ಜಾನಿ ಡೆಪ್ ಹಾಸಿಗೆ ಮೇಲೆ ಮಲ ವಿಸರ್ಜಿಸಿದ್ದ ಮಾಜಿ ಪತ್ನಿ ಅಂಬರ್!?

ಮೇಲ್ನೋಟಕ್ಕೆ ಸಂಭಾವಿತರಂತೆಯೂ, ಥಳುಕು-ಬಳುಕಾಗಿ ಕಾಣುವ ಎಷ್ಟೋ ಮಂದಿ ಸ್ಟಾರ್‌ಗಳ ಖಾಸಗಿ ಜೀವನ ಕೊಳತು ನಾರುತ್ತಿರುತ್ತದೆ, ಇದಕ್ಕೆ ತಾಜಾ ಉದಾಹರಣೆ ವಿಶ್ವ ಮಟ್ಟದ ಸ್ಟಾರ್ ನಟ ಜಾನಿ ಡೆಪ್ ಹಾಗೂ ಅವರ ಮಾಜಿ ಅಂಬರ್ ಹರ್ಡ್.

ಸಾಮಾನ್ಯ ಜನರಿಗೆ ಊಹಿಸಲೂ ಆಗದಷ್ಟು ಕೆಟ್ಟ ರೀತಿಯಲ್ಲಿ ಈ ಮಾಜಿ ಪತಿ-ಪತ್ನಿ ತಮ್ಮ ಖಾಸಗಿ ಜೀವನದಲ್ಲಿ ವರ್ತಿಸಿದ್ದಾರೆ. ಅದರಲ್ಲಿಯೂ ಡೆಪ್‌ರ ಮಾಜಿ ಪತ್ನಿ ಅಂಬರ್ ಹರ್ಡ್‌ ಅಂತೂ ವ್ಯಕ್ತಿ ಗೌರವದ ಎಲ್ಲ ಎಲ್ಲೆಯನ್ನೂ ದಾಟಿ ವರ್ತಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬರುತ್ತಿದೆ.

ಹಲವು ದಿನಗಳಿಂದಲೂ ಜಾನಿ ಡೆಪ್ ಹಾಗೂ ಅಂಬರ್ ಹರ್ಡ್‌ ನಡುವಿನ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ಜಾರಿಯಲ್ಲಿದೆ. ಇಬ್ಬರೂ ಸಹ ಒಬ್ಬರ ಮೇಲೊಬ್ಬರ ನೀಚ, ಕೆಳಮಟ್ಟದ ಆರೋಪಗಳನ್ನು ಮಾಡುತ್ತಿದ್ದಾರೆ.

Amber Heard And Jhonny Depp Case Getting Worse Day By Day

'ಜಾನಿ ಡೆಪ್ ಮದ್ಯದ ಬಾಟಲಿಯನ್ನು ನನ್ನ ಜನನಾಂಗದಲ್ಲಿ ತುರುಕಿದ್ದ'' ಎಂದು ಅಂಬರ್ ಹರ್ಡ್‌ ಆರೋಪ ಮಾಡಿದ್ದರು. ಈಗ ಜಾನಿ ಡೆಪ್, ''ಅಂಬರ್, ನಾನು ಮಲಗುವ ಹಾಸಿಗೆ ಮೇಲೆ ಮಲ ವಿಸರ್ಜನೆ ಮಾಡಿದ್ದಳು'' ಎಂದು ಆರೋಪಿಸಿದ್ದಾರೆ.

ಮಲ ವಿಸರ್ಜನೆ ಆರೋಪದ ಬಗ್ಗೆ ತೆರೆದ ನ್ಯಾಯಾಲಯದಲ್ಲಿ ಅಂಬರ್ ಹರ್ಡ್‌ ಅನ್ನು ವಿಚಾರಣೆಗೆ ಸಹ ಒಳಪಡಿಸಲಾಯಿತು. ಡೆಪ್ ಪರ ವಕೀಲರು ಪಾಟಿ ಸವಾಲಿನ ವೇಳೆ ಅಂಬರ್‌ಗೆ ಈ ಕುರಿತಾಗಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅಂಬರ್, ''ಡೆಪ್ ಹಾಸಿಗೆ ಮೇಲೆ ನಾನು ಮಲ ವಿಸರ್ಜನೆ ಮಾಡಿರಲಿಲ್ಲ. ನಾನು ಸಾಕಿದ್ದ ನಾಯಿ ಮಲ ವಿಸರ್ಜನೆ ಮಾಡಿತ್ತು'' ಎಂದಿದ್ದಾರೆ.

ಮಾನನಷ್ಟ ಮೊಕದ್ದಮೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅಂಬರ್, ''ನಾನು ಅನುಭವಿಸಿದ ಕಷ್ಟದ, ನೋವಿನ ದಿನಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಂತೆ ಈ ಪ್ರಕರಣ ಮಾಡುತ್ತಿದೆ. ಈ ಪ್ರಕರಣದ ಮೂಲಕ ನನಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ'' ಎಂದಿದ್ದಾರೆ.

ವಿಚಾರಣೆ ಸಂದರ್ಭ ತಮ್ಮ ಹಾಗೂ ಇಲಾನ್ ಮಸ್ಕ್‌ ನಡುವಿನ ಪರಿಚಯ, ಸ್ನೇಹದ ಬಗ್ಗೆಯೂ ಮಾತನಾಡಿದ್ದಾರೆ. ಇಲಾನ್ ಮಸ್ಕ್ ಹಾಗೂ ಅಂಬರ್ ಹರ್ಡ್‌ ಕೆಲ ವರ್ಷ ಡೇಟಿಂಗ್ ಮಾಡಿದ್ದರು. ಬಳಿಕ ಇಬ್ಬರೂ ದೂರಾದರು.

ಇಲಾನ್ ಬಗ್ಗೆ ವಿಚಾರಣೆ ವೇಳೆ ಮಾತನಾಡಿರುವ ಅಂಬರ್, ''ನಾವಿಬ್ಬರೂ ಮೆಟ್ ಗಾಲಾನಲ್ಲಿ ಭೇಟಿ ಆದೆವು. ಮೊದಲಿಗೆ ನಾನು ಇಲಾನ್ ಅನ್ನು ಗುರುತಿಸಲಿಲ್ಲ. ಕೆಲ ಕಾಲ ಮಾತನಾಡಿದ ಬಳಿಕ ನನಗೆ ಗೊತ್ತಾಯಿತು, ಆತ ಇಲಾನ್ ಮಸ್ಕ್ ಎಂಬುದು. ನಾವು ರೆಡ್ ಕಾರ್ಪೆಟ್‌ಗೆ ಹೋಗುವ ಮುನ್ನ ಕೆಲ ಕಾಲ ಮಾತನಾಡಿದೆವು ಆತ ಜಂಟಲ್‌ಮ್ಯಾನ್ ಎಂದು ನನಗೆ ಅನಿಸಿತು'' ಎಂದಿದ್ದಾರೆ.

ಜಾನಿ ಡೆಪ್‌ ಜೊತೆ ವಿಚ್ಛೇದನದ ಬಳಿಕ ಅಂಬರ್ ಹರ್ಡ್, ಇಲಾನ್ ಮಸ್ಕ್‌ ಜೊತೆ ಸಂಬಂಧದಲ್ಲಿದ್ದರು. ಜಾನಿ ಡೆಪ್‌ ಜೊತೆ ವಿಚ್ಛೇದನಕ್ಕೆ ಇಲಾನ್ ಜೊತೆಗಿನ ಸಂಬಂಧವೇ ಕಾರಣ ಎಂಬ ಆರೋಪವೂ ಇದೆ. ಇಲಾನ್ ಮಸ್ಕ್‌, ಅಂಬರ್‌ಗೆ ಮಾಡಿದ್ದ ಸಂದೇಶಗಳನ್ನು ಸಹ ಈ ಹಿಂದೆ ವಿಚಾರಣೆ ಸಮಯದಲ್ಲಿ ನ್ಯಾಯಾಲಯದಲ್ಲಿ ಓದಲಾಗಿತ್ತು. ಆ ಸಂದೇಶಗಳಲ್ಲಿ ಅಂಬರ್, ಜಾನಿ ಬಗ್ಗೆ ಇಲಾನ್ ಬಳಿ ದೂರುಗಳನ್ನು ಹೇಳಿರುವುದು ಬೆಳಕಿಗೆ ಬಂದಿತ್ತು.

ಅಂಬರ್ ಹರ್ಡ್‌ 2010 ರಲ್ಲಿ ಫೊಟೊಗ್ರಾಫರ್ ತಾಸ್ಯಾ ವಾನ್ ರೀ ಹೆಸರಿನ ಮಹಿಳೆಯೊಟ್ಟಿಗೆ ಸಂಬಂಧದಲ್ಲಿದ್ದರು. ನಂತರ ಅವರ ಮೇಲೆ ಹಲ್ಲೆ ಮಾಡಿದ ಕಾರಣ ಅಂಬರ್ ಅನ್ನು ಬಂಧಿಸಲಾಗಿತ್ತು. ನಂತರ ಜಾನಿ ಡೆಪ್ ಅನ್ನು ವಿವಾಹವಾದರು. ಆ ಬಳಿಕ ಜಾನಿ ಡೆಪ್ ಸಹ ಅಂಬರ್ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದರು. ಅಂಬರ್‌, ಜಾನಿ ಡೆಪ್‌ಗೆ ಮದ್ಯದ ಬಾಟಲಿಯಿಂದ ಹೊಡೆದ ಪರಿಣಾಮ ಅವರ ಕೈ ಬೆರಳು ಕತ್ತರಿಸಿ ಹೋಗಿತ್ತು.

ಜಾನಿ ಡೆಪ್ ಹಾಗೂ ಅಂಬರ್ ಹರ್ಡ್‌ 2016 ರಲ್ಲಿಯೇ ವಿಚ್ಛೇದನ ಪಡೆದಿದ್ದಾರೆ. ಆದರೆ ವಿಚ್ಛೇದನದ ಬಳಿಕ 2018 ರಲ್ಲಿ ಅಂಬರ್ ಹರ್ಡ್‌ ವಾಷಿಂಗ್ಟನ್ ಪೋಸ್ಟ್‌ ಪತ್ರಿಕೆಯಲ್ಲಿ ಬರೆದ ಅಂಕಣದಲ್ಲಿ ತಾವು ಗೃಹ ಹಿಂಸೆಗೆ ಒಳಪಟ್ಟಿರುವುದಾಗಿ ಹೇಳಿದ್ದರು. ಇದರ ವಿರುದ್ಧ ಜಾನಿ ಡೆಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅದರ ವಿಚಾರಣೆ ಈಗ ನಡೆಯುತ್ತಿದೆ.

More from Filmibeat

English summary
Amber Heard and Jhonny Depp case getting worse day by day. Jhonny Depp lawyer alleged that Amber Heard Defecating In Johnny Depp's Bed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X