For Quick Alerts
  ALLOW NOTIFICATIONS  
  For Daily Alerts

  'ಸ್ಲಮ್‌ಡಾಗ್ ಮಿಲಿಯನೇರ್' ನಟಿ ಫ್ರೀಡಾ ಪಿಂಟೊ ಗರ್ಭಿಣಿ

  |

  'ಸ್ಲಮ್‌ಡಾಗ್ ಮಿಲಿಯನೇರ್' ನಟಿ ಫ್ರೀಡಾ ಪಿಂಟೊ ತಾಯಿಯಾಗುತ್ತಿದ್ದಾರೆ. ಸೋಮವಾರ ಮಧ್ಯರಾತ್ರಿ ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಪೋಸ್ಟ್ ಹಾಕುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

  ಬಾಯ್‌ಫ್ರೆಂಡ್ ಕೋರಿ ಟ್ರಾನ್ ಜೊತೆಗಿನ ಫೋಟೋ ಶೇರ್ ಮಾಡಿರುವ ನಟಿ ಫ್ರೀಡಾ ಪಿಂಟೋ ''ಬೇಬಿ ಟ್ರಾನ್ ಬರ್ತಿದ್ದಾನೆ'' ಎಂದು ಬರೆದುಕೊಂಡಿದ್ದಾರೆ. ಫ್ರೀಡಾ ಪಿಂಟೊ ಹಂಚಿಕೊಂಡಿರುವ ಫೋಟೋದಲ್ಲಿ ನಟಿಯ ಬೇಬಿ ಬಂಪ್ ನೋಡಬಹುದು. ಅಮ್ಮನಾಗುತ್ತಿರುವ ವಿಷಯ ಹಂಚಿಕೊಂಡ ನಟಿಗೆ ಇನ್ಸ್ಟಾಗ್ರಾಂನಲ್ಲಿ ಶುಭಾಶಯಗಳು ಹರಿದು ಬರುತ್ತಿದೆ.

  ತಾಯಿಯಾದ ಸಂಭ್ರಮದಲ್ಲಿ ನಟಿ ನಯನಾ ಪುಟ್ಟಸ್ವಾಮಿತಾಯಿಯಾದ ಸಂಭ್ರಮದಲ್ಲಿ ನಟಿ ನಯನಾ ಪುಟ್ಟಸ್ವಾಮಿ

  2019ರಲ್ಲಿ ಕೋರಿ ಟ್ರಾನ್ ಹುಟ್ಟುಹಬ್ಬದ ದಿನ ಟಿ ಫ್ರೀಡಾ ಪಿಂಟೋ ಜೊತೆ ಎಂಗೇಜ್‌ಮೆಂಟ್ ವಿಚಾರ ಪ್ರಕಟಿಸಿಕೊಂಡಿದ್ದರು. ಅದಕ್ಕೂ ಮುಂಚೆ 2017ರಲ್ಲಿ ತಾವಿಬ್ಬರು ಡೇಟಿಂಗ್ ಮಾಡ್ತಿರುವ ವಿಚಾರ ಹೇಳಿಕೊಂಡಿದ್ದರು.

  ಫ್ರೀಡಾ ಪಿಂಟೋ ಮತ್ತು ಕೋರಿ ಟ್ರಾನ್ ಜೋಡಿಯ ಶುಭಕೋರಿರುವ ನಟಿ ಮೃಣಾಲ್ ಠಾಕೂರ್ ''ಓ ಮೈ ಗಾಡ್, ಫ್ರೀಡಾ-ಕೋರಿ ಶುಭಾಶಯ'' ಎಂದಿದ್ದಾರೆ. ಇನ್ನೊಂದು ಕಾಮೆಂಟ್ ಮಾಡಿ ''ನಾನು ಡ್ಯಾನ್ಸ್ ಮಾಡ್ತಿದ್ದೇನೆ, ಕಿರುಚುತ್ತಿದ್ದೇನೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ಇದಕ್ಕೂ ಮುಂಚೆ ಫ್ರೀಡಾ ಪಿಂಟೋ ನಟ ದೇವ್ ಪಟೇಲ್ ಜೊತೆ ಪ್ರೀತಿಯಲ್ಲಿದ್ದರು. 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದಲ್ಲೂ ದೇವ್ ಮತ್ತು ಫ್ರೀಡಾ ಒಟ್ಟಿಗೆ ನಟಿಸಿದ್ದರು. ಸುಮಾರು ಆರು ವರ್ಷಗಳ ಕಾಲ ಇಬ್ಬರು ಡೇಟಿಂಗ್ ಮಾಡಿದ್ದರು. ಆಮೇಲೆ ವೈಯಕ್ತಿಕ ಕಾರಣಗಳಿಂದ ದೂರವಾದರು.

  ಕೊನೆಗೂ ಕುಂಭಾಭಿಷೇಕ ನೋಡೋ ಸಮಯ ಬಂದೇ ಬಿಡ್ತು!! | Filmibeat Kannada

  ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್, ಇಮ್ಮಾರ್ಟಲ್ಸ್, ತ್ರಿಷ್ನಾ, ಲವ್ ಸೋನಿಯಾ ಮತ್ತು ನೆಟ್‌ಫ್ಲಿಕ್ಸ್ ಸಿನಿಮಾ ಮೊಗ್ಲಿ: ಲೆಜೆಂಡ್ ಆಫ್ ದಿ ಜಂಗಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ಫ್ರೀಡಾ ಪಿಂಟೋ ಕಾಣಿಸಿಕೊಂಡಿದ್ದಾರೆ. ಲವ್, ವೆಡ್ಡಿಂಗ್, ರಿಪೀಟ್ ಮತ್ತು ಹಿಲ್ಬಿಲ್ಲಿ ಎಲಿಜಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇನ್ನು ನೀಡಲ್ ಇನ್ ಎ ಟೈಮ್‌ಸ್ಟ್ಯಾಕ್ ಮತ್ತು ಮಿಸ್ಟರ್ ಮಾಲ್ಕಮ್ಸ್ ಲಿಸ್ಟ್ ಪ್ರಾಜೆಕ್ಟ್‌ನಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Indian actress Freida Pinto and her partner Cory Tran are expecting their first child together. Freida took to Instagram to make the announcement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X