For Quick Alerts
  ALLOW NOTIFICATIONS  
  For Daily Alerts

  ಗ್ಲೋಬಲ್ ಫೆಸ್ಟಿವಲ್ ಸ್ಟೇಜ್‌ನಲ್ಲೇ ಮುತ್ತಿನ ಮಳೆ ಸುರಿಸಿದ ಪ್ರಿಯಾಂಕಾ ಚೋಪ್ರಾ: ವಿಡಿಯೋ ವೈರಲ್

  |

  ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲೂ ಕೆಲಸ ಮಾಡಿ ಗ್ಲೋಬಲ್ ಸ್ಟಾರ್ ಆಗಿದ್ದು ಗೊತ್ತೇಯಿದೆ. ಪಾಪ್ ಗಾಯಕ ನಿಕ್ ಜೋನಾಸ್‌ನ ಪ್ರೀತಿಸಿದ ಮದುವೆಯಾದ ಬಳಿಕ ಪಿಗ್ಗಿ ಫಾರಿನ್‌ನಲ್ಲೇ ಸೆಟ್ಲ್ ಆಗಿಬಿಟ್ಟರು. ಇತ್ತೀಚೆಗೆ ಸಾರೋಗಸಿ ಪದ್ಧತಿಯಿಂದ ದಂಪತಿ ಹೆಣ್ಣು ಮಗುವನ್ನು ಪಡೆದಿದ್ದಾರೆ. ಇತ್ತೀಚೆಗೆ ಗ್ಲೋಬಲ್ ಸಿಟಿಜನ್ ಫೆಸ್ಟಿವಲ್‌ನಲ್ಲಿ ಪ್ರಿಯಾಂಕಾ ಹಾಗೂ ನಿಕ್ ಭಾಗವಹಿಸಿದ್ದರು. ನಿರೂಪಕಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

  ಯಾವಾಗಲೂ ರೊಮ್ಯಾಂಟಿಕ್ ಆಗಿರುವ ಪ್ರಿಯಾಂಕಾ ಹಾಗೂ ನಿಕ್ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇನ್ನು ವಿಶೇಷ ದಿನಗಳಲ್ಲಿ ಮತ್ತಷ್ಟು ರೊಮ್ಯಾಂಟಿಕ್ ಆಗಿ ಇರ್ತಾರೆ. ಶನಿವಾರ ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಗ್ಲೋಬಲ್ ಸಿಟಿಜನ್ ಫೆಸ್ಟಿವಲ್ ನಡೆದಿದೆ. ಈ ಸ್ಟೇಜ್‌ನಲ್ಲಿ ನಿಕ್ ಜೋನಾಸ್ ಅದ್ಭುತ ಪ್ರದರ್ಶನ ನೀಡಿದರು. ಅವರ ಪರ್ಫಾರ್ಮನ್ಸ್‌ಗೆ ಆಡಿಯನ್ಸ್‌ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಇದೇ ಸ್ಟೇಜ್‌ನಲ್ಲಿ ಪ್ರಿಯಾಂಕ ಚೋಪ್ರಾ ಗಂಡನಿಗೆ ಸಿಹಿಮುತ್ತು ನೀಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

  ಸಿನಿಮಾ ದಿನದ ಬಂಪರ್ ಆಫರ್: ಅವತಾರ್ 3D ಮಲ್ಟಿಪ್ಲೆಕ್ಸ್ ಟಿಕೆಟ್ ಬೆಲೆ ಕೇವಲ 75!ಸಿನಿಮಾ ದಿನದ ಬಂಪರ್ ಆಫರ್: ಅವತಾರ್ 3D ಮಲ್ಟಿಪ್ಲೆಕ್ಸ್ ಟಿಕೆಟ್ ಬೆಲೆ ಕೇವಲ 75!

  ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನದ ನಂತರ ನಿಕ್ ಜೋನಾಸ್ ಪತ್ನಿ ಪ್ರಿಯಾಂಕಾನ ವೇದಿಕೆಗೆ ಕರೆದರು. ಪರಿಚಯದ ನಂತರ ಭಾವುಕರಾದ ಪ್ರಿಯಾಂಕಾ ಚೋಪ್ರಾ, ಓಡಿ ಹೋಗಿ ಪತಿ ನಿಕ್ ಅವರನ್ನು ತಬ್ಬಿ ಮುತ್ತಿನ ಮಳೆಗೆರೆದರು. ಇದನ್ನು ನೋಡಿ ಆಡಿಯನ್ಸ್ ಹುಬ್ಬೇರಿಸಿದ್ದಾರೆ. ಸ್ಟೇಜ್‌ನಲ್ಲಿ ತಾರಾ ಜೋಡಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ನೋಡಿ ಆಡಿಯನ್ಸ್ ಸಂತೋಷಪಟ್ಟಿದ್ದಾರೆ. ಪತಿ ನಿಕ್ ಜೋನಾಸ್‌ನ ರೊಮ್ಯಾಂಟಿಕ್‌ ಆಗಿ ಪ್ರೋತ್ಸಾಹಿಸಿದ್ದು ನೋಡಿ ಫಿದಾ ಆಗಿದ್ದಾರೆ.ಇತ್ತಿಚೆಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿರುವ ಪ್ರಿಯಾಂಕ ಫೋಕಸ್ ಎಲ್ಲಾ ಹಾಲಿವುಡ್ ಪ್ರಾಜೆಕ್ಟ್‌ಗಳ ಕಡೆ ಇದೆ.

  ಆಸ್ಕರ್ ಹಾದಿಯಲ್ಲಿ 'RRR': ರಾಜಮೌಳಿ ಹೇಳಿದ್ದು ಹೀಗೆಆಸ್ಕರ್ ಹಾದಿಯಲ್ಲಿ 'RRR': ರಾಜಮೌಳಿ ಹೇಳಿದ್ದು ಹೀಗೆ

  Actress Priyanka Chopra Ran to Kiss Nick Jonas on Stage at Global Citizen Festival Video Goes Viral

  ಸದ್ಯ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಪಿಗ್ಗಿ ನಿಧಾನವಾಗಿ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಿಯಾಂಕ ನಟಿಸಿದ 'ದಿ ವೈಟ್ ಟೈಗರ್' ಮತ್ತು 'ದಿ ಮ್ಯಾಟ್ರಿಕ್ಸ್ ರಿಸರ್ಕ್ಷನ್ಸ್' ಚಿತ್ರಗಳು ರಿಲೀಸ್ ಆಗಿತ್ತು. ಸದ್ಯ 'ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ' ಎನ್ನುವ ರೊಮ್ಯಾಂಟಿಕ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಕ್ವಾಂಟಿಕೋ' ಅಮೇರಿಕನ್ ಟಿವಿ ಸೀರಿಸ್‌ನಲ್ಲಿ ನಟಿಸುವ ಮೂಲಕ ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಚೆಲುವೆ ಅಲ್ಲೇ ಸೆಟ್ಲ್ ಆಗಿಬಿಟ್ಟರು.

  'ಟೈಟಾನಿಕ್' ಸಿನಿಮಾದ ನಟಿ ಕೇಟ್ ವಿನ್ಸ್‌ಲೆಟ್ ಆಸ್ಪತ್ರೆಗೆ ದಾಖಲು!'ಟೈಟಾನಿಕ್' ಸಿನಿಮಾದ ನಟಿ ಕೇಟ್ ವಿನ್ಸ್‌ಲೆಟ್ ಆಸ್ಪತ್ರೆಗೆ ದಾಖಲು!

  English summary
  Actress Priyanka Chopra Ran to Kiss Nick Jonas on Stage at Global Citizen Festival Video Goes Viral. know More.
  Monday, September 26, 2022, 18:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X