ಕೊರೊನಾ ಲಸಿಕೆ ಸರ್ಟಿಫಿಕೇಟ್ ತೋರಿಸಿ, ನಗ್ನ ಫೋಟೋ ಪಡೆಯಿರಿ: ಪೋರ್ನ್ ಸ್ಟಾರ್ ಆಫರ್
ವಿಶ್ವದಾದ್ಯಂತದ ಸರ್ಕಾರಗಳು ಕೊರೊನಾ ಸಾಂಕ್ರಾಮಿಕವನ್ನು ಎದುರಿಸಲು ಜೊತೆಗೆ ಕೊರೊನಾ ಲಸಿಕೆಯನ್ನು ಉತ್ತೇಜಿಸುವಲ್ಲಿ ತೊಡಗಿಕೊಂಡಿವೆ.
ಜನರಿಗೆ ಲಸಿಕೆಯನ್ನು ಉತ್ತೇಜಿಸಲು ಸರ್ಕಾರ ಹಲವಾರು ಯೋಜನೆಗಳನ್ನು, ಬೆನಿಫಿಟ್ಸ್, ಜೊತೆಗೆ ಆರ್ಥಿಕ ಸಹಾಯವನ್ನು ಘೋಷಿಸುತ್ತಿದೆ. ಭಾರತದಲ್ಲೂ ಕೊರೊನಾ ಲಸಿಕೆ ಅಭಿಯಾನ ತ್ವರಿತವಾಗಿ ನಡೆಯುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರದ ಜೊತೆಗೆ ಹಲವು ಸಂಘ-ಸಂಸ್ಥೆಗಳು ಪ್ರಚಾರಗಳನ್ನು ನಡೆಸುತ್ತಿವೆ ಮತ್ತು ಅವರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಲಸಿಕೆ ಪಡೆಯಲು ಪ್ರೇರೇಪಿಸುತ್ತಿದೆ. ಆದಾಗ್ಯೂ ಅಮೆರಿಕದ ಫ್ಲೋರಿಡಾ ನಿವಾಸಿಯಾಗಿರುವ ಒಬ್ಬರು ಈ ಅಭಿಯಾನದಲ್ಲಿ ತನ್ನದೇ ಆದ ಶೈಲಿಯಲ್ಲಿ ಕೈಜೋಡಿಸಿದ್ದು ಅದು ಎಲ್ಲರನ್ನು ದಿಗ್ಭ್ರಮೆಗೊಳಿಸಿದೆ.
ಪೋರ್ನ್ ನಟಿಯೊಬ್ಬರು ತಮ್ಮದೇ ರೀತಿಯಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಂಡವರಿಗೆ ಆಫರ್ ಒಂದನ್ನು ಈ ನಟಿ ನೀಡಿದ್ದು, ನಟಿ ಕೊಟ್ಟಿರುವ ಆಫರ್ ನೋಡಿ ಹಲವರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಏನದು ಅಂಥಹಾ ಆಫರ್? ಮುಂದೆ ಓದಿ...

ನನ್ನ ನಗ್ನ ಫೋಟೋ ಪಡೆಯಿರಿ: ಪೋರ್ನ್ ನಟಿ
'ಲಸಿಕೆ ಪಡೆದ ಸರ್ಟಿಫಿಕೇಟ್ ಅಪ್ಲೋಡ್ ಮಾಡಿ ನನ್ನ ನಗ್ನ ಫೋಟೋ ಪಡೆಯಿರಿ' ಪೋರ್ನ್ ಸ್ಟಾರ್ ಒಬ್ಬರು ಇಟ್ಟಿರುವ ಓಪನ್ ಆಫರ್ ಇದು. ಈ 'ಪೋರ್ನ್ ಸ್ಟಾರ್' ವಿಶಿಷ್ಟ ರೀತಿಯಲ್ಲಿ ಕರೋನಾ ಲಸಿಕೆಗಾಗಿ ಜನರನ್ನು ಪ್ರೇರೇಪಿಸುತ್ತಿದ್ದಾಳೆ. ಈ 'ನೀಲಿ ತಾರೆ 'ಯ ಹೆಸರು ಕಾಜುಮಿ ಸ್ಕರ್ಟ್ಸ್ (24) ಮತ್ತು ಪೋರ್ನ್ ವೆಬ್‌ಸೈಟ್ 'ಓನ್ಲಿಫ್ಯಾನ್ಸ್'ಗಾಗಿ ಕೆಲಸ ಮಾಡುತ್ತಾರೆ. ಪಾಡ್‌ಕ್ಯಾಸ್ಟ್‌ಗೆ ಸಂದರ್ಶನ ನೀಡುವಾಗ ಕಾಜುಮಿ ತನ್ನ ವಿಶಿಷ್ಟ ಯೋಜನೆಯನ್ನು ಘೋಷಿಸಿದರು.

ಕೊರೊನಾ ಲಸಿಕೆ ಪ್ರಚಾರ ಮಾಡುತ್ತಿರುವ ಪೋರ್ನ್ ಸ್ಟಾರ್
ಡೈಲಿ ಸ್ಟಾರ್ ವರದಿಯ ಪ್ರಕಾರ, ಅಮೆರಿಕದ ಫ್ಲೋರಿಡಾದಲ್ಲಿ ವಾಸಿಸುತ್ತಿರುವ ಕಾಜುಮಿ, 'ನಾನು ನನ್ನದೇ ರೀತಿಯಲ್ಲಿ ಕರೋನಾ ಲಸಿಕೆಯನ್ನು ಪ್ರಚಾರ ಮಾಡುತ್ತಿದ್ದೇನೆ. 'ಕೊರೊನಾ ಲಸಿಕೆ ಪಡೆದವರು ನನಗೆ ಪ್ರಮಾಣಪತ್ರಗಳನ್ನು ಕಳುಹಿಸುತ್ತಿರುವ ಜನರಿಗೆ ಬಹುಮಾನವಾಗಿ ನಾನು ಉಚಿತವಾಗಿ ನನ್ನ ನಗ್ನ ಫೋಟೋಗಳನ್ನು ಕಳುಹಿಸುತ್ತಿದ್ದೇನೆ'' ಎಂದಿದ್ದಾರೆ.

''ಕರೋನಾದಿಂದ ಜಗತ್ತನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ''
ಈ ಬಗ್ಗೆ ಅವರು ಪಾಡ್‌ಕಾಸ್ಟ್ ಗೆ ನೀಡಿರುವ ಸಂದರ್ಶನದಲ್ಲಿ ಸಂದರ್ಶಕ ಖ್ಯಾತ ಹಾಸ್ಯ ನಟ ಡ್ಯಾನಿ ಮುಲ್ಲನ್ ಅವರು ನೀವು 'ನಿಜವಾಗಲೂ ನಿಮ್ಮ ನಗ್ನ ಚಿತ್ರಗಳನ್ನು ಕಳಿಸಿದ್ದೀರಾ?' ಎಂದು ಕೇಳಿದರು. ಕಾಜುಮಿ ಅವರು 'ಈ ಬಗ್ಗೆ ನಿಜವಾಗಿಯೂ ಗಂಭೀರವಾಗಿದ್ದೇನೆ ಮತ್ತು ಇದಕ್ಕಾಗಿ ಒಂದು ಬಿಡಿಗಾಸು ಕೂಡ ಪಡೆಯದೆ ಸತತವಾಗಿ
ಫೋಟೋಗಳನ್ನು ಕಳಿಸುತ್ತಿದ್ದೇನೆ' ಎಂದು ಉತ್ತರಿಸಿದರು. ಇದಕ್ಕೆ ಡ್ಯಾನಿ 'ಇದು ಕೇವಲ ಕಾಜುಮಿ
ಪ್ರಚಾರದ ತಂತ್ರವೇ?' ಮರುಪ್ರಶ್ನೆ ಮಾಡಲು 'ಪ್ರತಿಯೊಬ್ಬರೂ ಕೊರೊನಾ ಲಸಿಕೆಯನ್ನು ಪಡೆಯಬೇಕೆಂದು ತಾನು ಬಯಸುತ್ತೇನೆ' ಎಂದು ಕಾಜುಮಿ ಹೇಳಿದರು. ಪ್ರತಿಯೊಬ್ಬರೂ ಲಸಿಕೆ ಪಡೆಯುವುದರಿಂದ ಈ ಜಗತ್ತು ಕರೋನಾ ವೈರಸ್‌ನಿಂದ ಸಂಪೂರ್ಣವಾಗಿ ಮುಕ್ತವಾಗಬಹುದು' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಷ್ಟಕ್ಕೂ ಈಕೆ ನೀಲಿ ತಾರೆಯಾಗಿ ಬದಲಾಗಿದ್ದು ಹೇಗೆ?
ಕಾಜುಮಿ ನೀಲಿ ತಾರೆ ಮಾತ್ರವಲ್ಲ ವಯಸ್ಕರ ಚಿತ್ರೋದ್ಯಮವನ್ನು ನಡೆಸುತ್ತಾಳೆ ಆದರೆ ಈಕೆ ಉದ್ಯಮವನ್ನು ತಪ್ಪಾಗಿ ಪ್ರವೇಶಿಸಿದ್ದಾರೆ. ಶೋರೂಂನಲ್ಲಿ ಮಾರಾಟಗಾರಳಾಗಿ ಕೆಲಸ ಮಾಡುತ್ತಿದ್ದ ಕಾಜುಮಿಗೆ 19 ವರ್ಷ ಇರುವಾಗ ಅವಳು ತನ್ನ ಗೆಳೆಯ ಜೊತೆ ಒಂದು ಪೂಲ್ ಪಾರ್ಟಿಯಲ್ಲಿ ರೊಮ್ಯಾನ್ಸ್ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ಅವಳ ವಿಡಿಯೋ ಮಾಡಿ ಆಕೆಯ ಒಪ್ಪಿಗೆಯಿಲ್ಲದೆ ಪೋರ್ನ್ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡುತ್ತಾನೆ. ನಂತರ ಅವಳು ಮಾರಾಟ ಸಂಸ್ಥೆಯ ಬಾಸ್ ಆ ವೀಡಿಯೋವನ್ನು ಗಮನಿಸಿ ಆಕೆಯನ್ನು ಕೆಲಸದಿಂದ ವಜಾ ಮಾಡಿದ. ವೀಡಿಯೊ ವೈರಲ್ ಆದಾಗ, ಕಾಜುಮಿ ನಾಚಿಕೆಪಟ್ಟುಕೊಳ್ಳಲಿಲ್ಲ. ಬದಲಾಗಿ ಅದನ್ನು ಒಂದು ಅವಕಾಶದಂತೆ ಕಂಡರು. ನಂತರ ಆಕೆ ಬಹಳ ಆಲೋಚಿಸಿ ತನ್ನ ವಿವಿಧ ಭಂಗಿಯ ಫೋಟೋಗಳನ್ನು ಮಾರಾಟಕ್ಕೆ ಇಟ್ಟರು. ಇದರಲ್ಲಿ ಭರ್ಜರಿ ಲಾಭ ಕಾಣುವ ಕಾಜುಮಿ ಕೊನೆಗೆ ವಿಶ್ವಪ್ರಸಿದ್ಧ ಪೋರ್ನ್ ಸೈಟ್ 'ಓನ್ಲಿಫ್ಯಾನ್ಸ್'ಗೆ ಪೋರ್ನ್ ತಾರೆಯಾಗಿ ಕೆಲಸ ಮಾಡಲು ಒಪ್ಪಿಗೆ ನೀಡಿದರು.


Click it and Unblock the Notifications











