»   » ಲಾಸ್ ಏಂಜಲೀಸ್ ಗೆ ಶಿಫ್ಟ್, ವಿಚಾರವನ್ನು ತಳ್ಳಿ ಹಾಕಿದ ಪ್ರಿಯಾಂಕ

ಲಾಸ್ ಏಂಜಲೀಸ್ ಗೆ ಶಿಫ್ಟ್, ವಿಚಾರವನ್ನು ತಳ್ಳಿ ಹಾಕಿದ ಪ್ರಿಯಾಂಕ

Posted By: ಸೋನು ಗೌಡ
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಬಾಲಿವುಡ್ ಗಿಂತ, ಜಾಸ್ತಿ ಹಾಲಿವುಡ್ ನಲ್ಲೇ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದ, ಇನ್ನು ಮುಂದಿನ ದಿನಗಳಲ್ಲಿ ಪಿಗ್ಗಿ ಲಾಸ್ ಏಂಜಲೀಸ್ ನಲ್ಲಿ ನೆಲೆಸಲಿದ್ದಾರೆ ಎಂಬ ಗಾಸಿಬ್ ಬಾಲಿವುಡ್ ಅಂಗಳದಲ್ಲಿ ಹಬ್ಬಿತ್ತು.

ಆದರೆ ಈ ಗಾಸಿಪ್ ಗಳಿಗೆ ನಟಿ ಪ್ರಿಯಾಂಕ ಚೋಪ್ರಾ ಅವರು ಖಡಕ್ ಆಗಿ ಸ್ಪಷ್ಟನೆ ನೀಡುವ ಮೂಲಕ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸದ್ಯಕ್ಕೆ ನನಗೆ ಲಾಸ್ ಏಂಜಲೀಸ್ ನಲ್ಲಿ ನೆಲೆಸುವ ಯಾವುದೇ ಯೋಜನೆಗಳಿಲ್ಲ' ಎಂದು 34 ವರ್ಷದ ನಟಿ ಪ್ರಿಯಾಂಕ ಚೋಪ್ರಾ ಅವರು ತಿಳಿಸಿದ್ದಾರೆ.[ಬರ್ತ್ ಡೇ ಸ್ಪೆಷಲ್: ಪ್ರಿಯಾಂಕ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿ]

Actress Priyanka Chopra rubbishes rumours of shifting her nest to LA

'ನಾನು ಇಂತಹ ತಮಾಷೆ ಸುದ್ದಿಗಳನ್ನು ಆವಾಗವಾಗ ಕೇಳುತ್ತಾ ಇರುತ್ತೇನೆ. ಸದ್ಯಕ್ಕೆ ನ್ಯೂಯಾರ್ಕ್ ನಲ್ಲಿ 'ಕ್ವಾಂಟಿಕೋ' ಸೀರಿಯಲ್ ಶೂಟಿಂಗ್ ನಡೆಯುತ್ತಿದೆ. ಅಷ್ಟಕ್ಕೂ ನನ್ನ ಮನೆ ಇರೋದು ಮುಂಬೈನಲ್ಲಿ ಹೊರತು ಲಾಸ್ ಏಂಜಲೀಸ್ ನಲ್ಲಿ ಅಲ್ಲ' ಎಂದು ಪ್ರಿಯಾಂಕ ಚೋಪ್ರಾ ಅವರು ಗಾಸಿಪ್ ಹಬ್ಬಿಸಿದವರಿಗೆ ಟ್ವಿಟ್ಟರ್ ಮೂಲಕ ಬಿಸಿ ಮುಟ್ಟಿಸಿದ್ದಾರೆ.[ಚಿನ್ನದ ಮೇಲಿನ ವ್ಯಾಮೋಹಕ್ಕೆ ಪ್ರಿಯಾಂಕ ಹೀಗಾ ಮಾಡೋದು.?]

ಹಾಲಿವುಡ್ ನಲ್ಲಿ ಜಾಸ್ತಿ ತಮ್ಮನ್ನು ತೊಡಗಿಸಿಕೊಂಡಿರುವ ನಟಿ ಪ್ರಿಯಾಂಕ ಅವರು 'ಕ್ವಾಂಟಿಕೋ' ಧಾರಾವಾಹಿಯ ಲೀಡ್ ನಟಿ. ಹಾಗಾಗಿ 'ಕ್ವಾಂಟಿಕೋ'ದಲ್ಲಿ ಇನ್ನೂ ಮುಂದೆ ನಟಿಸೋ ಅವಕಾಶ ಸಿಕ್ಕರೆ, ಮುಂದಿನ ದಿನಗಳಲ್ಲಿ ಪಿಗ್ಗಿ ಐದು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಲಿದ್ದಾರೆ ಎಂದು ಸುದ್ದಿಯಾಗಿತ್ತು.['ಇವರನ್ನು' ಪ್ರಿಯಾಂಕ ಅನ್ಕೊಂಡ್ರಾ, ಖಂಡಿತ ಅಲ್ವೇ ಅಲ್ಲ.!]

Actress Priyanka Chopra rubbishes rumours of shifting her nest to LA

ಮಾತ್ರವಲ್ಲದೇ ಹಾಲಿವುಡ್ ನಲ್ಲಿ ಬಹಳಷ್ಟು ಅವಕಾಶಗಳು ಸಿಗುತ್ತಿರುವ ಕಾರಣ, ಬಾಲಿವುಡ್ ನಲ್ಲಿ ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಕೂಡ ಅಲ್ಲಲ್ಲಿ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದೀಗ ಎಲ್ಲಾ ಅಂತೆ-ಕಂತೆಗಳಿಗೆ ಪಿಗ್ಗಿ ಬ್ರೇಕ್ ಹಾಕಿದ್ದಾರೆ. ಸದ್ಯಕ್ಕೆ ಪಿಗ್ಗಿ 'ಬೇವಾಚ್' ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.['ಬೇವಾಚ್' ಕಂಪ್ಲೀಟ್ ಆದ ಖುಷಿಯಲ್ಲಿ ಪ್ರಿಯಾಂಕ ಲಿಪ್ ಲಾಕ್ ಮಾಡಿದ್ರಾ?]

English summary
Bollywood Actress Priyanka Chopra rubbishes rumours of shifting her nest to Los Angles. Actress Priyanka is so busy with her projects in the Western lands that rumours started doing the rounds that she might be stationing in Los Angles for the next five years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada