For Quick Alerts
  ALLOW NOTIFICATIONS  
  For Daily Alerts

  ಕೋಮಾದಲ್ಲಿದ್ದ ಹಾಲಿವುಡ್ ನಟಿ ಎನ್‌ ಹಿಚ್ ನಿಧನ; ಪ್ರಿಯಾಂಕ ಚೋಪ್ರಾ ಸಂತಾಪ

  |

  ಕಳೆದ ವಾರ ಕಾರು ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿದ್ದ ಹಾಲಿವುಡ್ ನಟಿ ಎನ್‌ ಹಿಚ್(53) ಕೊನೆಯುಸಿರೆಳೆದಿದ್ದಾರೆ. ಈ ವಿಚಾರವನ್ನು ಪುತ್ರ ಹೊಮರ್ ಖಚಿತ ಪಡಿಸಿದ್ದು, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸೇರಿದಂತೆ ಸಾಕಷ್ಟು ಗಣ್ಯರು ಕಂಬನಿ ಮಿಡಿದಿದ್ದಾರೆ.

  ಆಗಸ್ಟ್ 5ರಂದು ಲಾಸ್ ಏಂಜಲೀಸ್‌ನಲ್ಲಿ ಅಪಾರ್ಟ್‌ಮೆಂಟ್ ಬಳಿ ನಡೆದ ಕಾರು ಅಪಘಾತದಲ್ಲಿ ಹಾಲಿವುಡ್ ನಟಿ, ನಿರ್ದೇಶಕಿ ಎನ್‌ ಹಿಚ್‌ಗೆ ಗಂಭೀರವಾಗಿ ಪೆಟ್ಟಾಗಿತ್ತು. ಮೆದುಳಿಗೆ ಗಂಭೀರವಾಗಿ ಪೆಟ್ಟಾಗಿದ್ದ ಕಾರಣ ಕೋಮಾದಲ್ಲಿ ಒಂದು ವಾರ ನಟಿ ಜೀವನ್ಮರಣ ಹೋರಾಟ ನಡೆಸಿದ್ದರು. ಎನ್‌ ಹಿಚ್‌ ಕಳೆದ ವಾರ ಅಪಾರ್ಟ್‌ಮೆಂಟ್‌ ಗ್ಯಾರೇಜ್‌ನಿಂದ ತನ್ನ ಬ್ಲೂ ಮಿನಿ ಕೂಪರ್ ಕಾರನ್ನು ಹೊರ ತೆಗೆಯುವ ಸಮಯದಲ್ಲಿ ಮನೆಯೊಂದಕ್ಕೆ ನುಗ್ಗಿಸಿದ್ದರು. ಕಾರು ಗುದ್ದಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಬೆಂಕಿ ನಂದಿಸಿ ನಟಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅಷ್ಟ್ರರಲ್ಲಾಗಲೇ ನಟಿಯ ಕಾಲಿಗೂ ಬೆಂಕಿ ತಲುಲಿತ್ತು.

  ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ: ಜೀವನ್ಮರಣ ಹೋರಾಟದಲ್ಲಿ ಖ್ಯಾತ ನಟಿಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ: ಜೀವನ್ಮರಣ ಹೋರಾಟದಲ್ಲಿ ಖ್ಯಾತ ನಟಿ

  ಅಪಘಾತದ ಬಳಿಕ ನಟಿ ಎನ್‌ ಹಿಚ್‌ ರಕ್ತ ಪರೀಕ್ಷೆ ನಡೆಸಿದಾಗ ಅಕೆ ಕೊಕೇನ್ ಸೇವಿಸಿ ಕಾರು ಚಲಾಯಿಸಿದ್ದು ಗೊತ್ತಾಗಿದೆ. ಆಸ್ಪ್ರತ್ರೆಗ ದಾಖಲಿಸಿದಾಗಲೇ ಆಕೆ ಬದುಕುಳಿವುದು ಕಷ್ಟ, ಆಕೆಗೆ ಮೆಕಾನಿಕಲ್ ವೆಂಟಿಲೇಷನ್ ಅಗತ್ಯವಿದೆ, ಅಪಘಾತವಾದ ಸಮಯದಿಂದಲೂ ಆಕೆಗೆ ಪ್ರಜ್ಞೆ ಬಂದಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದರು. ಇನ್ನು ಎನ್‌ ಹಿಚ್‌ ಮೊದಲಿನಿಂದಲೂ ಅಂಗಾಂಗ ದಾನಕ್ಕೆ ಮನಸ್ಸು ಮಾಡಿದ್ದರು. ಹಾಗಾಗಿ ಕುಟುಂಬ ಸದಸ್ಯರು ಆಕೆಯ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.

  'ಅನಂದರ್ ವರ್ಲ್ಡ್' ಎನ್ನುವ ಟಿವಿ ಕಾರ್ಯಕ್ರಮದಿಂದ ಎನ್‌ ಹಿಚ್‌ ಜನಪ್ರಿಯತೆ ಗಳಿಸಿದ್ದರು. 1987ರಿಂದ 1991ರವರೆಗೆ ಪ್ರಸಾರವಾಗಿದ್ದ ಈ ಶೋನಲ್ಲಿ ವಿಕ್ಕಿ ಹಡ್ಸನ್ ಹಾಗೂ ಮಾರ್ಲೆ ಲವ್ ಅನ್ನುವ ಅವಳಿ ಜವಳಿ ಯುವತಿಯ ಪಾತ್ರದಲ್ಲಿ ಎನ್‌ ಹಿಚ್ ನಟಿಸಿದ್ದರು. ಇದಕ್ಕಾಗಿ ಎಮ್ಮಿ ಅವಾರ್ಡ್ ಸಹ ದೊರೆತಿತ್ತು. ಪ್ರಿಯಾಂಕ ಚೋಪ್ರಾ ನಟನೆಯ 'ಕ್ವಾಂಟಿಕೋ' ಟಿವಿ ಸೀರಿಸ್‌ನಲ್ಲೂ ಎನ್‌ ಹಿಚ್‌ ಬಣ್ಣ ಹಚ್ಚಿದ್ದರು.

  Actress Priyanka Chopra Mourns the Death of Anne Heche Who Died Due Car Crash

  ಕಳೆದೊಂದು ವಾರದಿಂದ ಅಭಿಮಾನಿಗಳು, ಆಪ್ತರು, ಹಾಲಿವುಡ್ ಮಂದಿ ಎನ್‌ ಹಿಚ್‌ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹಾಲಿವುಡ್‌ ಖ್ಯಾತ ನಟಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸಂತಾಪ ಸೂಚಿಸಿರುವ ನಟಿ ಪ್ರಿಯಾಂಕ ಚೋಪ್ರಾ "ಎನ್‌ ಹಿಚ್‌ ಮಕ್ಕಳು, ಕುಟುಂಬ ಸದಸ್ಯರು ಹಾಗೂ ದುಃಖದಲ್ಲಿರುವ ಎಲ್ಲರಿಗೂ ನನ್ನ ಸಂತಾಪ. ನಿಮ್ಮ ಜೊತೆ ಕೆಲಸ ಮಾಡಿದ್ದು ನನ್ನ ಪುಣ್ಯ. ನೀವು ಬಹಳ ಸುಂದರ ಹಾಗೂ ಅದ್ಭುತ ನಟಿ, ನನ್ನ ಹೃದಯದಲ್ಲಿ ನಿಮಗೆ ಯಾವಾಗಲೂ ವಿಶೇಷವಾದ ಸ್ಥಾನ ಇರುತ್ತದೆ" ಎಂದು ಬರೆದುಕೊಂಡಿದ್ದಾರೆ.

  'ಸಿಕ್ಸ್‌ ಡೇಸ್ ಸೆವೆನ್ ನೈಟ್ಸ್', 'ಮಿಲ್ಕ್ ಮನಿ', 'ಡೋನಿ ಬ್ರಾಸ್ಕೊ', 'ವಾಲ್ಕನೊ', 'ವಾಗ್ ಅಂಡ್ ಡಾಗ್', 'ಐ ನೋ ವಾಟ್ ಯು ಡಿಡ್ ಇನ್ ಲಾಸ್ಟ್ ಸಮ್ಮರ್', 'ರಿಟರ್ನ್ ಟು ಪ್ಯಾರಡೈಸ್', 'ಸೈಕೋ', 'ಜಾನ್ ಕ್ಯೂ', 'ಬರ್ತ್' ಎನ್‌ ಹಿಚ್‌ ನಟಿಸಿದ ಕೆಲಸ ಪ್ರಮುಖ ಸಿನಿಮಾಗಳು. 90ರ ದಶಕದಲ್ಲಿ ಬಹುಬೇಡಿಕೆ ನಟಿಯಾಗಿ ಹಾಲಿವುಡ್‌ನಲ್ಲಿ ಎನ್‌ ಹಿಚ್‌ ಗುರ್ತಿಸಿಕೊಂಡಿದ್ದರು. ಮ್ಯಾಗಜೀನ್ ಕಲವ್‌ ಪೇಜ್‌ಗಳಲ್ಲಿ ರಾರಾಜಿಸಿದ್ದರು. ಬಿಗ್‌ ಬಜೆಟ್ ಸಿನಿಮಾಗಳಲ್ಲಿ ನಟಿಸಿದ್ದರು.

  Recommended Video

  ಇನ್ಮುಂದೆ ದೇಶ ವಿರೋಧಿ ಹೇಳಿಕೆ ಕೊಡೋ ಮೊದಲು ಹುಷಾರ್‌ ಆಮೀರ್..! | Laal Singh Chaddha | Filmibeat Kannada
  English summary
  Actress Priyanka Chopra Mourns Death of Anne Heche Who Died After Car Crash. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X