For Quick Alerts
  ALLOW NOTIFICATIONS  
  For Daily Alerts

  ರಿಯಾನಾ ಬಳಿಕ ರೈತರ ಬೆಂಬಲಕ್ಕೆ ನಿಂತ ಮಾಜಿ ನೀಲಿ ತಾರೆ ಮಿಯಾ ಖಲೀಫಾ

  |

  ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ರೈತ ಹೋರಾಟಕ್ಕೆ ಜಾಗತಿಕ ಸಿನಿ ತಾರೆಯರು ಸಹ ಬೆಂಬಲ ನೀಡುತ್ತಿದ್ದಾರೆ. ಖ್ಯಾತ ಪಾಪ್ ಗಾಯಕಿ ರಿಯಾನಾ ಭಾರತದ ರೈತರಿಗೆ ಬೆಂಬಲ ನೀಡಿದ ಬೆನ್ನಲ್ಲೇ ಇದೀಗ ಖ್ಯಾತ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬೆಂಬಲ ನೀಡಿದ್ದಾರೆ. ಮಿಯಾ ಟ್ವೀಟ್ ಮಾಡುತ್ತಿದ್ದಂತೆ ಟಾಪ್ ಟ್ರೆಂಡಿಂಗ್ ನಲ್ಲಿದ್ದಾರೆ.

  ಮಿಯಾ ಖಲೀಫಾ ಕೈಯಲ್ಲಿ ಬುದ್ದಿ ಹೇಳಿಸಿಕೊಳ್ಳೊ ಹಾಗಾಯ್ತು ಮೋದಿ ಪರಿಸ್ಥಿತಿ | Mia Khalifa | Narendra Modi

  ಭಾರತದಲ್ಲಿ ಅನೇಕ ಸಿನಿತಾರೆಯರು ರೈತ ಹೋರಾಟಕ್ಕೆ ಬೆಂಬಲ ನೀಡಿದರೆ ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ನಟಿ ಕಂಗನಾ ರಣಾವತ್ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಭಯೋತ್ಪಾದಕರು ಎಂದು ಕೆಂಡಕಾರುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರೈತ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಸಿಗುತ್ತಿರುವುದರಿಂದ ಪ್ರತಿಭಟನೆಗೆ ಮತ್ತಷ್ಟು ಬಲ ಬರುತ್ತಿದೆ.

  ರೈತರ ಹೋರಾಟ ಬೆಂಬಲಿಸಿದ ಪಾಪ್ ಗಾಯಕಿ ವಿರುದ್ಧ 'ಫೂಲ್' ಎಂದು ಕಿಡಿಕಾರಿದ ಕಂಗನಾ

  ರೈತ ಹೋರಾಟಕ್ಕೆ ಬೆಂಬಲ ನೀಡಿ ಟ್ವೀಟ್ ಮಾಡಿರುವ ಮಾಜಿ ನೀಲಿ ತಾರೆ ಮಿಯಾ, 'ಮಾನವ ಹಕ್ಕು ಉಲ್ಲಂಘನೆ ಯಾವ ಹಂತಕ್ಕೆ ಹೋಗುತ್ತಿದೆ. ದೆಹಲಿ ಸುತ್ತಮುತ್ತ ಇಂಟರ್ನೆಟ್ ಸಹ ಕಡಿತಗೊಳಿಸಲಾಗಿದೆ.' ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ 'ಫಾರ್ಮರ್ ಪ್ರೊಟೆಸ್ಟ್' ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

  ರೈತರನ್ನು ಕೊಲೆ ಮಾಡುತ್ತಿರುವುದನ್ನು ನಿಲ್ಲಿಸಿ ಎಂದು ಫ್ಲೆಕ್ಸ್ ಹಿಡಿದು ರೈತ ಮಹಿಳೆ ಪ್ರತಿಭಟನೆ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಟ್ವೀಟ್ ಮಾಡಿ, ನಾನು ರೈತ ಪರ ನಿಂತಿದ್ದೇನೆ ಎಂದು ಹೇಳಿದ್ದಾರೆ.

  ಖ್ಯಾತ ಪಾಪ್ ಗಾಯಕಿ ಮತ್ತು ಹಾಲಿವುಡ್ ನಟಿ ರಿಯಾನಾ ರೈತ ಪ್ರತಿಭಟನೆಗೆ ಬೆಂಬಲ ನೀಡಿ, 'ಇದರ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ' ಎಂದು ಪ್ರಶ್ನೆ ಮಾಡಿದ್ದಾರೆ. ರಿಯಾನಾ ಟ್ವೀಟ್ ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ರಿಯಾನಾ ವಿರುದ್ಧ ಕಿಡಿಕಾರಿರುವ ಕಂಗನಾ, 'ನಾವ್ಯಾಕೆ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದರೆ ಅವರ್ಯರು ರೈತರಲ್ಲ. ಭಾರತವನ್ನು ಇಬ್ಬಾಗ ಮಾಡಲು ನೋಡುತ್ತಿರುವ ಭಯೋತ್ಪಾದಕರು. ಇದರಿಂದ ದುರ್ಬಲಗೊಳ್ಳುವ ಭಾರತವನ್ನು ಚೀನಾ ಸ್ವಾಧೀನ ಪಡಿಸಿಕೊಂಡು ಅಮೆರಿಕದಂತೆ ಚೀನಿ ವಸಾಹತು ಮಾಡಬಹುದು. ಮೂರ್ಖರೇ ಕುಳಿತುಕೊಳ್ಳಿ. ನಿಮ್ಮಂತೆಯೇ ನಾವು ನಮ್ಮ ರಾಷ್ಟ್ರವನ್ನು ಮಾರಾಟ ಮಾಡುತ್ತಿಲ್ಲ' ಎಂದು ಹೇಳಿದ್ದಾರೆ.

  English summary
  After Rihanna, ex porn star Mia Khalifa external Supports Farmers protest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X