ಮದುವೆ ಮುನ್ನವೇ ಗರ್ಭಿಣಿಯಾದ ಹಾಟ್ ತಾರೆ

ಈಕೆ ಬೇರಾರು ಅಲ್ಲ ಹಾಲಿವುಡ್ ನ ಜನಪ್ರಿಯ ತಾರೆ ಕಿಮ್ ಕರ್ದಾಶಿಯನ್. ಖ್ಯಾತ ಗಾಯಕ ಕೇನ್ ಸೆಟ್ ಜೊತೆ ಕೆಲ ತಿಂಗಳಿಂದ ಕಿಮ್ ಡೇಟಿಂಗ್ ಮಾಡುತ್ತಿದ್ದರು. ಆದರೆ ಇವರಿಬ್ಬರು ಅದ್ಯಾವ ಘಳಿಗೆಯಲ್ಲಿ ಮೈಮರೆತರೋ ಏನೋ, ತಪ್ಪು ನಡೆದುಹೋಗಿದೆ. ಈಗಾಕೆ ಮೂರು ತಿಂಗಳ ಗರ್ಭಿಣಿ.
ಈಗ ಇಬ್ಬರೂ ಆದಷ್ಟು ಬೇಗ ಮದುವೆಯಾಗಲು ರೆಡಿಯಾಗುತ್ತಿದ್ದಾರೆ. ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಕಿಮ್ ಬಾಯ್ ಫ್ರೆಂಡ್ ಕೇನ್ ವೆಸ್ಟ್ ಮಾತನಾಡುತ್ತಾ ಆಕೆ ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಕಿಮ್ ಈಗ 12 ವಾರಗಳ ಗರ್ಭಿಣಿ ಎಂದು ಆತ ಹೇಳಿದ್ದಾನೆ.
ಮೂವತ್ತೆರಡರ ಹರೆಯದ ಕಿಮ್ ಹಾಗೂ ಕೇನ್ ವೆಸ್ಟ್ ಇಬ್ಬರ ನಡುವೆ ಹತ್ತು ವರ್ಷಗಳಷ್ಟು ಪರಿಚಯವಿದೆ. ಆದರೆ ಕಳೆದ ಕೆಲ ತಿಂಗಳಿಂದಷ್ಟೇ ಡೇಟಿಂಗ್ ಮಾಡುತ್ತಿದ್ದರು. ಇದಕ್ಕೂ ಮುನ್ನ ಫುಟ್ ಬಾಲ್ ಪಟು ಕ್ರಿಸ್ ಹಂಪ್ರೆಸ್ ಅವರನ್ನು ಮದುವೆಯಾಗಿದ್ದರು. ಆದರೆ ಅದೇನಾಯಿತೋ ಏನೋ ಕೇವಲ 72 ದಿನಗಳಲ್ಲೇ ವಿವಾಹ ವಿಚ್ಛೇದನದ ಮೂಲಕ ಇಬ್ಬರೂ ಬೇರ್ಪಟ್ಟರು.
ಕೇನ್ ಜೊತೆ ಹೊಸ ಸಂಬಂಧ ಬೆಳೆಸಿದ ಕಿಮ್, ನಮ್ಮಿಬ್ಬರ ದಾಂಪತ್ಯ ಹಾಗೂ ಪ್ರಣಯ ಜೀವನ ಸುಖಕರವಾಗಿರುತ್ತದೆ. ಇದಕ್ಕೆ ನಮ್ಮಿಬ್ಬರ ನಡುವಿನ ಸ್ನೇಹ ಸಂಬಂಧ ಇನ್ನಷ್ಟು ಸಹಕರಿಸುತ್ತದೆ. ನಮ್ಮಿಬ್ಬರ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಶೀಘ್ರದಲ್ಲೇ ಇಬ್ಬರು ಮದುವೆಯಾಗುವುದಾಗಿಯೂ ತಿಳಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











