ಬಂದೇ ಬಿಡ್ತು ಆಲಿಯಾ ಭಟ್ ಹಾಲಿವುಡ್ ಸಿನಿಮಾ ಟ್ರೈಲರ್
ಆಲಿಯಾ ಭಟ್ ನಟಿಸಿರುವ ಮೊದಲ ಹಾಲಿವುಡ್ ಸಿನಿಮಾ 'ಹಾರ್ಟ್ ಆಫ್ ಸ್ಟೋನ್' ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದೆ.
ಹಾಲಿವುಡ್‌ನ ಖ್ಯಾತನಾಮ ತಾರೆಯರಾದ ಗಲ್ ಗಡೋಟ್ ಹಾಗೂ ಜೇಮಿ ಡೋರ್ನಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ ಆಲಿಯಾ ಭಟ್. ಇದೀಗ ಬಿಡುಗಡೆ ಆಗಿರುವ ಟ್ರೈಲರ್‌ನಲ್ಲಿಯೂ ಅದ್ಭುತವಾಗಿ ಕಾಣುತ್ತಿದ್ದಾರೆ ಆಲಿಯಾ.
'ವಂಡರ್ ವುಮನ್' ಗಲ್ ಗಡೊಟ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಹಾರ್ಟ್ ಆಫ್ ಸ್ಟೋನ್' ನಲ್ಲಿ ಆಲಿಯಾ ಭಟ್ ಸಹ ನಟಿಸಿದ್ದು ಇಂದು ಬಿಡುಗಡೆ ಆಗಿರುವ ಟ್ರೈಲರ್ ಗಮನ ಸೆಳೆಯುತ್ತಿದೆ. ಟ್ರೈಲರ್‌ನಲ್ಲಿ ಗಲ್ ಗಡೋಟ್ ದುಷ್ಟರ ವಿರುದ್ಧ ಫೈಟ್ ಮಾಡುತ್ತಿದ್ದಾರೆ. ಜೊತೆಗೆ ಆಲಿಯಾ ಭಟ್ ಸಹ!

ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಎಂಬುದು ಟ್ರೈಲರ್‌ನಿಂದ ಸ್ಪಷ್ಟವಾಗುತ್ತಿದೆ. ಆದರೆ ಆಲಿಯಾ ಭಟ್ ನಾಯಕಿಯೊ ಅಥವಾ ವಿಲನ್ ಗ್ಯಾಂಗ್‌ನಲ್ಲಿದ್ದಾರೊ ತಿಳಿಯುತ್ತಿಲ್ಲ. ಆದರೆ ನಾಯಕಿಯಂತೂ ಗಲ್ ಗಡೋಟ್ ಆಗಿದ್ದಾರೆ.
ಸಿನಿಮಾದಲ್ಲಿ ಮಹಿಳೆಯರೇ ಪ್ರಧಾನ ಪಾತ್ರದಲ್ಲಿರುವುದು ಸಹ ಟ್ರೈಲರ್‌ನಿಂದ ತಿಳಿಯುತ್ತಿದೆ. ಗಲ್ ಗಡೋಟ್ ಲೀಡ್‌ನಲ್ಲಿದ್ದಾರೆ. 'ಹಾರ್ಟ್ ಆಫ್ ಸ್ಟೋನ್' ಸಿನಿಮಾದ ಬಗ್ಗೆ ಟ್ರೈಲರ್‌ನಲ್ಲಿ ಮಾತನಾಡಿರುವ ಗಲ್ ಗಡೊಟ್, ''ಈ ಸಿನಿಮಾ ಒಂದು ಹೊಸ ಆಕ್ಷನ್ ಥ್ರಿಲ್ಲರ್ ಅನುಭವ ನೀಡಲಿದೆ. ನಾವು ರಿಯಲಿಸ್ಟಿಕ್ ಆಕ್ಷನ್ ಸೀಕ್ವೆನ್ಸ್‌ಗಳಿಗೆ ಹೆಚ್ಚು ಗಮನ ವಹಿಸಿದ್ದೇವೆ. ಪ್ರೇಕ್ಷಕರಿಗೂ ಅದರ ಅನುಭವ ಆಗಲೆಂದು ಹೀಗೆ ಮಾಡಿದ್ದೇವೆ'' ಎಂದಿದ್ದಾರೆ.
ಟ್ರೈಲರ್ ನಲ್ಲಿ ಮಾತನಾಡಿರುವ ಆಲಿಯಾ ಭಟ್, ''ಈ ಸಿನಿಮಾದಲ್ಲಿ ಅದ್ಭುತವಾದ ಪಾತ್ರಗಳಿವೆ. ಪಾತ್ರಗಳೊಟ್ಟಿಗೆ ಪ್ರೇಕ್ಷಕರು ಕನೆಕ್ಟ್ ಆಗುತ್ತಾರೆ'' ಎಂದಿದ್ದಾರೆ. ನಟ ಜೇಮಿ ಡೋರ್ನಾನ್ ಸಹ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ''ಈ ಸಿನಿಮಾವನ್ನು ಬಹಳ ದೊಡ್ಡ ಬಜೆಟ್‌ನಲ್ಲಿ, ಬೃಹತ್ ಆಗಿ ಮಾಡಲಾಗುತ್ತಿದೆ'' ಎಂದಿದ್ದಾರೆ.
'ಹಾರ್ಟ್ ಆಫ್ ಸ್ಟೋನ್' ಸಿನಿಮಾವನ್ನು ಟಾಮ್ ಹಾರ್ಪರ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಪೀಕಿ ಬ್ಲೆಂಡರ್ಸ್' ವೆಬ್ ಸರಣಿಯ ಕೆಲವು ಎಪಿಸೋಡ್‌ಗಳನ್ನು ಅವರು ನಿರ್ದೇಶಿಸಿದ್ದರು. ಜೊತೆಗೆ ಹಲವು ಆಕ್ಷನ್ ಹಾಗೂ ಹಾರರ್ ಸಿನಿಮಾಗಳನ್ನೂ ಸಹ ನಿರ್ದೇಶನ ಮಾಡಿದ್ದಾರೆ. 'ಹಾರ್ಟ್ ಆಫ್ ಸ್ಟೋನ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮುಂದಿನ ವರ್ಷ ತೆರೆಗೆ ಬರಲಿದೆ.
ಆಲಿಯಾ ಭಟ್ ಗರ್ಭಿಣಿ ಆಗಿದ್ದಾಗಲೇ 'ಹಾರ್ಟ್ ಆಫ್ ಸ್ಟೋನ್' ಸಿನಿಮಾದಲ್ಲಿ ನಟಿಸಿದ್ದಾರೆ. ಅದೇ ಕಾರಣಕ್ಕೋ ಏನೋ ಈಗ ಟ್ರೈಲರ್‌ನಲ್ಲಿ ಸಹ ಆಲಿಯಾ ಭಟ್‌ರ ಕ್ಲೋಸ್ ಅಪ್ ಶಾಟ್‌ಗಳು ಮಾತ್ರ ಇವೆ. ಬಿಡುವು ಪಡೆವ ಮುನ್ನವೇ ಸಿನಿಮಾದ ಚಿತ್ರೀಕರಣ ಮುಗಿಸಿದ್ದರು ಆಲಿಯಾ.
'ಹಾರ್ಟ್ ಆಫ್ ಸ್ಟೋನ್' ಸಿನಿಮಾ ಮಾತ್ರವೇ ಅಲ್ಲದೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾವನ್ನು ಸಹ ಆಲಿಯಾ ಭಟ್ ಮುಗಿಸಿದ್ದಾರೆ. ರಣ್ವೀರ್ ಸಿಂಗ್ ಜೊತೆಗೆ ಈ ಸಿನಿಮಾದಲ್ಲಿ ನಟಿಸಿದ್ದಾರೆ ಆಲಿಯಾ. ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾದ ಟ್ರೈಲರ್ ಸಹ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.


Click it and Unblock the Notifications











