Sobhita Dhulipala: 'ಮಂಕಿ ಮ್ಯಾನ್' ಮೂಲಕ ಹಾಲಿವುಡ್‌ಗೆ ಕಾಲಿಟ್ಟ ನಟಿ ಶೋಭಿತಾ ಧುಲಿಪಾಲ
ತೆಲುಗು, ತಮಿಳು, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ ಶೋಭಿತಾ ಧುಲಿಪಾಲ ಹಾಲಿವುಡ್‌ಗೂ ಕಾಲಿಡುತ್ತಿದ್ದಾರೆ. ನಾಗ ಚೈತನ್ಯ ಅವರ ಜೊತೆಗಿನ ಡೇಟಿಂಗ್ ರೂಮರ್‌ನಿಂದ ಹೆಚ್ಚು ಚರ್ಚೆಗೆ ಬಂದ ನಟಿ ಶೋಭಿತಾ ಧುಲಿಪಾಲ ಈಗ 'ಮಂಕಿ ಮ್ಯಾನ್' ಸಿನಿಮಾ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.
ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ನಟ ದೇವ್ ಪಟೇಲ್ ಅವರ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮಂಕಿ ಮ್ಯಾನ್' ಮೂಲಕ ಶೋಭಿತಾ ಧುಲಿಪಾಲ ಹಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಮಂಕಿ ಮ್ಯಾನ್ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಟ್ರೈಲರ್‌ನಲ್ಲಿ ಶೋಭಿತಾ ಕಾಣಿಸಿಕೊಂಡಿದ್ದಾರೆ.

ಹಾಲಿವುಡ್‌ಗೆ ಕಾಲಿಟ್ಟ ಶೋಭಿತಾ ಧುಲಿಪಾಲ
ನಟಿ ಶೋಭಿತಾ ಧುಲಿಪಾಲ ಅವರು ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದ ನಟ, ನಿರ್ದೇಶಕ ದೇವ್ ಪಟೇಲ್ ಅವರೊಂದಿಗೆ 'ಮಂಕಿ ಮ್ಯಾನ್' ಸಿನಿಮಾ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಆಕ್ಷನ್ ಪ್ಯಾಕ್ಡ್ ಥ್ರಿಲ್ಲರ್ ರಿವೇಂಜ್ ಕಥೆಯು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.
ಮಂಕಿ ಮ್ಯಾನ್ ಮೂಲಕ ಶೋಭಿತಾ ಧುಲಿಪಾಲ ಅವರು ಅಂತರರಾಷ್ಟ್ರೀಯ ಚಲನಚಿತ್ರ ರಂಗಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಆಸಕ್ತಿದಾಯಕವಾಗಿದೆ. ಶೋಭಿತಾ ಅವರ ಝಲಕ್ ಕೂಡ ಗಮನ ಸೆಳೆಯುವಂತೆ ಮಾಡಿದೆ. ಈ ಸಿನಿಮಾ ಮೂಲಕ ಹಾಲಿವುಡ್ ಪಾದಾರ್ಪಣೆ ಮಾಡುವ ಜೊತೆಗೆ ನಟಿ ತನ್ನ ವೃತ್ತಿಜೀವನವನ್ನು ಅಂತಾರಾಷ್ಟ್ರೀಯ ಸಿನಿಮಾಗಳಿಗೂ ಹಬ್ಬಿಸುತ್ತಿದ್ದಾರೆ.

ನಟಿ ಶೋಭಿತಾ ಧುಲಿಪಾಲ ಕೊನೆಯದಾಗಿ 'ಪೊನ್ನಿಯನ್ ಸೆಲ್ವನ್ ಭಾಗ 2' ಮತ್ತು 'ಮೇಡ್ ಇನ್ ಹೆವೆನ್ ಸೀಸನ್ 2' ನಲ್ಲಿ ಕಾಣಿಸಿಕೊಂಡಿದ್ದರು. ಅವರ ಹಾಲಿವುಡ್ ಚಿತ್ರ 'ಮಂಕಿ ಮ್ಯಾನ್' ಏಪ್ರಿಲ್ 5, 2024 ರಂದು ಬಿಡುಗಡೆಯಾಗಲಿದೆ.
ಶುಕ್ರವಾರ ರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಶೋಭಿತಾ ಧುಲಿಪಾಲ ಅವರು ತಮ್ಮ ಚೊಚ್ಚಲ ಹಾಲಿವುಡ್ ಚಿತ್ರವನ್ನು ಘೋಷಿಸಿದ್ದಾರೆ. "ನನ್ನ ಚೊಚ್ಚಲ ಹಾಲಿವುಡ್ ಚಿತ್ರ ಮಂಕಿಮ್ಯಾನ್‌ನ ಟ್ರೈಲರ್ ಅನ್ನು ಹಂಚಿಕೊಳ್ಳಲು ಸಕತ್ ಸಂತೋಷವಾಗಿದೆ. ಏಪ್ರಿಲ್ 5 ರಂದು ಜಾಗತಿಕವಾಗಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ" ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಮಂಕಿ ಮ್ಯಾನ್
ಆಕ್ಷನ್ ಥ್ರಿಲ್ಲರ್ ಮಂಕಿ ಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ನಟ ದೇವ್ ಪಟೇಲ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಅವರೇ ಚಿತ್ರದಲ್ಲಿ ನಾಯಕ. ಸಿನಿಮಾ ಹನುಮಂತನ ದಂತಕಥೆಯಿಂದ ಪ್ರೇರಿತವಾಗಿದೆ. ಮೂರು ನಿಮಿಷಗಳ ಅವಧಿಯ ಟ್ರೇಲರ್ ತನ್ನ ತಾಯಿಯನ್ನು (ಅದಿತಿ ಕಲ್ಕುಂಟೆ) ಕೊಂದ ಭ್ರಷ್ಟ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿಯ (ದೇವ್) ಸುತ್ತ ಸುತ್ತುತ್ತದೆ. ಬಡವರು ಮತ್ತು ಶಕ್ತಿಹೀನರನ್ನು ವ್ಯವಸ್ಥಿತವಾಗಿ ಬಲಿಪಶು ಮಡುವ ವ್ಯವಸ್ಥೆಯನ್ನು ಚಿತ್ರದಲ್ಲಿ ನೋಡಬಹುದು ಎಂಬುದನ್ನು ಟ್ರೈಲರ್ ಕಟ್ಟಿಕೊಟ್ಟಿದೆ.
ಚಿತ್ರದಲ್ಲಿ ಮಕರಂದ್ ದೇಶಪಾಂಡೆ, ಸಿಕಂದರ್ ಖೇರ್, ಶಾರ್ಲ್ಟೋ ಕಾಪ್ಲಿ, ಪಿಟೋಬಾಶ್, ವಿಪಿನ್ ಶರ್ಮಾ, ಅದಿತಿ ಕಲ್ಕುಂಟೆ ಮತ್ತು ಅಶ್ವಿನಿ ಕಲ್ಸೇಕರ್ ಕೂಡ ನಟಿಸಿದ್ದಾರೆ. ಮಂಕಿ ಮ್ಯಾನ್ ಏಪ್ರಿಲ್ 5 ರಂದು ಜಾಗತಿಕವಾಗಿ ಥಿಯೇಟರ್‌ಗಳಿಗೆ ಬರಲಿದೆ. ಮಂಕಿ ಮ್ಯಾನ್‌ಗೆ ದೇವ್ ಪಟೇಲ್, ಜೋಮನ್ ಥಾಮಸ್, ಜೋರ್ಡಾನ್ ಪೀಲೆ, ವಿನ್ ರೋಸೆನ್‌ಫೆಲ್ಡ್, ಇಯಾನ್ ಕೂಪರ್, ಬೇಸಿಲ್ ಇವಾನಿಕ್, ಎರಿಕಾ ಲೀ, ಕ್ರಿಸ್ಟಿನ್ ಹೇಬ್ಲರ್ ಮತ್ತು ಅಂಜಯ್ ನಾಗ್‌ಪಾಲ್ ಜಂಟಿಯಾಗಿ ನಿರ್ಮಿಸಿದ್ದಾರೆ.


Click it and Unblock the Notifications











