For Quick Alerts
  ALLOW NOTIFICATIONS  
  For Daily Alerts

  ತುಟಿಗೆ ಹಚ್ಚಿದ ಲಿಪ್ ಸ್ಟಿಕ್ ನಿಂದ ಟ್ರೋಲ್ ಆದ ನಟಿ

  By Naveen
  |

  ಸಿನಿಮಾ ನಟಿಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ರೋಲ್ ಆಗುತ್ತಿರುತ್ತದೆ. ನಟಿಯರು ಹಾಕುವ ಬಟ್ಟೆ, ಲಿಪ್ ಸ್ಟಿಕ್ ಅಥವಾ ಫೋಟೋಗಳನ್ನು ಕಂಡು ಕೆಲವು ಬಾರಿ ಅವರ ಅಭಿಮಾನಿಗಳು ಟ್ರೋಲ್ ಮಾಡುತ್ತಾರೆ. ಈಗ ಆ ರೀತಿಯ ಪರಿಸ್ಥಿತಿ ಬಂದಿರುವುದು ಹಾಲಿವುಡ್ ಟಿವಿ ಸ್ಟಾರ್ ಕೆಯ್ಲಿ ಜೆನ್ನರ್ (Kylie Jenner) ಅವರಿಗೆ.

  ಹಾಲಿವುಡ್ ಟಿವಿ ಸ್ಟಾರ್ ಕೆಯ್ಲಿ ಜೆನ್ನರ್ ಇತ್ತೀಚಿಗಷ್ಟೆ ಐರಾನಿಕ್ ಗ್ರೀನ್ ಲಿಪ್ ಸ್ಟಿಕ್ ಬ್ರಾಂಡ್ ಲಾಂಚ್ ಮಾಡಿದ್ದರು. ಅದರ ಜೊತೆಗೆ ತನ್ನ ಮುದ್ದಾದ ತುಟಿಗಳಿಗೆ ಸಹ ಆ ಲಿಪ್ ಸ್ಟಿಕ್ ಹಚ್ಚಿಕೊಂಡು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋ ಹಾಕಿದ್ದರು. ಕೆಯ್ಲಿ ಜೆನ್ನರ್ ಇಷ್ಟ ಪಟ್ಟು ಹಚ್ಚಿಕೊಂಡಿದ್ದ ಲಿಪ್ ಸ್ಟಿಕ್ ಅನೇಕರಿಗೆ ಇಷ್ಟ ಆಗಲಿಲ್ಲ. ಅದೇ ಕಾರಣಕ್ಕೆ ಈ ಫೋಟೋ ನೋಡಿ ಅವರ ಫಾಲೋವರ್ಸ್ ಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

  ಮುಖ್ಯವಾಗಿ ಕೆಯ್ಲಿ ಜೆನ್ನರ್ (Kylie Jenner) ತನ್ನ ತುಟಿಗೆ ಹಾಕಲು ಬಳಸಿದ ಲಿಪ್ ಸ್ಟಿಕ್ ಬಣ್ಣವನ್ನು ನೋಡಿ ಅವರ ಅನೇಕ ಫಾಲೋವರ್ಸ್ ಗಳು ಟ್ರೋಲ್ ಮಾಡುವ ಮೂಲಕ ಅಣಕಿಸುತ್ತಿದ್ದಾರೆ. ಟ್ರೋಲ್ ಮಾಡುವ ಬರದಲ್ಲಿ ಕೆಲವರು ಏನೇನೋ ಹೇಳುತ್ತಿದ್ದಾರೆ. ಅಂದಹಾಗೆ, 20 ವರ್ಷದ ಕೆಯ್ಲಿ ಜೆನ್ನರ್ (Kylie Jenner) ಅಮೇರಿಕಾದ ಟಿವಿ ಸ್ಟಾರ್, ಮಾಡಲ್ ಆಗಿದ್ದಾರೆ.

  English summary
  American reality television personality, model Kylie Jenner trolled in instagram for her brand new ironic green lipshade.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X