For Quick Alerts
  ALLOW NOTIFICATIONS  
  For Daily Alerts

  ಪ್ರಿಯಕರನೊಂದಿಗೆ ದಿನಪೂರ್ತಿ ನಗ್ನವಾಗಿ ಕಳೆದ ತಾರೆ

  By ರವಿಕಿಶೋರ್
  |

  ತಮ್ಮ ಅಂದ ಚೆಂದ, ವೈಯಾರ ಶೃಂಗಾರದ ಮೂಲಕ ವಿಶ್ವದಾದ್ಯಂತ ಕಲಾರಸಿಕರ ನಿದ್ದೆಗೆಡಿಸಿದ ತಾರೆ ಈಕೆ. ಆಕೆ ಅಭಿನಯ ಸ್ಟೀಮಿ ಸೀನ್ ಗಳನ್ನು ಕಲಾ ರಸಿಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡಿದ್ದೂ ಉಂಟು. ಈಕೆ ಬೇರಾರು ಅಲ್ಲ ಹಾಲಿವುಡ್ ಹಾಟ್ ತಾರೆ ಜೆನ್ನಿಫರ್ ಅನಿಸ್ಟನ್.

  ಈಕೆಯ ಕುರಿತ ತಾಜಾ ಸಮಾಚಾರವೊಂದು ಹಾಲಿವುಡ್ ವಲಯದಲ್ಲಿ ಭಾರಿ ಸಪ್ಪಳ ಮಾಡಿದೆ. ತನ್ನ ಭಾವಿ ಪತಿಯೊಂದಿಗೆ ದಿನಪೂರ್ತಿ ನಗ್ನವಾಗಿ ಕಳೆದಿದ್ದಾರೆ ಎಂಬುದೇ ಆ ಸುದ್ದಿ. ಈಕೆಯ ನಿಶ್ಚಿತಾರ್ಥ ತನ್ನ ಬಾಯ್ ಫ್ರೆಂಡ್ ಜಸ್ಟಿನ್ ಥ್ರಾಕ್ಸ್ ಜೊತೆ ಆಗಿದೆ. ಈತನೊಂದಿಗೇ ಅನಿಸ್ಟನ್ ನಗ್ನವಾಗಿ ಕಳೆದಿರುವುದು.

  ಇಷ್ಟಕ್ಕೂ ನಗ್ನವಾದ ಬಳಿಕ ಇಬ್ಬರ ನಡುವೆ ಅಂಥಹದ್ದೇನು ನಡೆದಿಲ್ಲವಂತೆ. ಇಬ್ಬರೂ ನಗ್ನವಾಗಿ ಮನೆಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಸುಮ್ಮನೆ ಓಡಾಡಿ ಕಾಲಹರಣ ಮಾಡಿದ್ದಾರೆ. ಅಂದಹಾಗೆ ಅಡುಗೆಮನೆಯಲ್ಲಿ ಒಳ್ಳೆ ರುಚಿರುಚಿಯಾದ ತಿಂಡಿ ಮಾಡಿಕೊಂಡು ಚಪ್ಪರಿಸಿದ್ದಾರೆ.

  ಆರಂಭದಲ್ಲಿ ಜೆನ್ನಿಫರ್ ಗೆ ಸಖತ್ ಭಯವಾಯಿತಂತೆ. ಆದರೆ ಜೊತೆಗಿರುವವನು ತನ್ನ ಭಾವಿ ಪತಿ ತಾನೆ ಎಂಬ ಸಂಗತಿ ಜ್ಞಾಪಕಕ್ಕೆ ಬರುತ್ತಿದ್ದಂತೆ ಆಕೆಯ ಆತ್ಮವಿಶ್ವಾಸವನ್ನು ದುಪ್ಪಟಾಯಿತಂತೆ. ಜೆನ್ನಿಫರ್ ಅನಿಸ್ಟನ್ ಆಪ್ತಮಿತ್ರರೊಬ್ಬರು ಯುಎಸ್ ನಿಯತಕಾಲಿಕೆಯೊಂದರ ಜೊತೆ ಮಾತನಾಡುತ್ತಾ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಬೇಸಿಗೆ ಕಾಲದಲ್ಲೇ ಈ ಜೋಡಿ ಹಕ್ಕಿಗಳು ಮದುವೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದರಂತೆ.

  ಆದರೆ ತಮ್ಮ ತಮ್ಮ ಕೆಲಸಗಳಲ್ಲಿ ಬಿಜಿಯಾದ ಕಾರಣ ಇಬ್ಬರ ಮದುವೆ ಮುಂದೂಡಿದರಂತೆ. ಬ್ರಾಡ್ ಫಿಟ್ ಜೊತೆಗಿನ ತನ್ನ ವೈವಾಹಿಕ ಸಂಬಂಧವನ್ನು ಮುರಿದುಕೊಂಡ ಬಳಿಕ ಜೆನ್ನಿಫರ್ ಕೆಲ ಸಮಯ ಒಂಟಿಯಾಗಿದ್ದರು. ಈಗ ಜೆಸ್ಟಿನ್ ಥ್ರಾಕ್ಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

  ನಲವತ್ತು ನಾಲ್ಕರ ಹರೆಯದ ಜೆನ್ನಿಫರ್ ಅನಿಸ್ಟನ್ ಹಾಗೂ ಥ್ರಾಕ್ಸ್ ಮೊದಲ ನೋಟದಲ್ಲೇ ಪ್ರೇಮ ಅರಳಿದೆ. ಇಬ್ಬರೂ ಕೂಡಲೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಈಗ ನಗ್ನವಾಗಿ ಹೆಜ್ಜೆ ಹಾಕಿದ್ದಾರೆ. ಶೀಘ್ರದಲ್ಲೇ ಉಂಗುರ ಬದಲಾಯಿಸಿಕೊಳ್ಳುವ ಸಮಯವೂ ಹತ್ತಿರವಾಗುತ್ತಿದೆ.

  English summary
  Jennifer Aniston is one of the hottest actresses in Hollywood, who has given sleepless nights to millions across the globe. The movie buffs have enjoyed her steamy scenes on screens. But they will obviously go crazy to hear the Friends star is embracing a 'nudist lifestyle'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X