ಸೌಂದರ್ಯ ಹಾಳಾಗುತ್ತೆ ಎಂದು ಸಾರೋಗಸಿ?: ಪ್ರಿಯಾಂಕಾ ಚೋಪ್ರಾ ಹೇಳಿದ್ದಿಷ್ಟು
ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೊನಾಸ್ ದಂಪತಿ ಸರೋಗಸಿ ವಿಧಾನದಲ್ಲಿ ಮಗು ಪಡೆದಿದ್ದು ಗೊತ್ತೇಯಿದೆ. ಕಳೆದ ವರ್ಷ ದಂಪತಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು. ಜನವರಿ 15ಕ್ಕೆ ಮಗಳ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ್ದರು. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೊನಾಸ್ ಎಂದು ನಾಮಕರಣ ಕೂಡ ಮಾಡಿದ್ದಾರೆ. ಆದರೆ ಮಗಳನ್ನು ಇನ್ನು ಪರಿಚಯಿಸಿಲ್ಲ. ಸದ್ಯ ಸಾರೋಗಸಿ ಪದ್ಧತಿಯಲ್ಲಿ ಮಗು ಪಡೆದಿದ್ದು ಏಕೆ? ಎನ್ನುವ ಕಾರಣವನ್ನು ಪ್ರಿಯಾಂಕ ಚೋಪ್ರಾ ಬಿಚ್ಚಿಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಪ್ರಿಯಾಂಕಾ ಚೋಪ್ರಾ, "ಮಾಲ್ತಿ ಹುಟ್ಟಿದಾಗ ನಾನು ಆಪರೇಷನ್ ಥಿಯೇಟರ್‌ನಲ್ಲಿಯೇ ಇದ್ದೆ. ವಾಳು ಬಹಳ ಪುಟ್ಟದಾಗಿ ಇದ್ದಳು. ನನ್ನ ಕೈಗಿಂತ ಚಿಕ್ಕದಾಗಿದ್ದಳು. ಆಕೆಯನ್ನು ಮನೆಗೆ ಕರೆದುಕೊಂಡು ಬರುವ ಮುನ್ನ ಒಂದಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಯಿತು. ಕೆಲ ದಿನಗಳ ಕಾಲ ಇಂಟೆನ್ಸಿವ್ ಕೇರ್ ವಿಭಾಗದಲ್ಲಿ ಅವಳನ್ನು ವೈದ್ಯರ ನಿಗಾದಲ್ಲಿ ಇಡಬೇಕಾಯಿತು. ಇಂಕ್ಯುಬೆಟರ್‌ನಲ್ಲಿ ಮಗಳನ್ನು ನಾನು, ನಿಕ್ ಬಹಳ ನೋವು ಅನುಭವಿಸಿದೆವು. ಆ ಸಮಯದಲ್ಲಿ ಕೆಲ ವೈದ್ಯರನ್ನು, ದಾದಿಯರನ್ನು ಭೇಟಿ ಮಾಡಿದ್ದೆ. ನಿಜ ಹೇಳಬೇಕು ಅಂದ್ರೆ ಅವ್ರು ದೇವರ ಸ್ವರೂಪ. ಸಾಕ್ಷಾತ್ ದೇವರಂತೆ ಮಕ್ಕಳ ಜೀವ ಉಳಿಸುತ್ತಿದ್ದಾರೆ."

"ನನ್ನ ಮಗಳು ಜೀವಂತವಾಗಿ ಬರುತ್ತಾಳೆ ಎಂದುಕೊಂಡಿರಲಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ಅದೇ ಕಾರಣಕ್ಕೆ ಸಾರೋಗಸಿ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದೆ. ಆದರೆ ನಾನು ಸೌಂದರ್ಯ ಕಮ್ಮಿ ಆಗುತ್ತದ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದೆ ಎಂದು ಕೆಲವರು ಹೇಳಿದ್ದಾಗ ಬಹಳ ನೋವಾಗಿತ್ತು. ಸೋಶಿಯಲ್ ಮೀಡಿಯಾ ಟ್ರೋಲ್ ಪ್ರಭಾವ ನನ್ನ ಮಗುವಿನ ಮೇಲೆ ಆಗಬಾರದು ಎಂದುಕೊಂಡಿದ್ದೇನೆ. ಅದೇ ಕಾರಣಕ್ಕೆ ಆಕೆಯ ಫೋಟೊ ಕೂಡ ರಿವೀಲ್ ಮಾಡಿಲ್ಲ. ಇನ್ನು ಸಾರೋಗಸಿ ಅಷ್ಟು ಸುಲಭ ಅಲ್ಲ. ಅದಕ್ಕಾಗಿ ನಾವು 6 ತಿಂಗಳ ಕಾಲ, ಹುಡುಕಾಡಿದೆವು. ಕೊನೆಗೆ ಒಬ್ಬ ದಯೆ ಇರುವ ಮಹಿಳೆ ಇದಕ್ಕೆ ಒಪ್ಪಿಕೊಂಡಳು. ಅದೇ ಕಾರಣಕ್ಕೆ ನನ್ನ ಮಗುವಿಗೆ ಆಕೆಯ ಹೆಸರು ಸೇರಿಸಿ ನಾಮಕರಣ ಮಾಡಿದ್ದೇವೆ" ಎಂದಿದ್ದಾರೆ.

ಬಾಲಿವುಡ್ ಸ್ಟಾರ್ ಹೀರೋಯಿನ್ ಆಗಿ ಮೆರೆದ ಪ್ರಿಯಾಂಕಾ 'ಬೇವಾಚ್' ಸಿನಿಮಾ ಮೂಲಕ 2017ರಲ್ಲಿ ಹಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆ ನಂತರ ವಯಸ್ಸಿನಲ್ಲಿ ತನಗಿಂತ 10 ವರ್ಷ ಚಿಕ್ಕವನಾದ ಪಾಪ್ ಗಾಯಕ ನಿಕ್ ಜೋನಾಸ್ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿ ನಂತರ ಕುಟುಂಬದ ಸದಸ್ಯರ ಒಪ್ಪಿಗೆ ಪಡೆದು 2018ರಲ್ಲಿ ಈ ಜೋಡಿ ಮದುವೆ ಆಗಿತತ್ಉ. ಮದುವೆಯಾದ ನಂತರ ಪ್ರಿಯಾಂಕ ಚೋಪ್ರಾ ಪತಿ ಜೊತೆ ಲಾಸ್ ಎಂಜೆಲ್ಸ್‌ನಲ್ಲಿ ವಾಸವಾಗಿದ್ದಾರೆ. ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಸಿನಿಮಾಗಳ ನಿರ್ಮಾಣಕ್ಕೂ ಮುಂದಾಗಿದ್ದಾರೆ.
ಬ್ರಿಟೀಷ್ ಓಲ್ಗ್ ಮ್ಯಾಗಜೀನ್‌ಗಾಗಿ ಪ್ರಿಯಾಂಕ ಚೋಪ್ರಾ ಮಗಳ ಜೊತೆ ಸ್ಪೆಷಲ್ ಫೋಟೊಶೂಟ್ ಮಾಡಿಸಿದ್ದಾರೆ. ಆ ಫೋಟೊಗಳು ಸಖತ್ ವೈರಲ್ ಆಗಿದೆ. ಮಗಳ ಫೋಟೊ ಶೇರ್ ಮಾಡಲು ಇಷ್ಟ ಇಲ್ಲದೇ ಇದ್ದಮೇಲೆ ಫೋಟೊಶೂಟ್ ಯಾಕೆ? ಅದನ್ನು ಹೇಳಿಕೊಳ್ಳುವುದು ಯಾಕೆ? ಎಂದು ಕೆಲವರ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











