»   » ರಿಲೀಸ್ ಆಯ್ತು ಡಿಪ್ಪಿಯ ಹಾಲಿವುಡ್ 'XXX' ಲೋಗೋ

ರಿಲೀಸ್ ಆಯ್ತು ಡಿಪ್ಪಿಯ ಹಾಲಿವುಡ್ 'XXX' ಲೋಗೋ

Posted By: ಸೋನು
Subscribe to Filmibeat Kannada

ಬಾಲಿವುಡ್ ಲಕ್ಕಿ ಗರ್ಲ್ ದೀಪಿಕಾ ಪಡುಕೋಣೆ ಮತ್ತು ಹಾಲಿವುಡ್ ನಟ ವಿನ್ ಡಿಸೇಲ್ ಇದೇ ಮೊದಲ ಬಾರಿಗೆ ಒಂದಾಗಿರುವ ಹಾಲಿವುಡ್ ಚಿತ್ರ 'XXX: ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಕಲರ್ ಫುಲ್ ಪೋಸ್ಟರ್ ಗಳಿಂದ ಬಾರಿ ಕುತೂಹಲ ಕೆರಳಿಸಿತ್ತು.

ಇದೀಗ 'XXX: ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಚಿತ್ರದ ಲೋಗೋ ಬಿಡುಗಡೆ ಆಗಿದ್ದು, ಇದನ್ನು ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಇನ್ ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹಾಕಿಕೊಂಡಿದ್ದಾರೆ.[ಕಣ್ಣಲ್ಲೇ ಕೊಲ್ಲುತ್ತಿರುವ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ]

Actress Deepika Padukone unveils 'XXX' Logo

ಅಂದಹಾಗೆ ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಸಖತ್ ಹಾಟ್ ಮತ್ತು ಬೋಲ್ಡ್ ಲುಕ್ ನಲ್ಲಿ ಮಿಂಚಿದ್ದು, ನಟ ವಿನ್ ಡಿಸೇಲ್ ಅವರ ಜೊತೆ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ.[ವಿನ್ ಡೀಸೆಲ್ ಜೊತೆ ಹಸಿಬಿಸಿ ಲುಕ್ ನಲ್ಲಿ ದೀಪಿಕಾ ಪಡುಕೋಣೆ]

ಮುಂದಿನ ವರ್ಷ (2017) ಜನವರಿ 20ಕ್ಕೆ ನಿರ್ದೇಶಕ ಡಿ.ಜೆ ಕಾರಸೋ ಆಕ್ಷನ್-ಕಟ್ ಹೇಳಿರುವ 'XXX: ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಚಿತ್ರ ತೆರೆ ಕಾಣಲಿದ್ದು, ದೀಪಿಕಾ ಅವರನ್ನು ವಿಭಿನ್ನ ಅವತಾರದಲ್ಲಿ ನೋಡಲು ಮುಂದಿನ ವರ್ಷದವರೆಗೆ ಅಭಿಮಾನಿಗಳು ಕಾಯಲೇಬೇಕು.['xXx' ಚಿತ್ರಕ್ಕಾಗಿ ರಿಯಲ್ ಗನ್ ಶೂಟ್ ಕಲಿತ ದೀಪಿಕಾ ಪಡುಕೋಣೆ]

Actress Deepika Padukone unveils 'XXX' Logo

ಸದ್ಯಕ್ಕೆ ಬಿಡುಗಡೆ ಆಗಿರುವ 'XXX: ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಚಿತ್ರದ ಬಿಡುಗಡೆ ಆಗಿರುವ ಲೋಗೋ ನೋಡಿ...

#XXX #returnofxandercage #logoreveal #serenaunger

A video posted by Deepika Padukone (@deepikapadukone) on Jul 14, 2016 at 6:01pm PDT

English summary
HIndi Actress Deepika Padukone has unveiled the logo of her upcoming debut international film xXx: The Return of Xander Cage, where she will be seen sharing screen space with Hollywood star, Vin Diesel.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X