For Quick Alerts
  ALLOW NOTIFICATIONS  
  For Daily Alerts

  'ವೈಟ್ ಹೌಸ್' ಡಿನ್ನರ್ ಗೆ ಪ್ರಿಯಾಂಕಗೆ ಒಬಾಮಾರಿಂದ ಆಹ್ವಾನ

  By ಸೋನು ಗೌಡ
  |

  'ಕ್ವಾಂಟಿಕೊ' ಸೀರಿಯಲ್ ನಂತರ ಇಂಟರ್ ನ್ಯಾಷನಲ್ ಫಿಗರ್ ಆದ ಬಾಲಿವುಡ್ ನ ಗಟ್ಟಿಗಿತ್ತಿ ನಟಿ ಪ್ರಿಯಾಂಕ ಚೋಪ್ರಾ ಅವರು ಇದೀಗ ಅಮೆರಿಕದ ವೈಟ್ ಹೌಸ್ ಗೆ ಡಿನ್ನರ್ ಗೆ ಹೋಗಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

  ನಟಿ ಪಿಗ್ಗಿ ಅವರ ಜೊತೆಗೆ ಹಾಲಿವುಡ್ ನ ನಟರಾದ ಬ್ರಾಡ್ಲಿ ಕೂಪರ್, ಲೂಸಿ ಲಿಯೂ, ಜೆನ್ ಫೋಂಡಾ ಮತ್ತು ಗ್ಲಾಡಿಸ್ ನೈಟ್ ಅವರನ್ನೂ ಶ್ವೇತ ಭವನದಲ್ಲಿ ಆಯೋಜಿಸಿರುವ ಔತಣ ಕೂಟಕ್ಕೆ ಆಹ್ವಾನಿಸಲಾಗಿದೆ.[ಹಾಲಿವುಡ್ ನಲ್ಲಿ ಮಿಂಚಿದ ಟಾಪ್ 10 ಬಿಟೌನ್ ನಟಿಯರು]

  ಇತ್ತೀಚೆಗಷ್ಟೇ ನಟಿ ಪ್ರಿಯಾಂಕ ಚೋಪ್ರಾ ಅವರು ಅಮೆರಿಕದ ಶ್ವೇತ ಭವನದಲ್ಲಿ ಮಾಧ್ಯಮ ವಕ್ತಾರರಿಗೆ ಆಯೋಜಿಸಲಾಗುವ ವಾರ್ಷಿಕ ಔತಣ ಕೂಟಕ್ಕೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಆಹ್ವಾನ ಪಡೆದಿದ್ದಾರೆ.

  ಈ ವಾರ್ಷಿಕ ಮಾಧ್ಯಮ ವಕ್ತಾರರ ಔತಣ ಕೂಟವನ್ನು ಈ ತಿಂಗಳ ಕೊನೆಗೆ ಬರಾಕ್ ಒಬಾಮಾ ಮತ್ತವರ ಪತ್ನಿ ಮಿಶೆಲ್ ಒಬಾಮಾ ಆಯೋಜಿಸಿದ್ದಾರೆ.[ನಿಮ್ಗೊತ್ತಾ? ಪಿಗ್ಗಿ ಕೂಡ ಹಲವು ಬಾರಿ ಆತ್ಮಹತ್ಯೆಗೆ ಟ್ರೈ ಮಾಡಿದ್ದರಂತೆ]

  ವಾಶಿಂಗ್ಟನ್ ಪೋಸ್ಟ್ ಪತ್ರಿಕೆಯ ಪ್ರಕಾರ ವೈಟ್ ಹೌಸ್ ನ ಮಾಧ್ಯಮ ವಕ್ತಾರರ ಔತಣ ಕೂಟವನ್ನು ಪಾರಂಪಾರಿಕವಾಗಿ ಮಾಧ್ಯಮ ಬಂಧುಗಳು, ಟಿವಿ ವಾಹಿನಿಗಳು ಮತ್ತು ಇತರೆ ಮನರಂಜನಾ ಮಾಧ್ಯಮಗಳಿಗಾಗಿ ಆಯೋಜಿಸಲಾಗುತ್ತದೆ.

  ಆದರೆ ಪಿಗ್ಗಿ ಅವರಿಗೂ ಆಹ್ವಾನ ಬಂದಿದ್ದು, ಸದ್ಯಕ್ಕೆ 'ಕ್ವಾಂಟಿಕೋ' ಸೀರಿಯಲ್ ಹಾಗೂ ಹಾಲಿವುಡ್ ಸಿನಿಮಾ 'ಬೇವಾಚ್'ನ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಈ ಔತಣ ಕೂಟದಲ್ಲಿ ಭಾಗವಹಿಸುವುದರ ಬಗ್ಗೆ ಬಾಯಿ ಬಿಟ್ಟಿಲ್ಲ.['ಆಸ್ಕರ್ ಪ್ರಶಸ್ತಿ'ಯಲ್ಲಿ ಮಿಂಚಲು ಪಿಗ್ಗಿ ಮಾಡಿದ ಖರ್ಚೆಷ್ಟು?]

  ಹಾಲಿವುಡ್ ಚಿತ್ರ 'ಬೇವಾಚ್' ನಲ್ಲಿ ಪಿಗ್ಗಿ ಸೆಕ್ಸಿ ವಿಲನ್ ಆಗಿ ಮಿಂಚಲಿದ್ದು, ಅವರ ಡಿಫರೆಂಟ್ ಲುಕ್ ನೋಡಲು ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ನೋಡಿ..

  'ವೈಟ್ ಹೌಸ್' ಡಿನ್ನರ್ ಗೆ ಪ್ರಿಯಾಂಕಗೆ ಒಬಾಮಾರಿಂದ ಆಹ್ವಾನ

  English summary
  Hindi Actress Priyanka Chopra has now been invited to White House to attend the annual correspondents dinner later this month. It will be the last White House Correspondents Dinner to be hosted by US President Barack Obama and First Lady Michelle Obama.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X