twitter
    For Quick Alerts
    ALLOW NOTIFICATIONS  
    For Daily Alerts

    ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಎಮಿ ಪ್ರಶಸ್ತಿ

    |

    ನೊಬೆಲ್ ಶಾಂತಿ ಪುರಸ್ಕಾರ ಪಡೆದಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಇದೀಗ ಎಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗೆ ಎಮಿ ಪಡೆದಿರುವ ಎರಡನೇ ಅಮೆರಿಕದ ಅಧ್ಯಕ್ಷ ಎನಿಸಿಕೊಂಡಿದ್ದಾರೆ ಒಬಾಮಾ.

    ಶನಿವಾರ ರಾತ್ರಿ ನಡೆದ ಎಮಿ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಬರಾಕ್ ಒಬಾಮಾಗೆ ಎರಡು ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ 'ಅವರ ಗ್ರೇಟ್ ನ್ಯಾಷನಲ್ ಪಾರ್ಕ್ಸ್' ಡಾಕ್ಯುಸೀರೀಸ್‌ಗೆ ಒಬಾಮಾ ನರೇಶನ್ ನೀಡಿದ್ದಾರೆ. ಈ ನರೇಶನ್‌ಗಾಗಿ ಒಬಾಮಾಗೆ ಎಮಿ ದೊರೆತಿದೆ.

    ಅದು ಮಾತ್ರವೇ ಅಲ್ಲದೆ ಒಬಾಮಾ ಹಾಗೂ ಪತ್ಮಿ ಮಿಶೆಲ್ ಒಬಾಮಾ ಸೇರಿ ನಿರ್ಮಾಣ ಮಾಡಿರುವ 'ಹೈಯರ್ ಗ್ರೌಂಡ್' ಡಾಕ್ಯುಮೆಂಟರಿಗೂ ಎಮಿ ಪ್ರಶಸ್ತಿ ದೊರೆತಿದೆ. ಈ ಹಿಂದೆ ಬರಾಕ್ ಒಬಾಮಾಗೆ ಎರಡು ಗ್ರ್ಯಾಮಿ ಪ್ರಶಸ್ತಿ ಸಹ ದೊರೆತಿವೆ. ಅಮೆರಿಕದ ಎಲ್ಲ ಮನೊರಂಜನಾ ಪ್ರಶಸ್ತಿ ಪಡೆಯಲು ಇನ್ನೆರಡು ಪ್ರಶಸ್ತಿಗಳನ್ನು ಬರಾಕ್ ಒಬಾಮಾ ಪಡೆಯಬೇಕಿದೆ.

    America Former President Barak Obama Won Two Emmy Awards

    ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಡ್ವೈಟ್ ಡಿ ಎಸೆನ್‌ಹವರ್ ಅವರು 1956 ರಲ್ಲಿ ವಿಶೇಷ ಎಮ್ಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಆ ಮೂಲಕ ಎಮ್ಮಿ ಪ್ರಶಸ್ತಿ ಪಡೆದ ಎರಡನೇ ಅಮೆರಿಕ ಅಧ್ಯಕ್ಷ ಎಂಬ ಬಿರುದಿಗೆ ಬರಾಕ್ ಒಬಾಮಾ ಭಾಜನರಾಗಿದ್ದಾರೆ.

    ಬರಾಕ್ ಒಬಾಮಾ ಈ ಹಿಂದೆ 'ಅಡಾಸಿಟಿ ಆಫ್ ಹೋಪ್' 'ಎ ಪ್ರಾಮಿಸ್ ಲ್ಯಾಂಡ್' ಪುಸ್ತಕಗಳನ್ನು ಓದಿ ಆಡಿಯೋ ಬುಕ್ ಮಾಡಿದ್ದಕ್ಕಾಗಿ ಎರಡು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಆಸ್ಕರ್ ಹಾಗೂ ಟೋನಿ ಪ್ರಶಸ್ತಿಗಳನ್ನು ಒಬಾಮಾ ಪಡೆದುಕೊಂಡರೆ ಇಜಿಓಟಿ ಗೌರವಕ್ಕೆ ಭಾಜನರಾಗಲಿದ್ದಾರೆ. ಈ ಗೌರವಕ್ಕೆ ಅಮೆರಿಕದ ಹದಿನೇಳು ಮಂದಿ ಮಾತ್ರ ಈ ವರೆಗೆ ಭಾಜನರಾಗಿದ್ದಾರೆ.

    English summary
    America former president Barak Obama won two Emmy awards. He already won two grammy awards in past.
    Monday, September 5, 2022, 10:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X