For Quick Alerts
  ALLOW NOTIFICATIONS  
  For Daily Alerts

  ಮಗನ ಮುಂದೆ ಬೆತ್ತಲೆ ಫೋಸ್ ನೀಡಿದ ನಟಿಗೆ ಮೂರು ತಿಂಗಳು ಜೈಲು

  |

  ಏಳು ವರ್ಷದ ಮಗನ ಮುಂದೆ ಬೆತ್ತಲೆಯಾಗಿ ಫೋಸ್ ನೀಡಿದ ಘಾನಾದ ನಟಿ ರೋಸ್ಮಂಡ್ ಬ್ರೌನ್‌ಗೆ ಅಲ್ಲಿನ ನ್ಯಾಯಾಲಯ ಮೂರು ತಿಂಗಳು ಜೈಲು ಶಿಕ್ಷೆ ಪ್ರಕಟಿಸಿದೆ.

  ತನ್ನ 7 ವರ್ಷದ ಮಗನ ಹುಟ್ಟುಹಬ್ಬದಂದು ಆತನ ಕೈ ಹಿಡಿದುಕೊಂಡು ಎದುರಲ್ಲಿ ಕುಳಿತಿರುವ ನಟಿ ರೋಸ್ಮಂಡ್ ಬ್ರೌನ್ ಸಂಪೂರ್ಣವಾಗಿ ಬೆತ್ತಲಾಗಿದ್ದರು. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

  ಸಹನಟ ನನ್ನ ಮೇಲೆ ಅತ್ಯಾಚಾರ ಮಾಡಿದ್ದ: ಕಹಿನೆನಪು ಬಿಚ್ಚಿಟ್ಟ ಗಾಯಕಿಸಹನಟ ನನ್ನ ಮೇಲೆ ಅತ್ಯಾಚಾರ ಮಾಡಿದ್ದ: ಕಹಿನೆನಪು ಬಿಚ್ಚಿಟ್ಟ ಗಾಯಕಿ

  ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಬೆತ್ತಲೆ ಫೋಸ್ ಫೋಟೋ ಕುರಿತು ವಿಚಾರಣೆ ನಡೆಸಿದ ಕೊರ್ಟ್ ನಟಿಗೆ 90 ದಿನಗಳ ಕಾಲ ಜೈಲು ಶಿಕ್ಷೆ ಘೋಷಿಸಿದೆ.

  ಅಂದ್ಹಾಗೆ, ನಟಿ ರೋಸ್ಮಂಡ್ ಬ್ರೌನ್‌ ಈ ಫೋಟೋವನ್ನು ಕಳೆದ ವರ್ಷ ಪೋಸ್ಟ್ ಮಾಡಿದ್ದರು. ಅಂದಿನಿಂದ ವಿಚಾರಣೆ ನಡೆಯುತ್ತಲೇ ಇತ್ತು. ಇದೀಗ, ಅಂತಿಮವಾಗಿ ತೀರ್ಪು ಹೊರಬಿದ್ದಿದ್ದು, ಅಶ್ಲೀಲ ಮತ್ತು ಕೌಟುಂಬಿಕ ದೌರ್ಜನ್ಯ ಕಾಯಿದೆ ಅಡಿ ನಟಿಗೆ 3 ತಿಂಗಳು ಜೈಲು ಪ್ರಕಟಸಿದೆ.

  ಘಾನಾದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅಶ್ಲೀಲ ವಸ್ತುಗಳನ್ನು ಪೋಸ್ಟ್ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಂ.ಎಸ್. ಕ್ರಿಸ್ಟಿಯಾನಾ ಕ್ಯಾನ್ ನೇತೃತ್ವದ ಪೀಠ ''ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ'' ಎಂದು ತಿಳಿಸಿದರು.

  ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅನುಪ್ರಭಾಕರ್ | Filmibeat Kannada

  ರೋಸ್ಮಂಡ್ ಬ್ರೌನ್‌ ಅವರ ಪ್ರಕರಣದಲ್ಲಿ ಜೈಲು ಶಿಕ್ಷೆ ಪ್ರಕಟಿಸಿದ್ದಕ್ಕೆ ಅಮೆರಿಕನ್ ಗಾಯಕಿ ಕಾರ್ಡಿ ಖಂಡಿಸಿದ್ದಾರೆ. ''ನಾನು ಅಮೆರಿಕದಲ್ಲಿ ಇಂತಹ ಅನೇಕ ಫೋಟೋಶೂಟ್‌ಗಳನ್ನು ನೋಡಿದ್ದೇನೆ. ಅದು ಲೈಂಗಿಕ ಪ್ರಚೋದನೆ ಎಂದು ನಾನು ಭಾವಿಸುವುದಿಲ್ಲ. ಜೈಲು ಶಿಕ್ಷೆ ನೀಡಿದ್ದ ಕಠಿಣ ನಿರ್ಧಾರ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

  English summary
  Ghanaian actress Rosemond Brown jailed for 3 months for posing naked with her son on his 7th Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X