»   » ಕಣ್ಣಲ್ಲೇ ಕೊಲ್ಲುತ್ತಿರುವ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ

ಕಣ್ಣಲ್ಲೇ ಕೊಲ್ಲುತ್ತಿರುವ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಹಾಲಿವುಡ್ ನ ಖ್ಯಾತ ನಟ ವಿನ್ ಡೀಸೆಲ್ ಅವರು ಕಾಣಿಸಿಕೊಂಡಿರುವ 'XXX: ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇದೀಗ ವಿಧ-ವಿಧವಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಚಿತ್ರದ ಪ್ರೊಮೋಷನ್ ನಲ್ಲಿ ದೀಪಿಕಾ ಪಡುಕೋಣೆ ಬ್ಯುಸಿಯಾಗಿದ್ದಾರೆ.

ಇದೀಗ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿ ದೀಪಿಕಾ ಪಡುಕೋಣೆ ಮತ್ತು ಹಾಲಿವುಡ್ ನಟ ವಿನ್ ಡೀಸೆಲ್ ಅವರು ಕಲರ್ ಫುಲ್ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.['xXx' ಚಿತ್ರಕ್ಕಾಗಿ ರಿಯಲ್ ಗನ್ ಶೂಟ್ ಕಲಿತ ದೀಪಿಕಾ ಪಡುಕೋಣೆ]

Actress Deepika Padukone and Vin Diesel look hot in new still from 'XXX'

ಹಾಲಿವುಡ್ ಸಿನಿಮಾ ರಂಗದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿರುವ ನಟಿ ದೀಪಿಕಾ ಪಡುಕೋಣೆ ಅವರು ವಿನ್ ಡೀಸೆಲ್ ಅವರ ಜೊತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಇತ್ತೀಚೆಗೆ ಡಿಪ್ಪಿ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋ ನೋಡಿದ್ರೆ ಗೊತ್ತಾಗುತ್ತೆ, ಎಷ್ಟೊಂದು ಹಾಟ್ ಅಂಡ್ ಸೆಕ್ಸಿಯಾಗಿ ಮಿಂಚಿದ್ದಾರೆ ಅಂತ.[ವಿನ್ ಡೀಸೆಲ್ ಜೊತೆ ಹಸಿಬಿಸಿ ಲುಕ್ ನಲ್ಲಿ ದೀಪಿಕಾ ಪಡುಕೋಣೆ]

Actress Deepika Padukone and Vin Diesel look hot in new still from 'XXX'

ಡಿಪ್ಪಿ ಅವರು ತಮ್ಮ ಕಣ್ಣಿನಿಂದಲೇ ಕೊಲ್ಲುವ ರೀತಿಯಲ್ಲಿ ಆಕರ್ಷಕ ಲುಕ್ ಕೊಟ್ಟಿದ್ದು, ಬರೀ ಒಂದು ಫೋಟೊ ಮೂಲಕ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೋ ಅಂತ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದ್ದಾರೆ.[ಹಾಲಿವುಡ್ ನಲ್ಲಿ ಮಿಂಚಿದ ಟಾಪ್ 10 ಬಿಟೌನ್ ನಟಿಯರು]

Actress Deepika Padukone and Vin Diesel look hot in new still from 'XXX'

ಇನ್ನು ಮುಂದಿನ ವರ್ಷ, ಅಂದರೆ ಜನವರಿ 20, 2017ಗೆ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡದವರು ನಿರ್ಧರಿಸಿದ್ದು, ಅಲ್ಲಿಯವರೆಗೆ ದೀಪಿಕಾ ಪಡುಕೋಣೆ ಅಥವಾ ವಿನ್ ಡೀಸೆಲ್ ಅವರು ಅಭಿಮಾನಿಗಳನ್ನು ರಂಜಿಸಲು ಇಂತಹ ಫೋಟೋ ಅಪ್ ಲೋಡ್ ಮಾಡ್ತಾನೆ ಇರುತ್ತಾರೆ.[ದೀಪಿಕಾ ಪಡುಕೋಣೆ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳು]

Actress Deepika Padukone and Vin Diesel look hot in new still from 'XXX'

ಈಗಾಗಲೇ ಮುಂಬೈಗೆ ವಾಪಸಾಗಿರುವ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮುಂದಿನ ಸಿನಿಮಾ 'ರಬ್ತಾ'ದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

English summary
Bollywood Actress Deepika Padukone and Hollywood Actor Vin Diesel's hot look in new still from the hollywood movie 'XXX: The Return of Xander Cage'. The movie is directed by D.J Caruso.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada