ಗುಪ್ತಾಂಗಕ್ಕೆ ಮದ್ಯದ ಬಾಟಲಿ ತುರುಕಿ ಚಿತ್ರಹಿಂಸೆ: ಸ್ಟಾರ್ ನಟನ ವಿರುದ್ಧ ಮಾಜಿ ಪತ್ನಿ ಆರೋಪ
ಹಾಲಿವುಡ್‌ನ ಖ್ಯಾತ ನಟ ಜಾನಿ ಡೆಪ್ ಹಾಗೂ ಮಾಜಿ ಪತ್ನಿ ಎಂಬರ್ ಹೆರಾಡ್ ನಡುವಿನ ಪರಸ್ಪರ ಮಾನನಷ್ಟ ಪ್ರಕರಣ ದೊಡ್ಡದಾಗಿದೆ. ಜಾನಿ ಡೆಪ್ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಕೌಟುಂಬಿಕ ಹಿಂಸೆ ಆರೋಪವನ್ನು ನಟಿ ಎಂಬರ್ ಹೆರಾಡ್ ಮಾಡಿದ್ದಾರೆ.
ಪ್ರಕರಣವು ವರ್ಜೀನಿಯಾದ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಎಂಬರ್ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ, 2016 ರಲ್ಲಿ ಆಸ್ಟ್ರೇಲಿಯಾದಲ್ಲಿ ಎಂಬರ್ ವಿರುದ್ಧ ಲೈಂಗಿಕ ಹಿಂಸಾಚಾರವನ್ನು ಜಾನಿ ಡೆಪ್ ಮಾಡಿರುವುದಾಗಿ ಹೇಳಿದ್ದಾರೆ.
2016ರ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಸತತ ಮೂರು ದಿನ ಜಾನಿ ಡೆಪ್ ಕುಡಿತ ಹಾಗೂ ಮಾದಕ ವಸ್ತುವಿನ ಮತ್ತಿನಲ್ಲಿದ್ದ. ಅಂದು ಎಂಬರ್ ಧರಿಸಿದ್ದ ನೈಟ್ ಡ್ರೆಸ್ ಅನ್ನು ಹರಿದು ಮನೆಯಲ್ಲಿಯೇ ಇದ್ದ ಬಾರ್ ಸೆಕ್ಷನ್ ಬಳಿ ಕರೆದುಕೊಂಡು ಹೋಗಿ ಬಾಟಲಿಯೊಂದನ್ನು ಆಕೆಯ ಗುಪ್ತಾಂಗಕ್ಕೆ ತುರುಕಿದ್ದ. ಈ ರೀತಿಯ ಇನ್ನೂ ಅನೇಕ ಹಿಂಸೆಗಳನ್ನು ಜಾನಿ ಡೆಪ್ ನೀಡಿದ್ದಾನೆ ಎಂದು ಎಂಬರ್ ಪರ ವಕೀಲರು ಹೇಳಿದ್ದಾರೆ.

ಆದರೆ ಜಾನಿ ಡೆಪ್ ಪರ ವಕೀಲರು ಇದನ್ನು ಅಲ್ಲಗಳೆದಿದ್ದು, ಜಾನಿ ಡೆಪ್ ಒಬ್ಬ ಜಂಟಲ್‌ಮೆನ್, ಆತ ದಶಕಗಳಿಂದಲೂ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದು, ಈವರೆಗೆ ಒಂದು ಬಾರಿಯೂ ಜಾನಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬಂದಿಲ್ಲ ಎಂದಿದ್ದಾರೆ. ಅಲ್ಲದೆ, ಎಂಬರ್ ಈ ಹಿಂದೆ ದೂರು ನೀಡಿದಾಗ, ವಿಚ್ಛೇಧನದ ಅರ್ಜಿ ಹಾಕಿದಾಗ ಜಾನಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರಲಿಲ್ಲ. ಆದರೆ ಈಗ ಜಾನಿ ಮಾನನಷ್ಟ ಮೊಕದ್ದಮೆ ಹೂಡಿದ ಬಳಿಕ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ ಇದು ಕಪೋಲ ಕಲ್ಪಿತ ಎಂದಿದ್ದಾರೆ.
ಜಾನಿ ಡೆಪ್ ಸಹ ಎಂಬರ್ ವಿರುದ್ಧ ಆರೋಪ ಮಾಡಿದ್ದು, ಆಕೆಯದ್ದು ಆಕ್ರಮಣಕಾರಿ ಮನೋಭಾವ ಎಂದಿದ್ದಾರೆ. ಒಮ್ಮೆ ವೋಡ್ಕಾ ಬಾಟಲಿಯೊಂದನ್ನು ನನ್ನೆಡೆಗೆ ಎಸೆದಳು. ಅದು ನನ್ನ ಮುಂಗೈಗೆ ಬಿದ್ದು ಒಡೆದು ಹೋಯಿತು. ಇದರಿಂದ ನನ್ನ ಬೆರಳಿನ ಮೇಲ್ಬಾಗ ಕತ್ತರಿಸಿ ಹೋಯ್ತು ಎಂದಿದ್ದಾರೆ. ಅದೇ ದಿನ ನನ್ನ ಬಳಿ ಇದ್ದ 450 ಕೋಟಿಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾಗಿಯೂ ಹೇಳಿದ್ದಾರೆ.

ಎಂಬರ್, ವಾಷಿಂಗ್ಟನ್ ಪೋಸ್ಟ್‌ಗೆ ಬರೆದಿದ್ದ ಲೇಖನಿಯೊಂದರಲ್ಲಿ ಜಾನಿ ಹೆಸರು ಉಲ್ಲೇಖಿಸದೆ ತಾನು ಲೈಂಗಿಕ ಹಿಂಸಾಚಾರಕ್ಕೆ ಒಳಗಾಗಿರುವುದಾಗಿ ಹೇಳಿದ್ದರು. ಇದರಿಂದ ಅಸಮಾಧಾನಗೊಂಡ ಜಾನಿ ಡೆಪ್, ಎಂಬರ್ ವಿರುದ್ಧ 381 ಕೋಟಿ ರುಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಎಂಬರ್ ಸಹಾಯಕಿ ಸಹ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದು, ಸಾಕ್ಷ್ಯವು ಎಂಬರ್ ವಿರುದ್ಧವಾಗಿಯೇ ಇದೆ. ಜಾನಿ ಡೆಪ್, ಎಂಬರ್ ಮೇಲೆ ಹಲ್ಲೆ ಮಾಡಿದ್ದಾರೆಂದರೆ ನಂಬಲು ಸಾಧ್ಯವಿಲ್ಲ ಎಂದು ಆಕೆ ಹೇಳಿಕೆ ನೀಡಿದ್ದಾಳೆ. ಇದು ಎಂಬರ್‌ಗೆ ಇನ್ನಷ್ಟು ಹಿನ್ನಡೆ ಮಾಡಿದೆ.
'ಪೈರೇಟ್ಸ್ ಆಫ್ ಕೆರೇಬಿಯನ್' ಸಿನಿಮಾದ ನಾಯಕ ಜಾಕ್ ಸ್ಪಾರೊ ಪಾತ್ರಧಾರಿಯಾಗಿ ಜಾನಿ ಡೆಪ್ ವಿಶ್ವದೆಲ್ಲೆಡೆ ಹೆಸರು ಮಾಡಿದ್ದಾರೆ. ಹಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು ಜಾನಿ ಡೆಪ್.
ಜಾನಿ ಡೆಪ್ ಹಾಗೂ ಎಂಬರ್ ಒಟ್ಟಿಗೆ 'ದಿ ರಮ್ ಡೈರಿ' ಸಿನಿಮಾದಲ್ಲಿ ನಟಿಸಿದ್ದರು. ಬಳಿಕ 2015 ರಲ್ಲಿ ಇಬ್ಬರೂ ವಿವಾಹವಾದರು. ಬಳಿಕ ಒಂದೇ ವರ್ಷಕ್ಕೆ ವಿಚ್ಛೇಧನ ಪಡೆದುಕೊಂಡರು. ಬಳಿಕ ಎಂಬರ್ ಟೆಸ್ಲಾ ಸಂಸ್ಥೆಯ ಮಾಲೀಕ, ವಿಶ್ವದ ಅತಿ ಶ್ರೀಮಂತರಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಜೊತೆ ಸಂಬಂಧದಲ್ಲಿದ್ದರು. ಎಲಾನ್ ಮಸ್ಕ್‌ನಿಂದ ಸಂದೇಶ ಬಂದ ಬಳಿಕವೇ ಎಂಬರ್ ಹಾಗೂ ಜಾನಿ ನಡುವೆ ಜಗಳವಾಯಿತು ಎನ್ನುವ ಸಾಕ್ಷಿಗಳನ್ನು ಸಹ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಪ್ರಸ್ತುತ ಎಂಬರ್, ಬಿಯಾಂಕ್ ಬಿಟ್ಟಿ ಎಂಬಾತನನ್ನು ಡೇಟ್ ಮಾಡುತ್ತಿದ್ದಾರೆ.


Click it and Unblock the Notifications











