ಕೇಟ್ ವಿನ್ಸ್ ಲೆಟ್ ಬೆತ್ತಲೆ ರಹಸ್ಯ ಬಹಿರಂಗ

36 ವರ್ಷ ವಯಸ್ಸಾದರೂ ಕೇಟ್ ಟಾಪ್ ಸೆಕ್ಸಿಯಸ್ಟ್ ನಟಿಯ ಪಟ್ಟಿಯಿಂದ ಕೆಳಗಿಳಿದಿಲ್ಲ. ಟೈಟಾನಿಕ್ , ದಿ ರೀಡರ್ ಚಿತ್ರದಲ್ಲಿ ಕೇಟ್ ಬೆತ್ತಲೆ ದೃಶ್ಯ ನೋಡಿ ಪಡ್ಡೆಗಳು ಪುಳಕಗೊಂಡಿದ್ದರೂ ವಿಮರ್ಶಕರು ಇದು ಚಿತ್ರಕ್ಕೆ ಅಗತ್ಯವಾದ ದೃಶ್ಯ ಎಂದು ಪ್ರಮಾಣಪತ್ರ ನೀಡಿದ್ದರು.
ಪಡ್ಡೆಗಳ ಬೇಡಿಕೆ ಪೂರೈಸಲು ಕೇಟ್ ಬೆತ್ತಲಾಗುತ್ತಾಳೆ ಎಂದು ಕೊಂಡಿದ್ದರೆ ಅದು ಕೂಡಾ ತಪ್ಪುಗ್ರಹಿಕೆ. ಅಸಲಿಗೆ ಕೇಟ್ ಬೆತ್ತಲಾಗುವುದು ಮಹಿಳಾ ಅಭಿಮಾನಿಗಳಿಗಾಗಿ ಮಾತ್ರ ಎಂದು ಸತ್ಯ ಹೊರ ಬಿದ್ದಿದೆ.
'ಹೌದು ನಾನು ಸಿನಿಮಾದಲ್ಲಿ ಬೆತ್ತಲಾಗುವುದರಿಂದ ನನ್ನ ಮಹಿಳಾ ಅಭಿಮಾನಿಗಳು ತಮ್ಮ ಫಿಗರ್ ಬಗ್ಗೆ ಅಭಿಮಾನದಿಂದ ನೋಡುವಂತಾಗುತ್ತದೆ. ನಾನೇನು ಜೀರೋ ಫಿಗರ್ ಹೊಂದಿಲ್ಲ. ಆಕರ್ಷಕ ಅಥವಾ ದೊಡ್ದ ಸ್ತನ, ನಿತಂಬ ಹೊಂದಿಲ್ಲ. ಆದರೆ, ನನ್ನ ದೇಹ ಸೌಂದರ್ಯವನ್ನು ಆತ್ಮವಿಶ್ವಾಸದಿಂದ ಯಾವುದೇ ಮುಜುಗರವಿಲ್ಲದೆ ಹೆಮ್ಮೆಯಿಂದ ನನ್ನನು ನಾನು ತೆರೆಯ ಮೇಲೆ ಪ್ರತಿನಿಧಿಸುತ್ತೇನೆ ಇದರಿಂದ ಮಹಿಳಾ ಸಬಲೀಕರಣ ಸಾಧ್ಯ ಎಂದು ಸನ್. ಯುಕೆ ಸಂಸ್ಥೆಗೆ ಕೇಟ್ ಹೇಳಿದ್ದಾಳೆ.
ಈಗಲೂ ರೋಮ್ಯಾಂಟಿಕ್ ಪಾತ್ರ ಸಿಕ್ಕರೆ ಮಾಡಲು ಸಿದ್ಧ. ಟೈಟಾನಿಕ್ ನ ರೋಸ್ ಡಿವಿಟ್ ಬುಕತರ್ ಆಗಿ ಕಾಣಿಸಿಕೊಳ್ಳಲಾರೆ ಆದರೆ, ಪ್ರಣಯ ದೃಶ್ಯದಲ್ಲಿ ಅಭಿನಯಿಸಲು ಮನ ಹಾತೊರೆಯುತ್ತದೆ ಎಂದಿದ್ದಾಳೆ. ಟೈಟಾನಿಕ್, ದಿ ರೀಡರ್ ಅಲ್ಲದೆ ಲಿಟರ್ ಚಿಲ್ಡ್ರನ್, ಹೋಲಿ ಸ್ಮೋಕ್ ಚಲನಚಿತ್ರಗಳಲ್ಲಿ ಎಮ್ಮಿ ಪ್ರಶಸ್ತಿ ಗಳಿಸಿದ ಟಿವಿ ಸರಣಿ ಮಿಲ್ಡ್ರೆಡ್ ಪಿಯರ್ಸ್ ನಲ್ಲಿ ಕೇಟ್ ಅರೆ ನಗ್ನಳಾಗಿ ಕಾಣಿಸಿಕೊಂಡಿದ್ದಳು.
ಆದರೆ, ಸಿನಿಮಾದಲ್ಲಿ ಸುಮ್ಮಸುಮ್ಮನೆ ಬೆತ್ತಲೆಳಾಗು ಎಂದರೆ ಬೆತ್ತ ತೆಗೆದುಕೊಳ್ಳುತ್ತೇನೆ. ನನ್ನ ಪಾತ್ರ, ಕಥೆ ಹಾಗೂ ನನ್ನೊಳಗೆ ಆ ಭಾವನೆ ಉಂಟಾದರೆ ಮಾತ್ರ ಬೆತ್ತಲಾಗುವೆ. ಆತ್ಮವಿಶ್ವಾಸ ಇದ್ದರೆ ಮಾತ್ರ ಇನ್ನೊಬ್ಬರಿಗೆ ಬೆತ್ತಲಾಗುವುದರ ನಿಜ ಅರ್ಥ ಹೇಳಬಹುದು ಎಂದು ಪ್ರಬುದ್ಧ ನಟಿ ಕೇಟ್ ಹೇಳಿಕೊಂಡಿದ್ದಾಳೆ. ಕೇಟ್ ಏತಕ್ಕೆ ಬೆತ್ತಲಾಗುತ್ತಾಳೋ ಗೊತ್ತಿಲ್ಲ. ಆಕೆ ಸಮರ್ಥನೆಯಂತೂ ಸೂಪರ್ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ.


Click it and Unblock the Notifications











