ಅಂದು ನೋವು ನುಂಗಿದ್ದ ನಟಿ ಇಂದು ಆಸ್ಕರ್ ವೇದಿಕೆ ಮೇಲೆ ಚಪ್ಪಾಳೆ ಗಿಟ್ಟಿಸಿದ್ಳು.!

ಸಿನಿಮಾರಂಗಕ್ಕೆ ಎಂಟ್ರಿ ಕೊಡಬೇಕು, ನಾಯಕಿಯಾಗಿ ಗುರುತಿಸಿಕೊಳ್ಳಬೇಕು ಎಂದರೆ ಸುಂದರವಾಗಿರಬೇಕು, ತೆಳ್ಳಗೆ ಬಳಕುವ ಬಳ್ಳಿಯಂತೆ ಇರಬೇಕು ಎನ್ನುವ ಒಂದು ಫಾರ್ಮುಲ ಕ್ರಿಯೆಟ್ ಆಗಿದೆ. ಹಾಗಾಗಿಯೆ ನಟಿಮಣಿಯರು ಫಿಟ್ ನೆಸ್ ಗಾಗಿ ಏನೆಲ್ಲ ಮಾಡುತ್ತಾರೆ ಎನ್ನುವುದನ್ನು ನೋಡುತ್ತಿರುತ್ತೀರಿ. ಜಿಮ್, ವರ್ಕೌಟ್, ಡಯೆಟ್, ಯೋಗ ನಟಿಯರ ಜೀವನದ ಒಂದು ಭಾಗವಾಗಿದೆ.

ಆದರೆ ಇತ್ತೀಚಿಗೆ ಇದು ಬದಲಾಗುತ್ತಿದೆ ಎಂದು ಹೇಳಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅಮೆರಿಕದ ನಟಿ ಕ್ರಿಸ್ಸಿ ಮೆಟ್ಜ್. ಸಿನಿಮಾ ರಂಗದ ಈ ಫಾರ್ಮುಲಾಗೆ ಸೆಡ್ಡು ಹೊಡೆದು ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ದಪ್ಪಗೆ ಗುಂಡಗೆ ಇರುವ ಅಮೆರಿಕದ ನಟಿ ಮತ್ತು ಗಾಯಕಿ ಕ್ರಿಸ್ಸಿ ಮೆಟ್ಜ್ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಚಿತ್ರರಂಗದಲ್ಲಿ ಅದರಲ್ಲೂ ನಟಿಮಣಿಯರಿಗೆ ಸಾಧನೆ ಎನ್ನುವುದು ಕೇವಲ ತೆಳ್ಳಗೆ, ಸೌಂದರ್ಯವಂತರಿಗೆ ಮಾತ್ರ ಸೀಮಿತವಾಗಿಲ್ಲ, ಪ್ರತಿಭೆ, ಛಲ ಇದ್ದರೆ ಯಾರು ಬೇಕಾದರು ಸಾಧಿಸಬಹುದು ಎನ್ನುವುದನ್ನು ಕ್ರಿಸ್ಸಿ ಮೆಟ್ಜ್ ನಿರೂಪಿಸಿದ್ದಾರೆ. ಒಂದು ಕಾಲದಲ್ಲಿ ಅವಮಾನ, ತಿರಸ್ಕಾರಕ್ಕೆ ಒಳಗಾಗಿದ್ದ ಕ್ರಿಸ್ಸಿ ಈಗ ಆಸ್ಕರ್ ವೇದಿಕೆ ಮೇಲೆ ನಿಂತು ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

Actress Chrissy Metz Perform Breakthrough Song At 2020 Oscars Ceremony

ಹೌದು, ಕ್ರಿಸ್ಸಿ ಮೆಟ್ಜ್ ಇತ್ತೀಚಿಗೆ ನಡೆದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅದ್ಭುತವಾಗಿ ಹಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಕ್ರಿಸ್ಸಿ ಅಭಿನಯದ 'ಬ್ರೇಕ್ ಥ್ರೂ' ಸಿನಿಮಾ ಆಸ್ಕರ್ ಗೆ ನಾಮಿನೇಟ್ ಆಗಿತ್ತು. ಈ ಸಿನಿಮಾದಲ್ಲಿ ಕ್ರಿಸ್ಸಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

'ಬ್ರೇಕ್ ಥ್ರೂ' ಸಿನಿಮಾದ "ಐ ಯಾಮ್ ಸ್ಟಾಂಡಿಂಗ್ ವಿಥ್ ಯೂ" ಹಾಡನ್ನು ಹಾಡಿ ಎಲ್ಲರನ್ನು ಕ್ರಿಸ್ಸಿ ಮಂತ್ರಮುಗ್ಧ ಗೊಳಿಸಿದ್ದರು. ಮೊದಲ ಬಾರಿಗೆ ಆಸ್ಕರ್ ವೇದಿಕೆ ಹತ್ತಿದ ಕ್ರಿಸ್ಸಿಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಇಡೀ ವಿಶ್ವವೆ ಬೆರಗಾಗಿದೆ. ಆಕೆಯ ಹಾಡಿಗೆ ಮಾರುಹೋಗಿದ್ದಾರೆ.

Actress Chrissy Metz Perform Breakthrough Song At 2020 Oscars Ceremony

ಕ್ರಿಸ್ಸಿ ಹಾಡಿದ ಹಾಡನ್ನು ಬರೆದ ಡಯೇನ್ ವಾರೆನ್ ಸಹ ಕ್ರಿಸ್ಸಿ ಹಾಡನ್ನು ಕೇಳಿ ಆಚ್ಚರಿ ಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಡಯೇನ್ ಈ ಹಾಡನ್ನು ಖ್ಯಾತ ಗಾಯಕರ ಬಳಿ ಹಾಡಿಸಬೇಕೆಂದು ಬಯಸಿದ್ದೆ, ಆದರೆ ಆಕೆ ಹಾಡಿದ ಹಾಡು ಕೇಳಿ ಕಳೆದೋದೆ"ಎಂದು ಹೇಳಿದ್ದಾರೆ.

ಒಂದು ಕಾಲದಲ್ಲಿ ಕ್ರಿಸ್ಸಿ ಅನುಭವಿಸಿದ ನೋವು, ಸಂಕಷ್ಟ ಅಷ್ಟಿಷ್ಟಲ್ಲ. ದಡೂತಿ ದೇಹ ಹೊಂದಿದ ಕಾರಣ ಎಲ್ಲರಿಂದ ಅವಮಾನ, ತಿರಸ್ಕಾರ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶಗಳಿಲ್ಲದೆ ಕ್ರಿಸ್ಸಿ ಸಾಕಷ್ಟು ನೋವು ಅನುಭವಿಸುತ್ತಿದ್ದರು. ಡ್ರೆಸ್ ವಿಚಾರವಾಗಿ ಸಾಕಷ್ಟು ಬಾರಿ ಟ್ರೋಲ್ ಗೆ ಗುರಿಯಾಗಿದ್ದಾರೆ. ಆದರೆ ಈ ಎಲ್ಲಾ ಅವಮಾನ, ನಿಂದನೆಗಳನ್ನು ಮೆಟ್ಟಿನಿಂತು ಕ್ರಿಸ್ಸಿ ಈ ಬಾರಿ ಆಸ್ಕರ್ ನಲ್ಲಿ ಮಿಂಚಿರುವುದು ಆಕೆಯಂತಹ ಅದೆಷ್ಟು ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.

More from Filmibeat

English summary
American Actress Chrissy Metz perform Breakthrough song at 2020 Oscars Ceremony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X