For Quick Alerts
  ALLOW NOTIFICATIONS  
  For Daily Alerts

  ಅಫ್ಘಾನಿಸ್ಥಾನದ ಖ್ಯಾತ ಹಾಸ್ಯನಟ ನಜರ್ ಮೊಹಮ್ಮದ್ ಹತ್ಯೆ

  |

  ಅಫ್ಘಾನಿಸ್ಥಾನದ ಕಂದಹಾರ್ ಪ್ರಾಂತ್ಯದಲ್ಲಿ ಖ್ಯಾತ ಹಾಸ್ಯ ನಟ ನಜರ್ ಮೊಹಮ್ಮದ್ ಅವರನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಜರ್ ಈ ಹಿಂದೆ ಸ್ಥಳಿಯ ಪೊಲೀಸಿಗೆ ಸೇವೆ ಸಲ್ಲಿಸಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ನಜರ್ ಮೊಹಮ್ಮದ್ ಹತ್ಯೆಯನ್ನು ಆನೇಕ ದೇಶಗಳು ಖಂಡಿಸಿವೆ.

  ಕಂದಹಾರ್‌ನ ತನ್ನ ನಿವಾಸದ ಸಮೀಪದಲ್ಲೇ ನಜರ್ ಮೊಹಮ್ಮದ್ ಅವರನ್ನು ಹತ್ಯೆ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ರಾತ್ರಿ ನಜರ್ ನಿವಾಸಕ್ಕೆ ಬಂದ ದುಷ್ಕರ್ಮಿಗಳು ನಜರ್ ಅವರನ್ನು ಕರೆದೊಯ್ದು ಗುಂಡಿಕ್ಕಿ ಸಾಯಿಸಲಾಗಿದೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.

  ತಾಲಿಬಾನ್ ಉಗ್ರ ಸಂಘಟನೆ ನಜರ್ ಹತ್ಯೆ ಮಾಡಿದೆ ಎಂದು ನಜರ್ ಕುಟುಂಬದವರು ಆರೋಪಿಸಿದ್ದಾರೆ. ಉಗ್ರರು ನಜರ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ತಾಲಿಬಾನ್ ಉಗ್ರ ಸಂಘಟನೆ ಈ ಹತ್ಯೆಯನ್ನು ತಾವು ಮಾಡಿಲ್ಲ ಎಂದು ಹೇಳಿದೆ.

  ಅಫ್ಘಾನ್ ಭದ್ರತಾ ಪಡೆಗಳ ಮೇಲೆ ತಾಲಿಬಾಲ್ ದಾಳಿ ತೀವ್ರಗೊಳಿಸಿದ್ದು, ಈಗಾಗಲೇ ಕಂದಹಾರ್ ಪ್ರಾಂತ್ಯದ ಶೇ. 70ರಷ್ಟು ವಶಪಡಿಸಿಕೊಳ್ಳಲಾಗಿದೆ ಎಂದು ತಾಲಿಬಾನ್ ಉಗ್ರ ಸಂಘಟನೆ ಘೋಷಣೆ ಮಾಡಿದೆ. ಕಂದಹಾರ್ ಪ್ರಾಂತ್ಯದಲ್ಲಿ ನೆಲೆಸಿದ್ದ ಕುಟುಂಬಗಳು ಪಲಾಯನ ಮಾಡುತ್ತಿದ್ದಾರೆ. ಅಫ್ಘಾನ್ ಸರ್ಕಾರ ಸ್ಥಾಪಿಸಿದ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

  English summary
  Afghanistan comedian Khasha Zwan brutal murder; Taliban denies killing him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X