For Quick Alerts
  ALLOW NOTIFICATIONS  
  For Daily Alerts

  ನೀಲಿ ಚಿತ್ರತಾರೆಯ ಕ್ರೂರ ಹತ್ಯೆ: ಕೊಲೆಗಾರನನ್ನು ಹಿಡಿದಿದ್ದು ಬಲು ರೋಚಕ

  |

  ಚಾರ್‌ಲೊಟೆ ಅಗೊನಿ ಅಲಿಯಾಸ್ ಕರೊಲ್ ಮಾಲ್ಟೆಸಿ ಹೆಸರಿನ ಇಟಾಲಿಯನ್ ನೀಲಿ ಚಿತ್ರತಾರೆಯನ್ನು ಆಕೆಯ ಬಾಯ್‌ಫ್ರೆಂಡ್ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.

  ಕರೊಲ್ಳ ಬಾಯ್‌ಫ್ರೆಂಡ್ ಡೇವಿಡ್ ಫೊಂಟೋನಾ ಕರೊಲ್ಳನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ನಟಿಯ ತುಂಡು-ತುಂಡಾದ ದೇಹವು ನಾಲ್ಕು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಸಿಕ್ಕಿದ್ದಾಗಿ ಬ್ರೇಸಿಯಾ ನಗರದ ಪೊಲೀಸರು ತಿಳಿಸಿದ್ದಾರೆ.

  ಕರೊಲ್ಳ ನೆರೆ ಮನೆಯಲ್ಲಿಯೇ ಬ್ಯಾಂಕರ್ ಆಗಿದ್ದ ಡೇವಿಡ್ ಫೊಂಟೋನಾ ವಾಸವಿದ್ದ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಡೇವಿಡ್ ಫೊಂಟೋನಾ, ಕರೊಲ್ ಜೊತೆ ಜಗಳ ಮಾಡಿಕೊಂಡು ಕಳೆದ ಜನವರಿಯನ್ನು ನಟಿಯನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ.

  ಆಕೆಯನ್ನು ಕೊಂದ ಬಳಿಕ ಆಕೆಯ ದೇಹವನ್ನು ಫ್ರಿಜ್‌ನಲ್ಲಿಟ್ಟಿದ್ದಾನೆ. ಕೆಲ ದಿನಗಳ ಬಳಿಕ ಆಕೆಯ ದೇಹವನ್ನು ತುಸು ತುಸುವೇ ಕತ್ತರಿಸಿದ್ದಾನೆ. ನಂತರ ಇತ್ತೀಚೆಗೆ ದೇಹದ ಕೆಲ ಭಾಗವನ್ನು ಸುಡಲು ಯತ್ನಿಸಿದ್ದಾನೆ ಆದರೆ ಸಾಧ್ಯವಾಗಿಲ್ಲ. ಬಳಿಕ ಕತ್ತರಿಸಿದ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಅದನ್ನು ಬಿಸಾಡಿದ್ದಾನೆ.

  ಕರೊಲ್ಳ ಕೊಲೆ ಜನವರಿಯಲ್ಲಿಯೇ ಆಗಿದೆಯಾದರೂ ಆಕೆ ಕಾಣೆಯಾಗಿದ್ದಾಳೆ ಎಂದು ಮಾರ್ಚ್ ತಿಂಗಳ ಆರಂಭದಲ್ಲಿ ದೂರು ದಾಖಲಾಗಿದೆ. ಫೆಬ್ರವರಿ ತಿಂಗಳಲ್ಲಿ ಆಕೆ ಹಾಜರಾಗಬೇಕಾಗಿದ್ದ ಪೋಲ್ ಡ್ಯಾನ್ಸ್‌ ಒಂದಕ್ಕೆ ಹಾಜರಾಗದಿದ್ದಾಗ ಆಯೋಜಕರು ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಆಕೆಯ ಹುಡುಕಾಟ ಆರಂಭಿಸಿದ್ದಾರೆ.

  ಕೊಲೆ ಮಾಡಿದ ಡೇವಿಡ್ ಸಹ ಕರೊಲ್ ಇನ್ನೂ ಬದುಕಿದ್ದಾಳೆ ಎಂಬಂತೆಯೇ ವರ್ತಿಸಿದ್ದಾನೆ. ಆಕೆಯ ಮನೆಯ ಬಾಡಿಗೆ ಕಟ್ಟಿದ್ದಾನೆ. ಆಕೆಯ ಮೊಬೈಲ್‌ನಿಂದ ಇತರರಿಗೆ ಸಂದೇಶಗಳನ್ನು ಕಳಿಸಿದ್ದಾನೆ. ತನ್ನ ಮೊಬೈಲ್‌ಗೂ ಸಂದೇಶಗಳನ್ನು ಕಳಿಸಿ ಅದಕ್ಕೆ ಪ್ರತಿಕ್ರಿಯೆ ಸಹ ನೀಡಿದ್ದಾನೆ.

  ಆದರೆ ಪೊಲೀಸರು ನಟಿ ಕರೊಲ್ಳನ್ನು ಹುಡುಕುತ್ತಿರುವುದು ಗೊತ್ತಾದ ಬಳಿಕ ಬ್ರೇಸಿಯಾ ನಗರದ ಬಳಿ ಕಣಿವೆ ಪ್ರದೇಶಕ್ಕೆ ತೆರಳಿ ನಟಿಯ ದೇಹದ ತುಂಡುಗಳನ್ನು ಎಸೆದಿದ್ದಾನೆ. ದೇಹದ ತುಂಡುಗಳನ್ನು ಎಸೆಯುವ ಮುನ್ನ ಆಕೆಯ ಮುಖವನ್ನು ಗುರುತು ಸಿಗದಂತೆ ಪೂರ್ತಿಯಾಗಿ ಸುಟ್ಟಿದ್ದಾನೆ.

  ಆದರೆ ಪೊಲೀಸರು ದೇಹದ ತುಂಡುಗಳನ್ನು ವಶಪಡಿಸಿಕೊಂಡಾಗ ನಟಿಯ ದೇಹದ ಮೇಲಿದ್ದ ಟ್ಯಾಟೂಗಳು ಗುರುತಿಸಿದ್ದಾರೆ. ಪತ್ರಕರ್ತನೊಬ್ಬ ಆ ಟ್ಯಾಟೂಗಳು ನಟಿ ಕರೊಲ್ಳ ದೇಹದ ಮೇಲಿನ ಟ್ಯಾಟೂಗಳೊಂದಿಗೆ ಹೋಲುತ್ತಿರುವುದನ್ನು ಗಮನಿಸಿ. ತನ್ನ ಬಳಿ ಇದ್ದ ಕರೊಲ್ಳ ಮೊಬೈಲ್‌ ಸಂಖ್ಯೆಗೆ ಅನುಮಾನದಿಂದಲೇ ಸಂದೇಶ ಕಳಿಸಿದ್ದಾನೆ.

  ಆಗ ಕೊಲೆಗಾರ ಡೇವಿಡ್ ಪತ್ರಕರ್ತನಿಗೆ ಕರೊಲ್ಳಂತೆ ರಿಪ್ಲೈ ಮಾಡಿ, ''ಬಹಳ ಜನ ಆ ಹುಡುಗಿಯ ಬಗ್ಗೆ ನನಗೆ ಹೇಳಿದ್ದಾರೆ. ಆದರೆ ನಾನು ಆರಾಮವಾಗಿದ್ದೇನೆ'' ಎಂದಿದ್ದಾನೆ. ಇದನ್ನು ಗಮನಿಸಿದ ಆ ಪತ್ರಕರ್ತ, ಸತ್ತ ವ್ಯಕ್ತಿಯ ಮೊಬೈಲ್‌ನಿಂದ ಕೊಲೆಗಾರ ಮಾತ್ರವೇ ರಿಪ್ಲೈ ಮಾಡಬಲ್ಲ ಎಂಬುದನ್ನು ಊಹಿಸಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾನೆ. ಮೃತ ದೇಹದ ಮೇಲಿರುವ ಟ್ಯಾಟೂಗಳು ಹಾಗೂ ನಟಿ ಕರೊಲ್ ದೇಹದ ಮೇಲಿರುವ ಟ್ಯಾಟೂಗಳು ಒಂದೇ ಎಂಬುದನ್ನು ಸಹ ತಿಳಿಸಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ.

  English summary
  Actress Carol Maltesi killed by her boyfriend. police found killer by the help of tatoos.
  Friday, April 1, 2022, 10:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X