಗೆ ಮನೆಗೆ ಬಂದು ನೆಲೆಸಿದ್ದಾರೆ ಅಂದ್ರೆ ನೀವೇ ಊಹಿಸಿ, ಏಂಜಲೀನಾ ಅವರ ತಾಯಿ ಪ್ರೀತಿ ಎಂತಹದ್ದು ಅಂತ.

ಗಂಡನೊಂದಿಗೆ ಸಂಪೂರ್ಣ ಸಂಪರ್ಕ ಕಡಿದ ಏಂಜಲೀನಾ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ನಟಿ ಏಂಜಲೀನಾ ಅವರು ತಮ್ಮ ಪತಿ ನಟ-ನಿರ್ಮಾಪಕ ಬ್ರಾಡ್ ಪಿಟ್ ಅವರ ಜೊತೆ ಸಂಪೂರ್ಣ ಸಂಪರ್ಕ ಕಡಿದುಕೊಳ್ಳಲು ನಿರ್ಧರಿಸಿದ್ದು, ಮುಂದೆ ಸಿನಿಮಾ ಕೂಡ ಜೊತೆಯಾಗಿ ಮಾಡೋದಿಲ್ವಂತೆ. ಈಗಾಗಲೇ ಒಂದು ಸಿನಿಮಾ ಒಟ್ಟಿಗೆ ಮಾಡಬೇಕಿತ್ತು. ಆದ್ರೆ ಏಂಜಲೀನಾ ಅವರು 'ನೋ' ಎಂದಿದ್ದಾರೆ.

English summary
Hollywood Actress Angelina Jolie and actor Brad Pitt will no longer be married or will no longer be together. The couple has already filed for a divorce just last week. Now Angelina Jolie has already shifted to a rental house with her six kids before filing their divorce.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada