»   » ಅರ್ಜೆಂಟ್ ನಲ್ಲಿ ಟಾಪ್ ಲೆಸ್ ಆಗಿ ಆಸ್ಪತ್ರೆಗೆ ದಾಖಲಾದ ಹಾಲಿವುಡ್ ನಟಿ

ಅರ್ಜೆಂಟ್ ನಲ್ಲಿ ಟಾಪ್ ಲೆಸ್ ಆಗಿ ಆಸ್ಪತ್ರೆಗೆ ದಾಖಲಾದ ಹಾಲಿವುಡ್ ನಟಿ

Posted By: ಸೋನು ಗೌಡ
Subscribe to Filmibeat Kannada

ಚಿತ್ರದ ಶೂಟಿಂಗ್ ಸಂದರ್ಭದಲ್ಲಿ 49 ವರ್ಷದ ಹಾಲಿವುಡ್ ನಟಿ ಸಲ್ಮಾ ಹಯೆಕ್ ಅವರು ತೀವ್ರ ಗಾಯಗೊಂಡ ಹಿನ್ನಲೆಯಲ್ಲಿ ತಕ್ಷಣ ಆಕೆಯನ್ನು ಚಿತ್ರತಂಡ ವಾಷಿಂಗ್ಟನ್ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಸುದ್ದಿ ಆದಲ್ಲಾ, ಸುದ್ದಿಯಾಗಿದ್ದು, ಆಸ್ಪತ್ರೆಯಲ್ಲಿ ಸಲ್ಮಾ ಹಯೆಕ್ ತೆಗೆದ ಫೊಟೋ.

ಅಂದಹಾಗೆ ಮೆಕ್ಸಿಕನ್ ನಟಿ ಸಲ್ಮಾ ಹಯೆಕ್ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ತಕ್ಷಣಕ್ಕೆ ಆಸ್ಪತ್ರೆಯಲ್ಲಿ ಸಲ್ಮಾ ಅವರ ಡ್ರೆಸ್ಸಿಂಗ್ ಅವತಾರ ನೋಡಿದ ಅಭಿಮಾನಿಗಳು ಹೌಹಾರಿದ್ದಾರೆ.

Actress Salma Hayek rushed to hospital wearing inappropriate shirt

ಅಷ್ಟಕ್ಕೂ ಆಗಿದ್ದು ಇಷ್ಟೆ, ಹಾಲಿವುಡ್ ನಟಿ ಸಲ್ಮಾ ಅವರಿಗೆ 'ಡ್ರಂಕ್ ಪೇರೆಂಟ್ಸ್' ಕಾಮಿಡಿ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ತಲೆಗೆ ತೀವ್ರ ಗಾಯ ಆಗಿದ್ದರಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆ ಸಂದರ್ಭದಲ್ಲಿ ಅವರು ಸಿನಿಮಾಕ್ಕಾಗಿ ಧರಿಸಿದ್ದ ಡ್ರೆಸ್ಸ್ ನಲ್ಲಿಯೇ ಇದ್ದುದ್ದರಿಂದ ಆಸ್ಪತ್ರೆಯ ಸಿಬ್ಬಂದಿ, ಸಲ್ಮಾ ಅವರು ಟಾಪ್ ಲೆಸ್ ಆಗಿ ಬಂದಿದ್ದಾರೆ ಎಂದು ಕನ್ ಫ್ಯೂಶನ್ ಮಾಡಿಕೊಂಡಿದ್ದಾರೆ.

Actress Salma Hayek rushed to hospital wearing inappropriate shirt

ವಾಸ್ತವವಾಗಿ ನಟಿ ಸಲ್ಮಾ ಅವರು ಸ್ಕಿನ್ ಕಲರ್ ಟಾಪ್ ಹಾಕಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ಆ ಟಾಪ್ ಮೇಲೆ ಎರಡು ಹಸ್ತಗಳ ಚಿತ್ರ ಕೂಡ ಇದ್ದು, ಆ ಹಸ್ತಗಳು ಆಕೆಯ ಎದೆಯ ಭಾಗವನ್ನು ಮುಚ್ಚಿದಂತೆ ಇದ್ದು, ಮೇಲ್ನೋಟಕ್ಕೆ ಟಾಪ್ ಹಾಕದ ಹಾಗೆ ಕಂಡುಬರುತ್ತಿತ್ತು. ಇದನ್ನು ಕಂಡ ಜನ ಆಕೆ ಟಾಪ್ ಲೆಸ್ ಆಗಿ ಬಂದಿದ್ದಾರೆ ಎಂದು ಒಂದು ಕ್ಷಣ ಗಾಬರಿಯಾಗಿದ್ದರು.

ಇನ್ನು ಈ ಫೊಟೋವನ್ನು ನಟಿ ಸಲ್ಮಾ ಅವರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು, 'ನನಗೆ ಶೂಟಿಂಗ್ ವೇಳೆ ತಲೆಗೆ ಗಾಯ ಆಗಿದ್ದರಿಂದ ನಾನು ತಕ್ಷಣ ಆಸ್ಪತ್ರೆಗೆ ಬರಬೇಕಾಯಿತು. ಆದರೆ ಆ ವೇಳೆ ನಾನು ಧರಿಸಿದ್ದ ಬಟ್ಟೆ ಮಾತ್ರ ಆಸ್ಪತ್ರೆಗೆ ಸೂಟ್ ಆಗ್ತಾ ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ.

Actress Salma Hayek rushed to hospital wearing inappropriate shirt

ಒಟ್ನಲ್ಲಿ ತರಾತುರಿಯಲ್ಲಿ ವಿಚಿತ್ರ ಡೆಸ್ಸ್ ಹಾಕಿಕೊಂಡು ಬಂದ ಹಾಲಿವುಡ್ ಬೆಡಗಿ ಸಲ್ಮಾ ಹಯೆಕ್ ಅವರು ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದಾರೆ.

English summary
Mexican actress Salma Hayek has shared the moment she was forced to make an emergency trip to the hospital wearing a rather risqué shirt. Hayek, 49, was filming new comedy Drunk Parents, when she received a “minor head injury”, reportedly requiring a trip to the hospital ER.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada