ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
ಬದುಕು ಕಲಿಸುವ ಪಾಠ ತುಂಬಾನೇ ದೊಡ್ಡದು. ಇಲ್ಲಿ ಕಷ್ಟ ಮತ್ತು ತಾಳ್ಮೆಯ ಪರೀಕ್ಷೆ ಮಾಡುತ್ತೆ. ಹಸಿವು-ಅನಿವಾರ್ಯತೆ..ಜೀವನದ ಪಥವನ್ನೇ ಬದಲಿಸುತ್ತೆ.ಇದಕ್ಕೆ ಲಾನಾ ರೋಡ್ಸ್ ಅತ್ಯುತ್ತಮ ಉದಾಹರಣೆ.
ಹೌದು.. ಲಾನಾ ರೋಡ್ಸ್.. ಮಾಜಿ ನೀಲಿ ರಾಣಿ. ಒಂದ್ಕಾಲದಲ್ಲಿ ಪಡ್ಡೆಹೈಕ್ಳಿಗೆ ತನ್ನ ಮೈಮಾಟದ ಸಿಹಿಯನ್ನ ಹಂಚಿ, ಜಗದ್ವಿಖ್ಯಾತಿ ಗಳಿಸಿದ್ದ ಲಾನಾ ಅವರನ್ನ ಪೋರ್ನ್ ಜಗತ್ತು ಅಪ್ಪಿಕೊಂಡಿದ್ದು ಬಲವಂತವಾಗಿ ಅನ್ನುವುದೇ ಈ ಕ್ಷಣದ ಅಚ್ಚರಿ ಮತ್ತು ವಿಶೇಷ.

ನಿಮಗೆ ಗೊತ್ತಿರಲಿ .. ಲಾನಾ ಗೆ ಈಗ 27 ರ ಪ್ರಾಯ. ಆದರೆ ಲಾನಾ ಈ ಪೋರ್ನ್ ಪ್ರಪಂಚಕ್ಕೆ ಬಂದಿದ್ದು ಬುದ್ದಿ ಬಲಿಯುವ ಮುನ್ನವೇ. ಕೇವಲ 19ರ ಹರೆಯದಲ್ಲಿಯೇ ಲಾನಾ, ನೀಲಿ ರಾಣಿಯಾಗಿದ್ದರು. ದುರಂತ ಅಂದರೆ ಈ ಕರಾಳ ಪ್ರಪಂಚಕ್ಕೆ ಬರುವ ಮುನ್ನ ಲಾನಾಗೆ ತನ್ನ ಭವಿಷ್ಯದ ಅರಿವು ಇರಲಿಲ್ಲ. ತನ್ನ ಕೆಲಸದ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ಎಲ್ಲವೂ ಆಕಸ್ಮಿಕ. ಒಂದರ್ಥದಲ್ಲಿ ವಿಧಿಲಿಖಿತ
ಹೌದು, ಅಸಲಿಗೆ ಲಾನಾ ಅವರದ್ದು ಕಡುಬಡತನದ ಕುಟುಂಬ. ಕಣ್ಣು ಬಿಟ್ಟ ಕ್ಷಣದಿಂದ ಲಾನಾ ನೋಡಿದ್ದು ಕಷ್ಟಗಳ ಸರಮಾಲೆಯನ್ನೇ. 100 ಡಾಲರ್ ಅಂದರೇನೆ ಅದು ಲಕ್ಷಾಂತರ ರೂಪಾಯಿಗೆ ಸಮ ಎಂದು ಅಂದುಕೊಂಡವರು ಲಾನಾ. ಇಂಥಾ ಲಾನಾ ಬದುಕಿನಲ್ಲಿ ಅದೊಂದು ದಿನ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದ. 1200 ಡಾಲರ್ ನ ಆಮಿಷವನ್ನೊಡ್ಡಿದ್ದ. ದೊಡ್ಡ ದೊಡ್ಡ ಕನಸು ಕಾಣುವ ದಿನಗಳವು. ಸಹಜವಾಗಿಯೇ ಈ ಬಲೆಗೆ ಲಾನಾ ಬಿದ್ದರು. ಹಿಂದೆ..ಮುಂದೆ..ಯೋಚನೆ ಮಾಡದೇ ಆ ವ್ಯಕ್ತಿಯ ಜೊತೆ ಹೊರಟು ಹೋದರು.

ಆ ಕ್ಷಣಕ್ಕೆ ಸ್ವರ್ಗದ ಬಾಗಿಲು ತೆರೆಯುತ್ತಿದೆ, ತನ್ನೆಲ್ಲ ಕಷ್ಟ ಕಾರ್ಪಣ್ಯಗಳು ಕೊನೆಯಾಗುತ್ತಿವೆ ಎಂದೇ ಲಾನಾ ರೋಡ್ಸ್ ಅಂದುಕೊಂಡಿದ್ದರು. ಆದರೆ.. ಇದು ಬದುಕು. ಹುಚ್ಚು ಕಲ್ಪನೆಗಳು ಬದುಕಿನ ಗಾಲಿಯನ್ನ ಎಳೆಯುತ್ತಿರುವಾಗಲೇ ಕತ್ತಲೆ ಆವರಿಸಿಬಿಡುತ್ತೆ. ಲಾನಾ ಬದುಕಿನಲ್ಲಿ ಕೂಡ ಅಕ್ಷರಶಃ ಆಗಿದ್ದು ಇದೆ. ಅಸ್ತಿತ್ವಕ್ಕಾಗಿ.. ಬದುಕಿಗಾಗಿ.. ಅಲೆಯುವಾಗ ಕೆನ್ನೆಯನ್ನ ತೋಯಿಸಿದ್ದ ಆ ಕಣ್ಣೀರ ಹನಿಗಳು ಲಾನಾ ಅವರನ್ನ ಬಲು ದೂರ ಕರೆದೊಯ್ದಿದ್ದವು. ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಭೀಭತ್ಸ ನೋಟಗಳು ಲಾನಾ ಅವರನ್ನ ಹರಿದು ಮುಕ್ಕಿದ್ದವು.
ಪ್ರತಿ ದಿನವೂ 40 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯ ಜೊತೆ ಮಲಗಬೇಕಾದ ಅನಿವಾರ್ಯ ಪ್ರಸಂಗ. ಮೇಲಾಗಿ ಆ ಸಂದರ್ಭ ಮತ್ತು ಸನ್ನಿವೇಶದ ವಿಡಿಯೋ ಚಿತ್ರೀಕರಣ. ಇದೆಲ್ಲದರಿಂದ ಹೈರಾಣಾದ ಲಾನಾ ಮೇಲೆ, ತನ್ನ ವಿಡಿಯೋವನ್ನ ಲಕ್ಷಾನುಲಕ್ಷ ಅಲ್ಲ, ಕೋಟ್ಯಂತರ ಜನ ನೋಡ್ತಿದ್ದಾರೆ ಎಂಬ ಸತ್ಯ ಗೊತ್ತಾದಾಗ ಆಕಾಶವೇ ಕಳಚಿ ಬಿದ್ದಿತ್ತು. ವಾಸ್ತವದ ಅರಿವು ಲಾನಾಗೆ ಆಗಿದ್ದು ಇಲ್ಲಿಯೇ

ಅಲ್ಲಿಂದಾಚೆ ಪಡಬಾರದ ಕಷ್ಟವನ್ನ ಪಟ್ಟ ಲಾನಾ ರೋಡ್ಸ್, ಹಾಗೂ ಹೀಗೂ ಕೇವಲ 08 ತಿಂಗಳಿನಲ್ಲಿಯೇ ಆ ಕಪಿಮುಷ್ಠಿಯಿಂದ ಹೊರ ಬಂದರು. ಹಾಗಂಥ, ಎಲ್ಲರಿಂದ ಇದು ಸಾಧ್ಯ ಇಲ್ಲ. ಹೊರ ಬರುವ ದಾರಿ ಸುಲಭವೂ ಅಲ್ಲ. ಯಾಕೆಂದರೆ ಖುದ್ದು ಲಾನಾ ಹೇಳಿರುವಂತೆ ಹುಡುಗಿಯರು ಅಲ್ಲಿಂದ ಬರಬೇಕು ಎಂದರೂ ಬರುವುದು ಸಾಧ್ಯವೇ ಆಗುವುದಿಲ್ಲ, ಜೀವನಪೂರ್ತಿ ನರಳಬೇಕಾಗುತ್ತದೆ. ಈ ಕಾರಣಕ್ಕೆ ಬೇರೆ ದಾರಿಯಿಲ್ಲದೇ ಅನೇಕರು, ತಮ್ಮ ಅಸ್ತಿತ್ವ ಮರೆತು ಅನಿವಾರ್ಯವಾಗಿ ಪೋರ್ನ್ ಪ್ರಪಂಚದಲ್ಲಿಯೇ ಪುನರ ಜನ್ಮವನ್ನ ಪಡೆಯುತ್ತಾರೆ. ಅಲ್ಲಿಯೇ ಕೊನೆಯುಸಿರೆಳೆಯುತ್ತಾರೆ. ಇನ್ನೂ ಕೆಲವರು ದುಡ್ಡು, ಕೀರ್ತಿಗಾಗಿ ತಮ್ಮ ಆತ್ಮಸಾಕ್ಷಿಯನ್ನೇ ಮಾರಿಕೊಂಡು ಬದುಕುತ್ತಾರೆ.
ಇನ್ನೂ ಪೋರ್ನ್ ಜಗತ್ತಿಗೆ ಲಾನಾ ವಿದಾಯ ಹೇಳಿ ಬಂದರೂ ಕೂಡ, ಇವರ ಪುರಾತನ ವಿಡಿಯೋ ಇವತ್ತು ಕೂಡ ಸಾಮಾಜಿಕ ಜಾಲತಾಣದಲ್ಲಿವೆ. ಆ ವಿಡಿಯೋಗಳನ್ನ ನೋಡಿದಾಗೆಲ್ಲ ಲಾನಾಗೆ ಆ ಕರಾಳ ದಿನ ನೆನಪಾಗುತ್ತವೆ. ಈ ಕಾರಣಕ್ಕೆ.. ವಿಡಿಯೋ ಡಿಲೀಟ್ ಮಾಡುವಂತೆ, ಲಾನಾ ಅನೇಕ ಬಾರಿ ಗೋಗರೆದಿದ್ದಾರೆ ಕೂಡ ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ

ಇವೆಲ್ಲ ಕಾರಣಗಳಿಂದ ನೊಂದು-ಬೆಂದು ಹೋಗಿರುವ ಲಾನಾ,ಈ ವೃತ್ತಿಯಿಂದ ತುಂಬಾ ಹಿಂಸೆ ಅನುಭವಿಸಿದ್ದೇನೆ. ಜೀವನದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನನ್ನಂತೆಯೇ ಬಹಳಷ್ಟು ಹುಡುಗಿಯರು ಸಣ್ಣ ಪಟ್ಟಣಗಳಿಂದ ಬರುತ್ತಾರೆ ಮತ್ತು ದುಡ್ಡಿಗಾಗಿ ಕಷ್ಟಪಡುತ್ತಿರುತ್ತಾರೆ. ಅಂಥ ಸಮಯದಲ್ಲಿ ಇವರೊಡ್ಡುವ ಆಮಿಷ ದೊಡ್ಡ ಮೊತ್ತ ಎನಿಸಿಬಿಡುತ್ತದೆ ಎಂದಿದ್ದಾರೆ.
ಇನ್ನೂ ಪೋರ್ನ್ ಸ್ಟಾರ್ ಎಂಬ ಹಣೆ ಪಟ್ಟಿಯನ್ನಕಳಚಿ ಆಚೆ ಬಂದ ನಂತರ, ಹಲವಾರು ಯುಟ್ಯೂಬರ್, ಇನ್ಸ್ಟಾಗ್ರಾಮರ್ ಸೇರಿದಂತೆ ಅನೇಕ ಪ್ರಭಾವಿಗಳನ್ನು ನಾನು ಭೇಟಿಯಾದೆ ಎಂದಿರುವ ಲಾನಾ, ಪೋರ್ನ್ ವಿಡಿಯೋ ಮಾಡಿ ಬರುವ ಹಣಕ್ಕಿಂತಲೂ ಮೂರ್ನಾಲ್ಕು ಪಟ್ಟು ಹೆಚ್ಚಿಗೆ ಹಣ ಅವರು ಕೇವಲ ಪೋಸ್ಟ್ ಹಾಕುವ ಮೂಲಕ ಗಳಿಸುತ್ತಾರೆ ಎಂಬ ವಿಚಾರ ನನಗೆ ಗೊತ್ತಾಯಿತು ಅಂದಿದ್ದಾರೆ. ಬೇರೆ ಬೇರೆ ವಿಧಗಳಲ್ಲಿ ಖ್ಯಾತಿ ಪಡೆಯಬಹುದು ಎನ್ನುವುದನ್ನು ನಾನು ಮನಗಂಡೆ ಎಂದಿದ್ದಾರೆ.

ಇದೇ ಸಮಯದಲ್ಲಿ ಒಮ್ಮೆ ಪೋರ್ನ್ ಲೋಕಕ್ಕೆ ಹೋಗಿಬಿಟ್ಟರೆ ನಾವು ಏನೇ ಹೇಳಿದರು ನಾವು ಮಹಿಳೆಯರು ಏನೇ ಹೇಳಿದರೂ ಯಾರೂ ನಂಬುವುದಿಲ್ಲ ಎಂದಿದ್ದಾರೆ. ಪುರುಷರಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಅವರಿಗೆ ಬೇಕಿರುವುದು ತೃಪ್ತಿ ಅಷ್ಟೇ. ಆದರೆ ಕೊನೆಗೆ ಬಲಿಯಾಗುವುದು ಹುಡುಗಿಯರು ಮಾತ್ರ ಎಂಬ ಅಭಿಪ್ರಾಯವನ್ನೂ ಲಾನಾ ರೋಡ್ಸ್ ವ್ಯಕ್ತಪಡಿಸಿದ್ದಾರೆ


Click it and Unblock the Notifications











